ಇದೇ ತಿಂಗಳು ಬರ್ತಿದ್ದಾನೆ 'ಬ್ರಹ್ಮಾಚಾರಿ': ಹೊಟ್ಟೆಹುಣ್ಣಾಗುವಂತೆ ನಕ್ಕರೆ ಸತೀಶ್ ಜವಾಬ್ದಾರಿ ಅಲ್ವಂತೆ

ಸ್ಯಾಂಡಲ್ ವುಡ್ ಕ್ವಾಟ್ಲೆ ಸತೀಶ್ ಅಭಿನಯದ ಬಹು ನಿರೀಕ್ಷೆಯ 'ಬ್ರಹ್ಮಾಚಾರಿ' ಸಿನಿಮಾ ಇದೇ ತಿಂಗಳು ತೆರೆಗೆ ಬರಲು ಸಜ್ಜಾಗಿದೆ. ಟ್ರೈಲರ್ ಮೂಲಕ ಭಾರಿ ಕುತೂಹಲ ಮೂಡಿಸಿದ್ದ 'ಬ್ರಹ್ಮಾಚಾರಿ'ಯನ್ನು ನೋಡಲು ಚಿತ್ರಾಭಿಮಾನಿಗಳು ಕಾತರರಾಗಿದ್ದರು. ಯಾವಾಗ ತೆರೆಗೆ ಬರುತ್ತೆ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಸತೀಶ್ ಕಡೆಯಿಂದ ಸಿಹಿ ಸುದ್ದಿ ಸಿಕ್ಕಿದೆ.

'ಬ್ರಹ್ಮಾಚಾರಿ' ಇದೆ ತಿಂಗಳು ನವೆಂಬರ್ 29ಕ್ಕೆ ತೆರೆಗೆ ಬರುತ್ತಿದೆ. ಈ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಬಹಿರಂಗ ಪಡಿಸಿದೆ. 'ಹಿಡ್ಕ ಹಿಡ್ಕ ಒಸಿ....'ಎನ್ನುವ ಹಾಡಿನ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿರುವ 'ಬ್ರಹ್ಮಾಚಾರಿ' ಈಗ ಅಭಿಮಾನಿಗಳ ಮುಂದೆ ಬರುತ್ತಿದೆ.

Sathish Ninasam Starrer Brahmachari Will Release On November 29th

ನಟ ಸತೀಶ್ ಇಲ್ಲಿ ಮದುವೆಯಾದ ಬ್ರಹ್ಮಚಾರಿಯಾಗಿ ಕಾಣಿಸಿಕೊಂಡಿದ್ದಾರೆ. ಸತೀಸ್ ಪತ್ನಿಯ ಪಾತ್ರದಲ್ಲಿ ನಟಿ ಅದಿತಿ ಪ್ರಭುದೇವ ಕಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಚಂದ್ರ ಮೋಹನ್ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರಕ್ಕೆ ಉದಯ್ ಮೆಹ್ತಾ ಬಂಡವಾಳ ಹೂಡಿದ್ದಾರೆ. ಧರ್ಮ ವಿಶ್ ಸಂಗೀತ ಚಿತ್ರಕ್ಕಿದೆ.

ನಟ ಸತೀಶ್ ಸದ್ಯ 'ವೈತರಣಿ' ಚಿತ್ರಣದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರೀಕರಣಕ್ಕಾಗಿ ಲಂಡನ್ ನಲ್ಲಿ ಬೀಡುಬಿಟ್ಟಿದ್ದಾರೆ. ಸತೀಶ್ ಅಲ್ಲಿಂದನೆ ಚಿತ್ರ ನೋಡುವಂತೆ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ. "ನವೆಂಬರ್ 29ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ. ಹೊಟ್ಟೆಹುಣ್ಣಾಗುವಂತೆ ನಕ್ಕರೆ ನಾವು ಜವಾಬ್ದಾರರಲ್ಲ" ಎಂದು ಹೇಳಿದ್ದಾರೆ. ಅಂದ್ಮೇಲೆ ಚಿತ್ರದಲ್ಲಿ ಸಖತ್ ಕಾಮಿಡಿ ನಿರೀಕ್ಷೆ ಮಾಡಬಹುದು.

More from Filmibeat

English summary
Kannada actor Sathish Ninasam starrer Brahmachari movie will release on November 29th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X