ಸತೀಶ್ ನೀನಾಸಂ-ಕಾಂಪಲ್ಲಿಯ 'ಮ್ಯಾಟ್ನಿ' ಚಿತ್ರದ ಫಸ್ಟ್ ಲುಕ್
ಸತೀಶ್ ನೀನಾಸಂ ಮತ್ತು ಮನೋಹರ್ ಕಾಂಪಲ್ಲಿ ಕಾಂಬಿನೇಷನ್‌ನಲ್ಲಿ ಸಿನಿಮಾವೊಂದು ಶುರುವಾಗಿತ್ತು. ಕಥೆ ಹೇಳಿದ ತಕ್ಷಣ ಒಪ್ಪಿಕೊಂಡಿದ್ದರು ಸತೀಶ್. ಈ ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿರಲಿಲ್ಲ. ಇದೀಗ, ಚಿತ್ರದ ಶೀರ್ಷಿಕೆ ಮತ್ತು ಫಸ್ಟ್ ಲುಕ್ ಎರಡೂ ಅನಾವರಣವಾಗಿದೆ.
ಸತೀಶ್ ಮತ್ತು ಮನೋಹರ್ ಕಾಂಪಲ್ಲಿ ಜೋಡಿಯ ಚಿತ್ರಕ್ಕೆ 'ಮ್ಯಾಟ್ನಿ' ಎಂದು ಹೆಸರಿಟ್ಟಿದ್ದು, ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ಬಹಳ ಮನರಂಜನೆಯಿಂದ ಕೂಡಿರುವ ಈ ಪೋಸ್ಟರ್ ಸಖತ್ ಕಲರ್‌ಪುಲ್ ಆಗಿದ್ದು, ರೋಸ್, ಗನ್, ಫನ್ ಎಲ್ಲವೂ ಮಿಶ್ರಿತವಾಗಿರುವ ಸ್ಕ್ರಿಪ್ಟ್ ಇದು ಎಂಬ ಸುಳಿವು ನೀಡಿದೆ.
ಈ ಚಿತ್ರದ ಬಗ್ಗೆ ಈ ಹಿಂದೆಯೇ ಬರೆದುಕೊಂಡಿದ್ದ ಸತೀಶ್ ''ನನಗಾಗಿ ಕಥೆ ಬರೆಯುವ ನಿರ್ದೇಶಕರು, ವರ್ಷದಿಂದ ವರ್ಷಕ್ಕೆ ಹೆಚ್ಛಾಗಿದ್ದಾರೆ. ಈ ವರ್ಷ ಕೇಳಿದ, "ಮನೋಹರ್ ಕಾಂಪಲ್ಲಿ "ಅವರ ಕಥೆಗೆ, ಕೇಳಿದ ತಕ್ಷಣ ಓಕೆ ಎಂದಿದ್ದೇನೆ. ಅವರ 15 ವರ್ಷಗಳ ಅನುಭವಕ್ಕೆ ಜೊತೆಯಾಗಿ ಬಂಡವಾಳ ಹೂಡುತ್ತಿರುವ "ಪಾರ್ವತಿ", ಜೊತೆಗೆ ನಾನು ನಿಂತಿದ್ದೇನೆ. ಸದ್ಯದಲ್ಲೇ ಶೀರ್ಷಿಕೆ ಬಿಡುಗಡೆ. ನಿಮ್ಮೆಲ್ಲರ ಪ್ರೀತಿ ಎಂದಿನಂತೆ ಇರಲಿ'' ಎಂದು ತಿಳಿಸಿದ್ದರು.

ಅಂದ್ಹಾಗೆ, ಈ ಚಿತ್ರವನ್ನು ಪಾರ್ವತಿ ಎಂಬುವವರು ನಿರ್ಮಿಸುತ್ತಿದ್ದಾರೆ. ಪೂರ್ಣ ಚಂದ್ರ ತೇಜಸ್ವಿ ಈ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ. ಇನ್ನುಳಿದಂತೆ ನಾಯಕಿಯ ಆಯ್ಕೆ ಹಾಗೂ ಶೂಟಿಂಗ್ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಈ ಚಿತ್ರ ಬಿಟ್ಟರೆ, ಸತೀಶ್ ಅವರ ಕೈಯಲ್ಲಿ ಗೋದ್ರಾ, ಮೈ ನೇಮ್ ಈಸ್ ಸಿದ್ದೇಗೌಡ, ಪರಿಮಳ ಲಾಡ್ಜ್, ದಸರಾ, ಹಾಗೂ ಪೆಟ್ರೋಮ್ಯಾಕ್ಸ್ ಚಿತ್ರಗಳಿವೆ.


Click it and Unblock the Notifications











