For Quick Alerts
  ALLOW NOTIFICATIONS  
  For Daily Alerts

  12 ದಿನದಲ್ಲಿ 'ಪೆಟ್ರೋಮ್ಯಾಕ್ಸ್' ಮೊದಲ ಹಂತದ ಚಿತ್ರೀಕರಣ ಮುಕ್ತಾಯ

  |

  ಸತೀಶ್ ನೀನಾಸಂ ಮತ್ತು 'ನೀರ್‌ದೋಸೆ' ಖ್ಯಾತಿಯ ವಿಜಯ್ ಪ್ರಸಾದ್ ಕಾಂಬಿನೇಷನ್‌ನಲ್ಲಿ ತಯಾರಾಗುತ್ತಿರುವ 'ಪೆಟ್ರೋಮ್ಯಾಕ್ಸ್' ಚಿತ್ರದ ಮೊದಲ ಹಂತದ ಶೂಟಿಂಗ್ ಮುಗಿಸಿದೆ.

  ಕಳೆದ ಎರಡು ವಾರಗಳಿಂದ ಮೈಸೂರಿನಲ್ಲಿ ಚಿತ್ರೀಕರಣ ಮಾಡಲಾಗುತ್ತಿತ್ತು. ಕೇವಲ 12 ದಿನದಲ್ಲಿ ಮೊದಲ ಶೆಡ್ಯೂಲ್ ಯಶಸ್ವಿಯಾಗಿ ಮುಕ್ತಾಯವಾಗಿದೆ ಎಂದು ಸ್ವತಃ ಚಿತ್ರತಂಡ ಸಂತಸ ಹಂಚಿಕೊಂಡಿದೆ.

  ಮೈಸೂರಿನಲ್ಲಿ 'ಪೆಟ್ರೋಮ್ಯಾಕ್ಸ್' ಹಿಡಿದು ಓಡಾಡುತ್ತಿರುವ ಸತೀಶ್ ಮತ್ತು ಹರಿಪ್ರಿಯಾಮೈಸೂರಿನಲ್ಲಿ 'ಪೆಟ್ರೋಮ್ಯಾಕ್ಸ್' ಹಿಡಿದು ಓಡಾಡುತ್ತಿರುವ ಸತೀಶ್ ಮತ್ತು ಹರಿಪ್ರಿಯಾ

  ಮೈಸೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ಕಲಾವಿದರಿಗೆ ನಿರ್ದೇಶಕ ವಿಜಯ್ ಪ್ರಸಾದ್ ಖುಷಿಯಿಂದ ಬೀಳ್ಕೊಡುಗೆ ನೀಡಿದ್ದಾರೆ. ಮೊದಲ ಹಂತದ ಶೂಟಿಂಗ್‌ನಲ್ಲಿ ಸತೀಶ್ ನೀನಾಸಂ, ಹರಿಪ್ರಿಯಾ, ನಾಗಭೂಷಣ, ಕಾರುಣ್ ರಾಮ್ ಭಾಗವಹಿಸಿದ್ದರು.

  ಸತೀಶ್ ನೀನಾಸಂ ನಾಯಕರಾಗಿರುವ ಈ ಚಿತ್ರದಲ್ಲಿ ಹರಿಪ್ರಿಯಾ ನಾಯಕಿಯಾಗಿದ್ದಾರೆ. ಕಾರುಣ್ ರಾಮ್ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  SUPERSTAR SURYA Kannada Short Film Teaser | Rakshit | Praveen | Nikhil | Filmibeat Kannada

  ಅಂದ್ಹಾಗೆ, ವಿಜಯ್ ಪ್ರಸಾದ್ ಬಹಳ ಹಿಂದೆಯೇ 'ಪೆಟ್ರೋಮ್ಯಾಕ್ಸ್' ಸಿನಿಮಾ ಘೋಷಣೆ ಮಾಡಿದ್ದರು. 'ಸಿದ್ಲಿಂಗು' ಸಿನಿಮಾ ರಿಲೀಸ್ ಆದ ಬಳಿಕ ಈ ಸಿನಿಮಾ ಮಾಡುವುದಾಗಿ ಹೇಳಿದ್ದರು. ಆದರೆ ಅಲ್ಲಿಗೆ ನಿಂತುಹೋಗಿತ್ತು. ಬಳಿಕ ವಿಜಯ್ ಪ್ರಸಾದ್ 'ಪರಿಮಳ ಲಾಡ್ಜ್' ಸಿನಿಮಾ ಅನೌನ್ಸ್ ಮಾಡಿದ್ರು. ಅಲ್ಲದೆ ಟೀಸರ್ ಅನ್ನು ರಿಲೀಸ್ ಮಾಡಿದ್ದಾರೆ. ಇದೀಗ 'ಪರಿಮಳ ಲಾಡ್ಜ್' ಟೇಕಾಫ್ ಆಗುವ ಮೊದಲೇ ಪೆಟ್ರೇಮ್ಯಾಕ್ಸ್ ಸಿನಿಮಾ ಪ್ರಾರಂಭಿಸಿದ್ದಾರೆ.

  English summary
  Kannada actor Sathish Ninasam starrer Petromax Movie First Half Shooting Completed in 12 days.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X