ಹೊಸ ಸಾಹಸಕ್ಕೆ ಕೈ ಹಾಕಿದ ಸತೀಶ್ ನೀನಾಸಂ

ನಟ ಸತೀಶ್ ನೀನಾಸಂ ಈಗ ಮತ್ತೊಂದು ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ಸತೀಶ್ ಈಗ ಹೊಸ ಬ್ಯುಸಿನೆಸ್ ಶುರು ಮಾಡಿದ್ದಾರೆ. ಹಾಗಾದ್ರೆ ಕ್ವೀಟ್ಲೆ ಸತೀಶ್ ಸಿನಿಮಾ ಮಾಡೋದು ಬಿಟ್ಟು ಬಿಟ್ರಾ ಅಂತ ಅಂದ್ಕೋಬೇಡೆ. ಸತೀಶ್ ಹೊಸ ಆಡಿಯೋ ಕಂಪೆನಿ ಒಂದನ್ನು ಪ್ರಾರಂಭಿಸಿದ್ದಾರೆ.

ಹೌದು. ಸತೀಶ್ ಈಗ ಆಡಿಯೋ ಮಾರುಕಟ್ಟೆಗೂ ಲಗ್ಗೆ ಇಟ್ಟಿದ್ದಾರೆ. ಆಡಿಯೋ ಕಂಪೆನಿಗೆ 'ಸತೀಶ್ ಆಡಿಯೋ ಹೌಸ್' ಎಂದು ಹೆಸರಿಟ್ಟಿದ್ದಾರೆ. ಸದ್ಯ ಆಡಿಯೋ ಕಂಪೆನಿ ಶುರು ಮಾಡಿರುವ ಕ್ವಾಟ್ಲೆ ಸತೀಶ್ ತನ್ನ ಸಂಸ್ಥೆಯಿಂದ ಮೊದಲ ಆಡಿಯೋವನ್ನು ರಿಲೀಸ್ ಮಾಡುವ ತಯಾರಿಯಲ್ಲಿದ್ದಾರೆ. ಈ ಹೊಸ ಸಾಧನೆ ಬಗ್ಗೆ ಸತೀಶ್ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ.

ಸತೀಶ್ ನಿರ್ಮಾಣದ ಕಿರುಚಿತ್ರ 'ಕಾಜಿ'ಯ ಹಾಡುಗಳು ಸತೀಶ್ ಆಡಿಯೋ ಹೌಸ್ ನಿಂದ ರಿಲೀಸ್ ಆಗಲಿವೆ. ಅಂದ್ಹಾಗೆ ಕ್ವಾಟ್ಲೆ ಸತೀಶ್ ಈಗಾಗಲೆ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಿದ್ದರು. 2014ರಲ್ಲಿ ಸತೀಶ್ ಪಿಕ್ಟರ್ ಹೌಸ್ ಎನ್ನುವ ಪ್ರೊಡಕ್ಷನ್ ಸಂಸ್ಥೆ ಶುರು ಮಾಡಿದ್ದಾರೆ. ಸತೀಶ್ ಅಭಿನಯದ 'ರಾಕೆಟ್' ಸಿನಿಮಾ ಅವರದೆ ಬ್ಯಾನರ್ ನಲ್ಲಿ ಪ್ರಾರಂಭವಾದ ಮೊದಲ ಸಿನಿಮಾವಾಗಿದೆ.

Sathish Ninasam started audio business

ಅಯೋಗ್ಯ, ಚಂಬಲ್ ಸಿನಿಮಾಗಳ ಸಕ್ಸಸ್ ನಲ್ಲಿರುವ ಸತೀಶ್ ಈಗ ಬ್ರಹ್ಮಚಾರಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೆ ಚಿತ್ರೀಕರಣ ಪ್ರಾರಂಭವಾಗಿದ್ದು ಚಂದ್ರ ಮೋಹನ್ ನಿರ್ದೇಶನ ಮಾಡುತ್ತಿದ್ದಾರೆ. ಸತೀಶ್ ಗೆ ನಾಯಕಿಯಾಗಿ ಅದಿತಿಪ್ರಭುದೇವ ಕಾಣಿಸಿಕೊಳ್ಳುತ್ತಿದ್ದಾರೆ.

More from Filmibeat

English summary
Kannada actor Sathish Ninasam started audio business as Sathish Audio House. Sathish already started production compeny as Satish Picture House in 2014.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X