For Quick Alerts
  ALLOW NOTIFICATIONS  
  For Daily Alerts

  ತಮಿಳು ಸಿನಿಮಾದಲ್ಲಿ ಸತೀಶ್ ನೀನಾಸಂ; ಕಾಲಿವುಡ್ ಎಂಟ್ರಿಗೆ ದಿನಾಂಕ ನಿಗದಿ

  |

  ಇತ್ತೀಚಿನ ದಿನಗಳಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳು ಹೆಚ್ಚಾಗುತ್ತಿವೆ. ಕಲಾವಿದರು ಗಡಿಗೂ ಮೀರಿ ಖ್ಯಾತಿಗಳಿಸುವ ಜೊತೆಗೆ ಅಭಿಮಾನಿ ಬಳಗವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಕೇವಲ ಒಂದೇ ಭಾಷೆಗೆ ಸೀಮಿತವಾಗದೆ ಬೇರೆ ಬೇರೆ ಭಾಷೆಯಲ್ಲೂ ಮಿಂಚುವ ಮೂಲಕ ತನ್ನ ಖ್ಯಾತಿಯನ್ನು ವಿಸ್ತರಿಸಿಕೊಳ್ಳುತ್ತಿದ್ದಾರೆ.

  ಪ್ಯಾನ್ ಇಂಡಿಯಾ ಸಿನಿಮಾ ಜೊತೆಗೆ ಕಲಾವಿದರು ಸಹ ಬೇರೆ ಬೇರೆ ಭಾಷೆಯಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಕನ್ನಡದ ಸಾಕಷ್ಟು ಕಲಾವಿದರು ಬೇರೆ ಭಾಷೆಯಲ್ಲಿ ಮಿಂಚುತ್ತಿದ್ದಾರೆ. ಈ ಸಾಲಿಗೆ ಈಗ ನಟ ನೀನಾಸಂ ಸತೀಶ್ ಸಹ ಸೇರ್ಪಡೆಗೊಂಡಿದ್ದಾರೆ. ಹೌದು, ನಟ ನೀನಾಸಂ ಸತೀಶ್ ತಮಿಳು ಸಿನಿಮಾರಂಗಕ್ಕೆ ಕಾಲಿಟ್ಟಿದ್ದಾರೆ. ಸತೀಶ್ ಕಾಲಿವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ ಎನ್ನುವ ವಿಚಾರ ಈಗಾಗಲೇ ಸದ್ದು ಮಾಡುತ್ತಿತ್ತು. ಆದರೆ ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿರಲಿಲ್ಲ.

  ಪೆಟ್ರೋಮ್ಯಾಕ್ಸ್ ಸೆಟ್‌ಗೆ ಭೇಟಿ ನೀಡಿದ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬುಪೆಟ್ರೋಮ್ಯಾಕ್ಸ್ ಸೆಟ್‌ಗೆ ಭೇಟಿ ನೀಡಿದ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು

  ಇದೀಗ ತಮಿಳು ಸಿನಿಮಾರಂಗದ ಎಂಟ್ರಿಗೆ ಸಮಯ ನಿಗದಿಯಾಗಿದೆ. ಸತೀಶ್ ನಟಿಸುತ್ತಿರುವ ಚಿತ್ರಕ್ಕೆ 'ಪಗೆಮನುಕ್ಕು ಅರುಲ್ವಾಯ್' ಎಂದು ಶೀರ್ಷಿಕೆ ಇಡಲಾಗಿದ್ದು, ಚಿತ್ರಕ್ಕೆ ಅನೀಶ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅಂದಹಾಗೆ ಸತೀಶ್ ಮುಂದಿನ ವರ್ಷ ಜನವರಿಯಿಂದ ತಮಿಳು ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಲಿದ್ದಾರೆ.

  ಸತೀಶ್ ಜೊತೆ ಚಿತ್ರದಲ್ಲಿ ಖ್ಯಾತ ನಟ ಸಸಿಕುಮಾರ್ ನಟಿಸುತ್ತಿದ್ದಾರೆ. ಸಸಿಕುಮಾರ್ ಮತ್ತು ಸತೀಶ್ ನಡುವೆ ನೇರ ಹಣಾಹಣಿ ಇರಲಿದೆಯಂತೆ. ಚಿತ್ರದ ಬಹುತೇಕ ಭಾಗ ಜೈಲಿನಲ್ಲೇ ಚಿತ್ರೀಕರಣವಾಗಲಿದೆ ಎನ್ನಲಾಗುತ್ತಿದೆ. ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದ್ದು, ಸತೀಶ್ ಮುಂದಿನ ತಿಂಗಳಿಂದ ಎಂಟ್ರಿ ಕೊಡಲಿದ್ದಾರೆ.

  ಇದ್ದಕ್ಕಿದ್ದಂತೆ ಹೈದ್ರಾಬಾದ್ ಗೆ ಬಂದ ಧ್ರುವ ಸರ್ಜಾ, ನಂದಕಿಶೋರ್ | Filmibeat Kannada

  ಚಿತ್ರದಲ್ಲಿ ಸತೀಶ್ ಖೈದಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಪಾತ್ರಕ್ಕಾಗಿ ಸತೀಶ್ ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿದ್ದಾರೆ. ಸತೀಶ್ ನೀನಾಸಂ ಸದ್ಯ ಕನ್ನಡದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಪೆಟ್ರೊಮ್ಯಾಕ್ಸ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ದಸರಾ, ಮ್ಯಾಟ್ನಿ ಸಿನಿಮಾಗಳು ಸಾಲಿನಲ್ಲಿವೆ. ಇನ್ನೂ ಶ್ರದ್ಧಾ ಶ್ರೀನಾಥ್ ಜೊತೆ ನಟಿಸಿರುವ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ.

  English summary
  Kannada Actor Sathish Ninasam To Debut With Tamil Actor Sasikumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X