For Quick Alerts
  ALLOW NOTIFICATIONS  
  For Daily Alerts

  ಮಾರುವೇಷದಲ್ಲಿ ಮೈಸೂರು ದಸರಾ ವೀಕ್ಷಿಸಿದ ಸ್ಯಾಂಡಲ್‌ವುಡ್ ನಟ

  |

  ಮೈಸೂರು ನೋಡುವುದೇ ಒಂದು ಖುಷಿ. ದಸರಾ ಸಮಯದಲ್ಲಿ ಮೈಸೂರು ಸುತ್ತುವುದು ಅಂದ್ರೆ ಡಬಲ್ ಖುಷಿ. ಸೆಲೆಬ್ರಿಟಿಗಳು ಮುಕ್ತವಾಗಿ ದಸರಾ ವೀಕ್ಷಿಸುವುದು ಸವಾಲಿನ ವಿಷಯ ಬಿಡಿ. ಜನರು ನೋಡಿದ್ರೆ ಫೋಟೋ ಅಥವಾ ಮಾತನಾಡಿಸಬೇಕು ಎಂದು ಮುತ್ತಿಕೊಳ್ಳುತ್ತಾರೆ.

  ಇದೀಗ, ಮುಖಕ್ಕೆ ಮಾಸ್ಕ್ ಹಾಕ್ಕೊಂಡು ಸೆಲೆಬ್ರಿಟಿಗಳು ಮೈಸೂರು ಸುತ್ತಿದರೂ ಯಾರಿಗೂ ಗೊತ್ತಾಗಲ್ಲ. ಹೀಗೆ, ಸ್ಯಾಂಡಲ್ ವುಡ್ ನಟ ಸತೀಶ್ ನೀನಾಸಂ ಅವರು ಮಾರುವೇಷದಲ್ಲಿ ಮೈಸೂರು ದಸರಾ ವೀಕ್ಷಿಸಿದ್ದಾರೆ.

  ಸತೀಶ್ ನೀನಾಸಂ ವೃತ್ತಿ ಜೀವನದಲ್ಲಿ ಇಂದು ಮರೆಯಲಾಗದ ದಿನಸತೀಶ್ ನೀನಾಸಂ ವೃತ್ತಿ ಜೀವನದಲ್ಲಿ ಇಂದು ಮರೆಯಲಾಗದ ದಿನ

  ತಲೆಗೆ ಟೋಪಿ ಹಾಕ್ಕೊಂಡು, ಮುಖಕ್ಕೆ ಮಾಸ್ಕ್‌ ಹಾಕಿಕೊಂಡು ನಟ ಸತೀಶ್ ನೀನಾಸಂ ಮೈಸೂರು ರಸ್ತೆಯಲ್ಲಿ ವಾಕ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅದರ ವಿಡಿಯೋ ಸಹ ಹಂಚಿಕೊಂಡಿದ್ದಾರೆ.

  ಸತೀಶ್ ನೀನಾಸಂ ಅವರು ಮೈಸೂರಿನಲ್ಲಿ 'ಪೆಟ್ರೋಮ್ಯಾಕ್ಸ್' ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. 'ನೀರ್‌ದೋಸೆ' ಖ್ಯಾತಿಯ ವಿಜಯ್ ಪ್ರಸಾದ್ ಈ ಚಿತ್ರ ನಿರ್ದೇಶನ ಮಾಡುತ್ತಿದ್ದು, ಹರಿಪ್ರಿಯಾ ನಾಯಕಿಯಾಗಿ ನಟಿಸುತ್ತಿದ್ದಾರೆ.

  ಮತ್ತೆ ಶಾಲೆಗೆ ಸೇರಿದ ರಶ್ಮಿಕಾ ಮಂದಣ್ಣ | Pushpa | Allu Arjun | Filmibeat Kannada

  ಮನೋಹರ್ ಕಾಂಪಲ್ಲಿ ನಿರ್ದೇಶನದಲ್ಲಿ 'ಮ್ಯಾಟ್ನಿ' ಸಿನಿಮಾ ಸೆಟ್ಟೇರಿದ್ದು, ರಚಿತಾ ರಾಮ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಸದ್ಯ, ಬೆಂಗಳೂರಿನಲ್ಲಿ 'ಮ್ಯಾಟ್ನಿ' ಸಿನಿಮಾ ಚಿತ್ರೀಕರಣ ಮಾಡುತ್ತಿದೆ. ಇನ್ನು ಅರವಿಂದ್ ಶಾಸ್ತ್ರಿ ನಿರ್ದೇಶನದ 'ದಸರಾ' ಸಿನಿಮಾ ಚಿತ್ರೀಕರಣ ಸಹ ಬೆಂಗಳೂರಿನಲ್ಲಿ ಆರಂಭವಾಗಿದೆ. ಈ ಚಿತ್ರದಲ್ಲಿ ಶರ್ಮಿಳಾ ಮಾಂಡ್ರೆ ಮುತ್ತು ರುಕ್ಮಿಣಿ ವಿಜಯ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  English summary
  Kannada actor Sathish ninasam watched Mysore Dasara in night time.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X