For Quick Alerts
    ALLOW NOTIFICATIONS  
    For Daily Alerts

    ಬಿಗ್ ಬಜೆಟ್ ಚಿತ್ರದಲ್ಲಿ ಸತೀಶ್ ನೀನಾಸಂ

    |

    ನಟ ನೀನಾಸಂ ಸತೀಶ್ ಬ್ರಹ್ಮಚಾರಿ ಆಗಿ ಅನೇಕ ದಿನಗಳೆ ಆಗಿವೆ. ಈಗ ಹೊಸ ಸಿನಿಮಾದ ತಯಾರಿಯಲ್ಲಿದ್ದಾರೆ. ಹೌದು, ಸತೀಶ್ ಬ್ರಹ್ಮಚಾರಿ ಚಿತ್ರದಲ್ಲಿ ಅಭಿನಯಿಸುತ್ತಿರುವುದು ದಿನಗಳೆ ಆಗಿವೆ. ಬಹುತೇಕ ಚಿತ್ರೀಕರಣ ಮುಗಿಸಿರುವ ಬ್ರಹ್ಮಚಾರಿ ಈಗ ಟೀಸರ್ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದೆ.

    ಅದೆ ಖುಷಿಯಲ್ಲಿ ಸತೀಶ್ ಮತ್ತೊಂದು ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಕ್ವಟ್ಲೆ ಸತೀಶ್ ಹೊಸ ಸಿನಿಮಾ, ಅವರ ಹುಟ್ಟುಹಬ್ಬದ ದಿನ ಸೆಟ್ಟೇರಲಿದೆ. ಅಂದ್ಹಾಗೆ ಸತೀಶ್ ಅವರ ಹುಟ್ಟುಹಬ್ಬ ಇದೇ ತಿಂಗಳು 20ಕ್ಕೆ. ಅಂದೇ ಅವರ ಹೊಸ ಸಿನಿಮಾ ಕೂಡ ಅನೌನ್ಸ್ ಆಗಲಿದೆ.

    ಸತೀಶ್ ಹೊಸ ಚಿತ್ರಕ್ಕೆ ದೇವರಾಜ್ ಪೂಜಾರಿ ಆಕ್ಷನ್ ಕಟ್ ಹೇಳಿದ್ದಾರೆ. ಈ ಹಿಂದೆ 'ಕಿನಾರೆ' ಎನ್ನುವ ಸಿನಿಮಾ ಮಾಡಿದ್ದ ದೇವರಾಜ್ ಈಗ ಸತೀಶ್ ಅವರಿಗೆ ಹೊಸ ಸಿನಿಮಾ ಮಾಡುತ್ತಿದ್ದಾರೆ. ವಿಭಿನ್ನವಾದ ಕಥೆ ಇದಾಗಿದೆಯಂತೆ. ವಿಶೇಷ ಅಂದ್ರೆ ಸತೀಶ್ ರೆಟ್ರೋ ಸ್ಟೈಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿದೆ.

    ವಿಶೇಷ ಅಂದ್ರೆ ಇದು ಬಹುದೊಡ್ಡ ಬಜೆಟ್ ನ ಸಿನಿಮಾವಾಗಿರಲಿದೆಯಂತೆ. ಸತೀಶ್ ಇದುವರೆಗೂ ಕಾಣಿಸಿಕೊಂಡಿರದಂತಹ ಗೆಟಪ್ ನಲ್ಲಿ ಮಿಂಚಲಿದ್ದಾರಂತೆ. ಹುಟ್ಟುಹಬ್ಬದ ದಿನ ಬ್ರಹ್ಮಚಾರಿ ಚಿತ್ರದ ಟೀಸರ್ ರಿಲೀಸ್ ಮಾಡುವ ಜೊತೆಗೆ ಹೊಸ ಸಿನಿಮಾ ಕೂಡ ಸೆಟ್ಟೇರುತ್ತಿದೆ. ಹಾಗಾಗಿ ಈ ಬಾರಿಯ ಜನ್ಮದಿನ ಸತೀಶ್ ಪಾಲಿಗೆ ಮತ್ತಷ್ಟು ವಿಶೇಷವಾಗಿರುವುದರಲ್ಲಿ ಅನುಮಾನವೆ ಇಲ್ಲ.

    English summary
    Kannada actor Sathish Ninasam will announce to new film on his Birthday June 20th. This movie is directed by Devara poojary.

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X