ಸತೀಶ್ ನೀನಾಸಂ ನಿರ್ದೇಶನದ ಮೊದಲ ಚಿತ್ರಕ್ಕೆ ಟೈಟಲ್ ಫಿಕ್ಸ್
ನಟ ಸತೀಶ್ ನೀನಾಸಂ ಈಗ ನಿರ್ದೇಶಕನಾಗಿದ್ದಾರೆ. ನಟ, ನಿರ್ಮಾಪಕನಾಗಿ ಗುರುತಿಸಿಕೊಂಡಿದ್ದ ಇವರು ಈಗ ಮೊದಲ ಬಾರಿಗೆ ಡೈರೆಕ್ಷನ್ ಕ್ಯಾಪ್ ತೊಡುತ್ತಿದ್ದಾರೆ.
ಅಂದಹಾಗೆ, ಅವರ ಮೊದಲ ನಿರ್ದೇಶನದ ಸಿನಿಮಾದ ಟೈಟಲ್ ಬಿಡುಗಡೆ ಕಾರ್ಯಕ್ರಮ ನಿನ್ನೆ ಹೊಸ ವರ್ಷದ ವಿಶೇಷವಾಗಿ ನಡೆದಿದೆ. ಸಿನಿಮಾಗೆ 'ಮೈ ನೇಮ್ ಇಸ್ ಸಿದ್ದೇಗೌಡ' ಎಂಬ ಹೆಸರನ್ನು ಇಡಲಾಗಿದೆ. ಈ ಚಿತ್ರದ ಕಥೆಯನ್ನು ಕೂಡ ಸತೀಶ್ ಅವರೇ ಬರೆದಿದ್ದಾರೆ.

ಸಿನಿಮಾದ ಹೆಸರು ಕೇಳುತ್ತಿದ್ದ ಇದು ಕೂಡ ಮಂಡ್ಯಗೆ ಸಂಭಂದಿಸಿದ ಕಥೆ ಎನ್ನುವ ಕುತೂಹಲ ಮೂಡುತ್ತಿದೆ. 'ಅಯೋಗ್ಯ' ಸಿನಿಮಾದ ಯಶಸ್ಸಿನ ಬಳಿಕ ಸತೀಶ್ ಈ ಸಿನಿಮಾವನ್ನು ಅನೌನ್ಸ್ ಮಾಡಿದ್ದಾರೆ.
ಈ ಚಿತ್ರ ಸತೀಶ್ ಪಿಚ್ಚರ್ ಹೌಸ್ ಹಾಗೂ ಲೀಡರ್ ಫಿಲ್ಮ್ ಪ್ರೋಡಕ್ಷನ್ ನಲ್ಲಿ ನಿರ್ಮಾಣ ಆಗಲಿದೆ.
English summary
Kannada actor Sathish Ninasam's 1st direction movie tilted as 'My Name Is Siddegowda'.


Click it and Unblock the Notifications