For Quick Alerts
  ALLOW NOTIFICATIONS  
  For Daily Alerts

  ಕೀರ್ತನಾಗೆ ವಾರ್ನಿಂಗ್ ಕೊಟ್ಟು ಅತ್ತೆಯನ್ನು ಹೊಗಳಿದ ಸತ್ಯ

  By ಪ್ರಿಯಾ ದೊರೆ
  |

  ಸತ್ಯ ಧಾರಾವಾಹಿಯಲ್ಲಿ ಓದಿನ ಕಡೆ ಗಮನ ಕಡಿಮೆ ಮಾಡಿಕೊಂಡ ರಾಕಿ ಮನಸಿನ ತುಂಬಾ ಈಗ ರಿತು ತುಂಬಿದ್ದಾಳೆ. ರಿತುಗೆ ಪಾಠ ಮಾಡಲೆಂದು ಮನೆಗೆ ಬಂದಿದ್ದಾನೆ. ಈ ವೇಳೆ, ಸತ್ಯ ರಾಕಿಯನ್ನು ಕಂಡು ಮಾತನಾಡಿಸಿದ್ದಾಳೆ.

  ಸತ್ಯ ಕೇಳುವ ಪ್ರಶ್ನೆಗೆಲ್ಲಾ ಉತ್ತರ ಕೊಡಬೇಕಲ್ಲ ಎಂಬಂತೆ ಉತ್ತರಿಸಿದ್ದಾನೆ. ಇದು ಸತ್ಯಾಳಿಗೆ ಅನುಮಾನ ಬರುವಂತೆ ಮಾಡಿದೆ. ಯಾಕೆ ರಾಕಿ ಏನಾಗಿದೆ ನಿನಗೆ ಹೀಗೆಲ್ಲಾ ಯಾಕೆ ಮಾತನಾಡುತ್ತಿದ್ದೀಯಾ.

  ಗಮನ ಓದಿನ ಕಡೆ ಇದೀಯಾ, ಇಲ್ಲ ಬೇರೆ ಏನಾದರೂ ಆಯ್ತಾ ಎಂದು ಕೇಳುತ್ತಾಳೆ. ತಕ್ಷಣವೇ ರಾಕಿ ಗಾಬರಿಯಾಗುತ್ತಾನೆ. ಆದರೆ ಸತ್ಯ ಎದುರಿಗೆ ಯಾವ ಸತ್ಯವನ್ನೂ ಹೇಳಲಾಗುವುದಿಲ್ಲ.

  ಪ್ರೀತಿಯಲ್ಲಿ ಬಿದ್ದ ರಾಕೇಶ್

  ಪ್ರೀತಿಯಲ್ಲಿ ಬಿದ್ದ ರಾಕೇಶ್

  ಸತ್ಯ ಕೇಳಿದ್ದಕ್ಕೆ ರಾಕಿ ಇಲ್ಲ ನನ್ನ ಫಸ್ಟ್ ಪ್ರಿಯಾರಿಟಿ ಓದು ಸತ್ಯ ಎಂದು ಹೇಳುತ್ತಾನೆ. ಈ ಮಾತನ್ನು ಹೇಳುವಾಗಲೂ ರಾಕಿ ರಿತು ಬಗ್ಗೆಯೇ ಯೋಚಿಸುತ್ತಿರುತ್ತಾನೆ. ಸತ್ಯ ಒಂದಷ್ಟು ಪ್ರಶ್ನೆ ಹಾಕಿ ಸುಮ್ಮನಾಗುತ್ತಾಳೆ. ಇನ್ನು ರಿತು ಮತ್ತು ರಾಕಿ ರೂಮಲ್ಲಿರುವಾಗ ಸತ್ಯ ಅಲ್ಲಿಗೆ ಹೋಗುತ್ತಾಳೆ. ಆಗ ಮತ್ತೆ ರಾಕಿ ತಬ್ಬಿಬ್ಬಾಗುತ್ತಾನೆ. ಗಾಬರಿಯಾಗಿ ಮಾತನಾಡುತ್ತಾನೆ. ಆಗ ಸತ್ಯ ರಾಕಿಗೆ ಏನಾಗುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲಾಗುವುದಿಲ್ಲ. ಬದಲಿಗೆ ಆದಷ್ಟು ಬೇಗ ಸಖಿಬಾರ್ಯ ಪದದ ಅರ್ಥವನ್ನು ತಿಳಿದುಕೊಂಡು ಹೇಳು ಎಂದು ಹೇಳಿ ಹೋಗುತ್ತಾಳೆ.

  ಕಾರ್ತಿಕ್-ಸತ್ಯ ಫೋಟೋ ಸೆಷನ್

  ಕಾರ್ತಿಕ್-ಸತ್ಯ ಫೋಟೋ ಸೆಷನ್

  ಇನ್ನು ಕಾರ್ತಿಕ್ ಮತ್ತು ಸತ್ಯ ಪಾರ್ಟಿಗೆ ಹೋಗುತ್ತಾರೆ. ಅಲ್ಲಿನ ಲೈಟಿಂಗ್ಸ್ ನೋಡಿ ಸತ್ಯ ನನ್ನದೊಂದು ಫೋಟೋ ತೆಗಿ ಎಂದು ಕೇಳುತ್ತಾಳೆ. ಕಾರ್ತಿಕ್ ಈ ವೇಳೆ ಸತ್ಯಾಗೆ ಹೇಗೆ ನಿಲ್ಲಬೇಕು ಎಂದು ಹೇಳಿಕೊಡುತ್ತಾನೆ. ಅಷ್ಟೇ ಅಲ್ಲದೇ, ಸೀರೆಯ ಸೆರಗನ್ನು ಕೂಡ ಸರಿ ಮಾಡುತ್ತಾನೆ. ಬಳಿಕ ನಮ್ಮಿಬ್ಬರದ್ದು ಒಂದು ಫೋಟೋ ತೆಗೆದುಕೊಳ್ಳೋಣ ಎನ್ನುತ್ತಾಳೆ. ಅಲ್ಲೆ ಇದ್ದ ಒಬ್ಬರು ಇವರಿಗೆ ಹೆಗಲ ಮೇಲೆ ಕೈ ಹಾಕಲು ಹೇಳಿದಾಗ, ಕಾರ್ತಿಕ್ ಸತ್ಯ ಹೆಗಲ ಮೇಲೆ ಕೈ ಹಾಕುತ್ತಾನೆ. ಆಗ ಸತ್ಯ ಖುಷಿಯಾಗುತ್ತಾಳೆ.

  ಕೀರ್ತನಾಳೇ ಸತ್ಯ ಬೇಟೆ

  ಕೀರ್ತನಾಳೇ ಸತ್ಯ ಬೇಟೆ

  ಇನ್ನು ಪಾರ್ಟಿಯಲ್ಲಿ ಸತ್ಯ ಒಬ್ಬಳೆ ಇರುವಾಗ ಬರುವ ಕೀರ್ತನಾ, ಇಂತಹ ಪಾರ್ಟಿಯನ್ನು ಯಾವತ್ತೂ ನೋಡೇ ಇಲ್ಲ ಅಲ್ವಾ. ಹೋಗು ಚೆನ್ನಾಗಿ ಊಟ ಬಾರಿಸು ಎಂದು ಹೀಯಾಳಿಸುತ್ತಾಳೆ. ಅಲ್ಲದೇ, ನೀನು ನನ್ನ ಬೇಟೇ ನಿನ್ನ ಕಥೆ ಮುಗಿತು ನಾನು ಹುಲಿ ಎಂದೆಲ್ಲಾ ಮಾತನಾಡುತ್ತಾಳೆ. ಅದಕ್ಕೆ ಸತ್ಯ ತಿರುಗೇಟು ಕೊಡುತ್ತಾಳೆ. ಇಂತಹ ಜಾಗವನ್ನೂ ನೋಡಿಲ್ಲ. ನಿನ್ನಂತವರನ್ನೂ ನೋಡಿರಲಿಲ್ಲ. ನೀನು ನನ್ನ ಬೇಟೆಯೇ ಹೊರತು ನಾನಲ್ಲ. ಇಲ್ಲಿ ನಾನು ಹುಲಿ. ನಿನ್ನ ಮಾತ್ರ ಸುಮ್ಮನೆ ಬಿಡಲ್ಲ ಎಂದು ಹೇಳುತ್ತಾಳೆ. ಇದರಿಂದ ಕೀರ್ತನಾಗೆ ಅವಮಾನವಾಗುತ್ತದೆ.

  ಸೀತಮ್ಮನನ್ನು ಹೊಗಳಿದ ಸತ್ಯ

  ಸೀತಮ್ಮನನ್ನು ಹೊಗಳಿದ ಸತ್ಯ

  ಸೀತಾ ಮತ್ತು ಮಹತಿ ಮಾತನಾಡುತ್ತಿರುತ್ತಾರೆ. ಈ ವೇಳೆ ಮಹತಿ ಬೇಕಂತಲೇ ಸೊಸೆಯ ಹೆಸರನ್ನು ಕೇಳುತ್ತಾಳೆ. ಸೀತಾ ಏನನ್ನೂ ಹೇಳುವುದಿಲ್ಲ. ಆಗ ಅಲ್ಲಿಗೆ ಸತ್ಯ ಬಂದು ತನ್ನ ಹೆಸರನ್ನು ಹೇಳುತ್ತಾಳೆ. ಹಿತಿ ಬೇಕಂತಲೇ ನಿಮ್ಮ ಸೊಸೆ ತುಂಬಾ ಸ್ಟೈಲಿಷ್. ಆದರೆ ನೀವು ತುಂಬಾ ಸಂಸ್ಕೃತವಂತರು ಎಂದು ಚುಚ್ಚಿ ಮಾತನಾಡುತ್ತಾಳೆ. ಆಗ ಕೀರ್ತನಾ ಕೂಡ ಮಧ್ಯೆ ಪ್ರವೇಶಿಸುತ್ತಾಳೆ. ಸೀತಾ ಕೀರ್ತನಾಗೆ ಬೈಯುತ್ತಾಳೆ. ಇನ್ನು ಮಹತಿಯ ಮಾತುಗಳಿಗೆ ಸತ್ಯ ತಿರುಗೇಟು ಕೊಡುತ್ತಾ ನನ್ನ ಅತ್ತೆ ನಿಮ್ಮ ಹಾಗಲ್ಲ ಎಂದು ಹೊಗಳುತ್ತಾಳೆ. ಕೀರ್ತನಾ ಮಾಡಿದ ಪ್ಲಾನ್ ಈಗ ಅವಳಿಗೆ ಉಲ್ಟಾ ಹೊಡೆಯುತ್ತಾ ಕಾದು ನೋಡಬೇಕಿದೆ.

  English summary
  Sathya scolds and warns Keerthana. Sathya feel proud about seetha.
  Monday, November 28, 2022, 19:29
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X