ಡಿಸಿಪಿ ಅಣ್ಣಾಮಲೈ ರಾಜೀನಾಮೆ ಕುರಿತು ಸತೀಶ್ ನೀನಾಸಂ ಬೇಸರ
'ಕರ್ನಾಟಕ ಸಿಂಗಂ' ಎಂದೇ ಗುರುತಿಸಿಕೊಂಡಿದ್ದ ದಕ್ಷ ಪೊಲೀಸ್ ಅಧಿಕಾರಿ ಅಣ್ಣಾಮಲೈ ಅವರು ಮಂಗಳವಾರ ರಾಜೀನಾಮೆ ನೀಡಿದ್ದಾರೆ. ಸಿಎಂ ಕುಮಾರಸ್ವಾಮಿ ಅವರನ್ನ ಭೇಟಿ ನೀಡಿ ರಾಜೀನಾಮೆ ಸಲ್ಲಿಸಿರುವುದಾಗಿ ಖುದ್ದು ಅವರೇ ತಿಳಿಸಿದ್ದಾರೆ.
ಅಣ್ಣಾಮಲೈ ರಾಜೀನಾಮೆ ನೀಡಿರುವ ವಿಚಾರ ತಿಳಿಯುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಒಬ್ಬ ಪ್ರಮಾಣಿಕ ಅಧಿಕಾರಿಯಾಗಿ ಜನರ ಮೆಚ್ಚುಗೆ ಪಡೆದುಕೊಂಡಿದ್ದ ಅಣ್ಣಾಮಲೈ ರಾಜೀನಾಮೆ ನೀಡಬಾರದು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಖಡಕ್ ಪೊಲೀಸ್ ಅಧಿಕಾರಿ ಅಣ್ಣಾಮಲೈ ರಾಜೀನಾಮೆ
ಇದೇ ಬೇಸರವನ್ನ ನಟ ಸತೀಶ್ ನೀನಾಸಂ ಕೂಡ ವ್ಯಕ್ತಪಡಿಸಿದ್ದಾರೆ. ವೈಯಕ್ತಿಕವಾಗಿ ಅಣ್ಣಾಮಲೈ ರಾಜೀನಾಮೆ ನೀಡಿರುವುದು ಬೇಸರ ತಂದಿದೆ ಎಂದು ಟ್ವೀಟ್ ಮಾಡಿ ಅವರ ಮುಂದಿನ ಜೀವನಕ್ಕೆ ಶುಭಕೋರಿದ್ದಾರೆ.

ಬೆಂಗಳೂರು ದಕ್ಷಿಣ ನೂತನ ಡೆಪ್ಯೂಟಿ ಕಮಿಷನರ್, ಐಪಿಎಸ್, ಕೆ ಅಣ್ಣಾಮಲೈ ಸಂದರ್ಶನ
''ಕರ್ನಾಟಕ ಕಂಡ ಒಬ್ಬ ನಿಷ್ಟಾವಂತ ಅಧಿಕಾರಿ ಅಣ್ಣಾಮಲೈ ರಾಜೀನಾಮೆ ನೀಡಿರುವುದು ಒಬ್ಬ ಪ್ರಜೆಯಾಗಿ ಬೇಸರವಾಗಿದೆ. ನಿಮ್ಮಂತಹ ಅಧಿಕಾರಿಗಳ ಸೇವೆ ಬರೀ ಕರ್ನಾಟಕವಲ್ಲ ದೇಶಕ್ಕೆ ಅವಶ್ಯಕತೆಯಿದೆ. ಆದರೂ ನಿಮ್ಮ ವೈಯಕ್ತಿಕ ನಿರ್ಧಾರಗಳು ಅಷ್ಟೇ ಮುಖ್ಯ. ನಿಮ್ಮ ಜೀವನ ಸುಖವಾಗಿರಲಿ, ಶುಭಾಶಯಗಳು ಥ್ಯಾಂಕ್ಯು ಸರ್'' ಎಂದು ಸತೀಶ್ ನೀನಾಸಂ ಟ್ವೀಟ್ ಮಾಡಿದ್ದಾರೆ.
ಐಪಿಎಸ್ ಅಧಿಕಾರಿ ಅಣ್ಣಾಮಲೈ ಜನರಿಗೆ ಬರೆದ ಭಾವನಾತ್ಮಕ ಪತ್ರದಲ್ಲಿ ಏನಿದೆ?
2011ನೇ ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿರುವ ಅಣ್ಣಾಮಲೈ ಅವರು ಕಾರ್ಕಳ, ಚಿಕ್ಕಮಗಳೂರು ಎಸ್ಪಿಯಾಗಿ ಕಾರ್ಯ ನಿರ್ವಹಿಸಿದ್ದರು. ನಂತರ ಸಿಎಂ ಕುಮಾರಸ್ವಾಮಿ ಅವರೇ ಖುದ್ದು ಬೆಂಗಳೂರಿಗೆ ವರ್ಗಾವಣೆ ಮಾಡಿಸಿ ಹೆಚ್ಚಿನ ಜವಾಬ್ದಾರಿ ನೀಡಿದ್ದರು. ಬೆಂಗಳೂರು ದಕ್ಷಿಣ ವಿಭಾದ ಡಿಸಿಪಿ ಆಗಿ ಅಣ್ಣಾಮಲೈ ಕಾರ್ಯ ನಿರ್ವಹಿಸುತ್ತಿದ್ದರು. ಇದೀಗ, ರಾಜೀನಾಮೆ ನೀಡಿ ತಮ್ಮ ವೈಯಕ್ತಿಕ ಆಲೋಚನೆ ಮತ್ತು ಜೀವನದ ಬಗ್ಗೆ ಕಾಳಜಿ ವಹಿಸುವುದಾಗಿ ಹೇಳಿದ್ದಾರೆ.


Click it and Unblock the Notifications











