For Quick Alerts
  ALLOW NOTIFICATIONS  
  For Daily Alerts

  ಮತ್ತೊಂದು ಮಹತ್ವ ಕಾರ್ಯಕ್ಕೆ ಮುಂದಾದ 'ಅಯೋಗ್ಯ' ಸತೀಶ್ ನೀನಾಸಂ

  By Bharath Kumar
  |

  ಸಿನಿಮಾ ನಟರು ಬರಿ ಸಿನಿಮಾಗಳನ್ನ ಮಾಡುತ್ತಾ, ಅವರಾಯ್ತು, ಅವರ ಲೈಫ್ ಆಯ್ತು ಅಂತ ಇರೋರು ತುಂಬಾ ಜನರು ಇದ್ದಾರೆ. ಅದೇ ರೀತಿ ಜನರಿಗಾಗಿ ಏನಾದರೂ ಮಾಡಬೇಕು ಅಂತ ಯಾರಿಗೂ ಗೊತ್ತಾಗದೇ ಹಾಗೂ ಮತ್ತೊಬ್ಬರಿಗೆ ಸ್ಫೂರ್ತಿಯಾಗಲಿ ಅಂತ ಬಹಿರಂಗವಾಗಿ ಒಳ್ಳೆಯ ಕೆಲಸಗಳನ್ನ ಮಾಡುವ ಕಲಾವಿದರು ಇದ್ದಾರೆ.

  ಇಂತಹವರ ಮಧ್ಯೆ ಸತೀಶ್ ನೀನಾಸಂ ಸ್ವಲ್ಪ ವಿಭಿನ್ನವಾಗಿ ನಿಂತಿದ್ದಾರೆ. ಕಳೆದ ತಿಂಗಳಲ್ಲಿ ಸತೀಶ್ ಅವರು ಒಂದು ಹಳ್ಳಿಯನ ದತ್ತು ಪಡೆದುಕೊಂಡಿದ್ದರು. ಆ ಹಳ್ಳಿಯ ಸಕಲ ಅಭಿವೃದ್ಧಿಗಾಗಿ ಎಲ್ಲ ರೀತಿಯಲ್ಲೂ ಸಹಾಯ ಮಾಡಲು ನಿರ್ಧರಿಸಿ ತಮ್ಮದೇ ಆದ ಒಂದು ತಂಡವನ್ನ ಕಟ್ಟಿಕೊಂಡು ಆ ಹಳ್ಳಿ ಸಮಸ್ಯೆಗಳನ್ನ ಆಲಿಸಿದ್ದರು.

  ಉತ್ತರ ಕರ್ನಾಟಕದ ಹಳ್ಳಿ ದತ್ತು ಪಡೆಯಲಿದ್ದಾರೆ ನೀನಾಸಂ ಸತೀಶ್

  ಇದೀಗ, ಇನ್ನೊಂದು ಹಳ್ಳಿಯನ್ನ ದತ್ತು ಪಡೆಯಲು ಸತೀಶ್ ನೀನಾಸಂ ಮುಂದಾಗಿದ್ದಾರೆ. ಈ ಬಾರಿ ಉತ್ತರ ಕರ್ನಾಟಕದ ಒಂದು ಹಳ್ಳಿಯ ಕಡೆ ಸತೀಶ್ ನೀನಾಸಂ ಅವರ ಗಮನ ಹರಿಸಿದ್ದಾರೆ. ಹಾಗಿದ್ರೆ, ಅದು ಯಾವ ಹಳ್ಳಿ.? ಮುಂದೆ ಓದಿ....

  ಉತ್ತರ ಕರ್ನಾಟಕದ ಒಂದು ಹಳ್ಳಿ

  ಉತ್ತರ ಕರ್ನಾಟಕದ ಒಂದು ಹಳ್ಳಿ

  ಸತೀಶ್ ನೀನಾಸಂ ಅಭಿನಯದ 'ಅಯೋಗ್ಯ' ಸಿನಿಮಾ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ಸಿನಿಮಾದ ಪ್ರಚಾರಕ್ಕಾಗಿ ಸತೀಶ್ ಮತ್ತು ಚಿತ್ರತಂಡ ಶನಿವಾರ ಧಾರವಾಡಗೆ ಭೇಟಿ ನೀಡಿದ್ದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಸತೀಶ್ ''ಉತ್ತರ ಕರ್ನಾಟಕದ ಯಾವುದಾದರೂ ಒಂದು ಹಳ್ಳಿಯನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಮಾಡುತ್ತೇನೆ' ಎಂದು ಹೇಳಿದರು.

  ಉತ್ತರ ಕರ್ನಾಟಕ ಅಭಿವೃದ್ದಿಯಾಗಬೇಕಿದೆ

  ಉತ್ತರ ಕರ್ನಾಟಕ ಅಭಿವೃದ್ದಿಯಾಗಬೇಕಿದೆ

  'ಉತ್ತರ ಕರ್ನಾಟಕದ ಬಹುತೇಕ ಗ್ರಾಮಗಳು ಇದುವರೆಗೂ ಅಭಿವೃದ್ಧಿ ಕಂಡಿಲ್ಲ, ನನ್ನಿಂದ ಸಾಧ್ಯವಾದಷ್ಟು ಸಹಾಯ ಮಾಡಬೇಕು ಎಂದು ತೀರ್ಮಾನ ಮಾಡಿದ್ದೇನೆ. ಯಾವುದಾದರೂ ಒಂದು ಹಳ್ಳಿಯನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಮಾಡುತ್ತೇನೆ. ಮುಂಬರುವ ದಿನಗಳಲ್ಲಿ ಹಳ್ಳಿಗಳ ಪರಿಶೀಲನೆ ನಡೆಸಿ, ಅಲ್ಲಿಗೆ ಬೇಕಾದ ಮೂಲ ಸೌಕರ್ಯವನ್ನು ಒದಗಿಸಲು ಸಿದ್ಧನಾಗಿದ್ದೇನೆ. ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವ ಉದ್ದೇಶವಿದೆ' ಎಂದು ಸತೀಶ್ ತಿಳಿಸಿದರು.

  ಜೋಳಿಗೆ ಹಿಡಿಯಲು ಸಿದ್ಧ

  ಜೋಳಿಗೆ ಹಿಡಿಯಲು ಸಿದ್ಧ

  ಸಿನಿಮಾಗಳಲ್ಲಿ ಅಭಿನಯಿಸುವುದರ ಜೊತೆ ಜೊತೆಗೆ ಹಳ್ಳಿ ಉದ್ಧಾರ ಆಗಬೇಕು ಎನ್ನುವುದು ಸತೀಶ್ ಅವರ ಬಯಕೆ. ಈ ಒಳ್ಳೆಯ ಕಾರಣಕ್ಕಾಗಿ ಅವರು ಎಂತಹ ಸಾಹಸಕ್ಕೂ ಸೈ ಎನ್ನುತ್ತಾರೆ. 'ಇನ್ನು ಗ್ರಾಮಗಳು ಅಭಿವೃದ್ಧಿಯಾಗಬೇಕಿದೆ. ಅಗತ್ಯಬಿದ್ದರೆ ಹಣ ಸಂಗ್ರಹಿಸಲು ಜೋಳಿಗೆ ಹಿಡಿಯಲು ನಾನು ಸಿದ್ಧನಿದ್ದೇನೆ' ಎಂದು ನಟ ನೀನಾಸಂ ಸತೀಶ್ ಹೇಳಿದ್ದು ನಿಜಕ್ಕೂ ಶ್ಲಾಘನೀಯ.

  ಮಂಡ್ಯದಲ್ಲಿ ಒಂದು ಹಳ್ಳಿ ದತ್ತು ಪಡೆದಿದ್ದಾರೆ

  ಮಂಡ್ಯದಲ್ಲಿ ಒಂದು ಹಳ್ಳಿ ದತ್ತು ಪಡೆದಿದ್ದಾರೆ

  ಈಗಾಗಲೇ ಸತೀಶ್ ನೀನಾಸಂ ಅವರು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೊಕಿನ ಹುಲ್ಲೆಗಾಲ ಎಂಬ ಗ್ರಾಮವನ್ನ ದತ್ತು ಪಡೆದುಕೊಂಡಿದ್ದಾರೆ. ಹಳ್ಳಿಗಳ ಸಮಸ್ಯೆಯನ್ನ ಬಗೆಹರಿಸಿ, ಅದನ್ನ ಮಾದರಿ ಗ್ರಾಮವನ್ನಾಗಿ ಮಾಡಬೇಕೆಂಬ ಆಶಯದೊಂದಿಗೆ ಅಲ್ಲಿನ ಕೆಲಸಗಳನ್ನ ಕೂಡ ಶುರು ಮಾಡಿದ್ದಾರೆ.

  ಸಿನಿಮಾದಿಂದ ಆಚೆ 'ಹೊಸ ಹೆಜ್ಜೆ'ಯಿಟ್ಟ ಸತೀಶ್ ನೀನಾಸಂಸಿನಿಮಾದಿಂದ ಆಚೆ 'ಹೊಸ ಹೆಜ್ಜೆ'ಯಿಟ್ಟ ಸತೀಶ್ ನೀನಾಸಂ

  English summary
  Kannada film actor Ninasam Sathish announced that, he will adopt and develop one village of North Karnataka.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X