ಐತಿಹಾಸಿಕ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ನಟ ಸತೀಶ್ ನೀನಾಸಂ
'ಲೂಸಿಯಾ' ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿಸಿದ್ದ ನಟ ನಿನಾಸಂ ಸತೀಶ್ ಈಗ ಬಿಗ್ ಬಜೆಟ್ ಸಿನಿಮಾದಲ್ಲಿ ಬಣ್ಣ ಹಚ್ಚಲು ಸಿದ್ದತೆ ನಡೆಸಿಕೊಂಡಿದ್ದಾರೆ. ತಮ್ಮ ನಟನಾ ಶೈಲಿಯಿಂದಲೇ ಜನರನ್ನು ಮೆಚ್ಚಿಸಿದ್ದ ನಟ ಈಗ ಐತಿಹಾಸಿಕ ಚಿತ್ರದ ಮೂಲಕ ಜನರನ್ನ ಮನರಂಜಿಸಲು ಮುಂದಾಗಿದ್ದಾರೆ.
ಲೈಫು ಇಷ್ಟೇನೆ, ಪಂಚರಂಗಿ ಸಿನಿಮಾಗಳಲ್ಲಿ ಸಣ್ಣ ಸಣ್ಣ ಪಾತ್ರಗಳಲ್ಲಿ ನಟಿಸುತ್ತಿದ್ದ ನಟ ನೀನಾಸಂ ಸತೀಶ್‌ಗೆ ಲೂಸಿಯಾ ಚಿತ್ರ ಕನ್ನಡ ಚಿತ್ರರಂಗದಲ್ಲಿ ಹೊಸ ಹೆಜ್ಜೆಯನ್ನು ಇಡಲು ಸಹಾಯ ಮಾಡಿತು. ಲೂಸಿಯಾ ಚಿತ್ರದಲ್ಲಿ ಅದ್ಬುತವಾಗಿ ನಟಿಸಿದ್ದ ನಟ ನಿನಾಸಂ ಆ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಪೂರ್ಣ ಪ್ರಮಾಣದ ಹಿರೋ ಆದರು. ಇದಾದ ಬಳಿಕ ರಾಕೆಟ್ ಸಿನಿಮಾಗೆ ನಿರ್ದೇಶನ, ನಿರ್ಮಾಪಕ ಹಾಗೂ ನಾಯಕರಾಗಿಯೂ ಸಿನಿಮಾದಲ್ಲಿ ಕಾಣಿಸಿಕೊಂಡರು.
ಬಳಿಕ ನಿನಾಸಂ ಸತೀಶ್ ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡರು. ಪರಭಾಷೆಗಳಲ್ಲೂ ಸಹ ಒಳ್ಳೆಯ ಆಫರ್‌ಗಳು ಹುಡುಕಿಕೊಂಡು ಬಂದವು ಆ ಮಟ್ಟಿಗೆ ಸತೀಶ್ ನಿನಾಸಂ ಅವರ ಖ್ಯಾತಿ ಪಸರಿಸಿಕೊಂಡಿತ್ತು. ಸದ್ಯ ಈಗ ಮತ್ತೆ ಬಿಗ್ ಬಜೆಟ್ ಸಿನಿಮಾ ಮಾಡಲು ಮುಂದಾಗಿದ್ದಾರೆ. 80 ದಶಕದ ವಿಭಿನ್ನ ಕಥಾಹಂದರ ಹೊಂದಿರುವ ಸಿನಿಮಾದಲ್ಲಿ ನಟಿಸಲು ಸತೀಶ್ ಸಿದ್ದತೆ ನಡೆಸಿಕೊಂಡಿದ್ದಾರೆ. 80ರ ದಶಕದ ಐತಿಹಾಸಿಕ ಘಟನೆಗಳ ಕುರಿತು ಸಿನಿಮಾ ನಿರ್ಮಾಣವಾಗುತ್ತಿದೆ, ಇದೇ ಮೊದಲ ಬಾರಿಗೆ ಸತೀಶ್ ಕೂಡ ಐತಿಹಾಸಿಕ ಸಿನಿಮಾದಲ್ಲಿ ನಟನೆ ಮಾಡುತ್ತಿದ್ದಾರೆ. ಸದ್ಯಕ್ಕೆ ಚಿತ್ರಕ್ಕೆ ಇನ್ನೂ ಟೈಟಲ್ ನೀಡಿಲ್ಲ. ಇದೇ ತಿಂಗಳ 15 ರಂದು ಸಿನಿಮಾ ಶೀರ್ಷಿಕೆಯನ್ನು ಚಿತ್ರತಂಡ ಘೋಷಣೆ ಮಾಡಲಿದೆ.

ಐತಿಹಾಸಿಕ ಚಿತ್ರದಲ್ಲಿ ನಟ ಸತೀಶ್ ನಟನೆ
ಅಭಿನಯ ಚತುರ ಎಂದೇ ಖ್ಯಾತಿ ಗಳಿಸಿರುವ ನಟ ಸತೀಶ್ ನೀನಾಸಂ 80 ದಶಕದ ಚಿತ್ರ ಹೇಳಲು ಬರುತ್ತಿದ್ದಾರೆ. ಹಿಸ್ಟೋರಿಕಲ್ ಕಥೆಯನ್ನು ಹೊಂದಿರುವ ಸಿನಿಮಾದಲ್ಲಿ ಸತೀಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಒಂದು ಜನಾಂಗದ ನಾಯಕನಾಗಿ ಆ ಜನಾಂಗದ ಒಳಿತಿಗಾಗಿ ಹೋರಾಡುವ ನಾಯಕನ ಪಾತ್ರದಲ್ಲಿ ಸತೀಶ್ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಸಿನಿಮಾ ಇದೇ ತಿಂಗಳ 15 ರಂದು ಅಧಿಕೃತವಾಗಿ ಲಾಂಚ್ ಆಗಲಿದೆ. ಈ ಬಗ್ಗೆ ಸ್ವತಃ ನಟ ಸತೀಶ್ ಹೇಳಿಕೊಂಡಿದ್ದಾರೆ. ಅಂದೇ ಸಿನಿಮಾದ ಶೀರ್ಷಿಕೆಯನ್ನು ಅನೌನ್ಸ್ ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಈ ಸಿನಿಮಾವನ್ನು ವಿನೋದ್.ವಿ ದೋಂಡಾಳೆ ನಿರ್ದೇಶನ ಮಾಡುತ್ತಿದ್ದು, ನಿರ್ಮಾಪಕ ನರಹರಿ, ಪೂರ್ಣ ಅವರ ಸಂಗೀತ, ಟಿ.ಕೆ ದಯಾನಂದ್ ಚಿತ್ರಕಥೆ ಇರಲಿದೆ.

ಸತೀಶ್‌ಗೆ ಸಕ್ಸಸ್ ತಂದು ಕೊಟ್ಟ ಸಿನಿಮಾಗಳಿವು
ನಟ ಸತೀಶ್ ನೀನಾಸಂ ತಮ್ಮ ಪಕ್ಕಾ ಮಂಡ್ಯ ಶೈಲಿಯ ಗ್ರಾಮೀಣ ಪ್ರತಿಭೆ. ಅವರ ಎಲ್ಲ ಸಿನಿಮಾಗಳಲ್ಲೂ ಗ್ರಾಮೀಣ ಭಾಗದ ಸಣ್ಣ ತುಣುಕಾದರೂ ಇದ್ದೇ ಇರುತ್ತದೆ. ಆ ಮಟ್ಟಿಗೆ ತಮ್ಮ ಅಭಿನಯವನ್ನು ಜನರ ಮುಂದೆ ತೋರ್ಪಡಿಸಿದ್ದಾರೆ. ಅವರು ಈವರೆಗೂ ಕನ್ನಡದಲ್ಲಿ ನಟಿಸಿರುವ ಸಿನಿಮಾಗಳಲ್ಲಿ ಅವರಿಗೆ ಹೆಚ್ಚಾಗಿ ಹಳ್ಳಿ ಸೊಗಡಿನ ಪಾತ್ರಗಳೇ ಹೆಚ್ಚು ಯಶಸ್ಸು ತಂದುಕೊಟ್ಟಿದೆ, ಅದರಂತೆ 'ಲೂಸಿಯಾ' ಚಿತ್ರ ಭರ್ಜರಿ ಯಶಸ್ಸು ಕಂಡಿತು. ನಂತರ ಯಶ್ ರಾಧಿಕಾ, ಅವರ ಜೊತೆ ಮಾಡಿದ ಡ್ರಾಮಾ ಸಿನಿಮಾ ಕೂಡ ಬ್ಲಾಕ್ ಬಸ್ಟರ್ ಆಯ್ತು ಇದಾದ ಬಳಿಕ ಅವರಿಗೆ ಚಿತ್ರರಂಗದಲ್ಲಿ ಒಳ್ಳೆಯ ಆಫರ್‌ಗಳು ಸಿಕ್ಕವು. ನಂತರ ಲವ್ ಇನ್ ಮಂಡ್ಯ ಕೂಡ ಭಾರೀ ಯಶಸ್ಸು ತಂದುಕೊಟ್ಟಿತು. ಬ್ಯೂಟಿಫುಲ್ ಮನಸುಗಳು ಸಹ ಸೂಪರ್ ಹಿಟ್ ಆಯಿತು. ನಂತರ ಬಂದ ಅಯೋಗ್ಯ ಸಿನಿಮಾ ಕೂಡ ಬ್ಲಾಕ್ ಬಸ್ಟರ್ ಆಯ್ತು. ಇದಾದ ಬಳಿಕ ತೆರಕಂಡ ಬ್ರಹ್ಮಚಾರಿ, ಚಂಬಲ್ ಸಿನಿಮಾಗಳು ಕೂಡ ನಟ ನೀನಾಸಂ ಸತೀಶ್‌ಗೆ ಹಿಟ್ ತಂದುಕೊಟ್ಟವು

ಬಿಡುಗಡೆಗೆ ಸಜ್ಜಾಗಿರುವ ನಟ ಸತೀಶ್ ಸಿನಿಮಾಗಳಿವು
ಈ ವರ್ಷ ನಟ ಸತೀಶ್ ನೀನಾಸಂ ಹಲವು ಚಿತ್ರಗಳು ಬಿಡುಗಡೆಗೆ ಸಜ್ಜಾಗಿದೆ. ಒಂದಲ್ಲಾ ಎರಡಲ್ಲಾ ಅಂತ ಸಾಲು ಸಾಲು ಸಿನಿಮಾಗಳಲ್ಲಿ ಸತೀಶ್ ನಟಿಸುತ್ತಿದ್ದಾರೆ. ಹೀಗಾಗಿ ಕೋವಿಡ್ ಹಿನ್ನಲೆ ರಿಲೀಸ್ ಆಗದೇ ಇರುವ ಸಿನಿಮಾಗಳು ಈ ವರ್ಷ ಥಿಯೇಟರ್‌ನಲ್ಲಿ ಅಬ್ಬರಿಸಲು ಮುಂದಾಗಿದೆ. ದಸರಾ, ಪೆಟ್ರೋ ಮ್ಯಾಕ್ಸ್, ಮ್ಯಾಟ್ನಿ, ಗೋದ್ರಾ ಸಿನಿಮಾಗಳು ಬಿಡುಗಡೆಗೆ ಸಿದ್ದವಾಗಿದೆ. ಒಟ್ಟಿನಲ್ಲಿ ಈ ವರ್ಷ ಸತೀಶ್ ಸಿನಿಮಾಗಳ ಅಬ್ಬರ ಜೋರು ಇರಲಿದೆ.

ಪರಭಾಷೆಯಲ್ಲೂ ನೀನಾಸಂ ಸತೀಶ್ ಅಬ್ಬರ
ಕನ್ನಡದಲ್ಲಿ ಮಾತ್ರವಲ್ಲದೆ ಪಕ್ಕದ ರಾಜ್ಯದ ಚಿತ್ರರಂಗಕ್ಕೂ ನಟ ಸತೀಶ್ ಕಾಲಿಟಿದ್ದಾರೆ. ತಮಿಳಿನ ಬಿಗ್ ಬಜೆಟ್ ಸಿನಿಮಾ ಪಂಗವೆನ್ನುಕು ಅರುಳವೈ ನಲ್ಲಿ ನಟ ಸತೀಶ್ ಅಭಿನಯಿಸುತ್ತಿದ್ದಾರೆ. ಈ ಚಿತ್ರವನ್ನ ಆನೀಸ್ ರವರು ನಿರ್ದೇಶನ ಮಾಡುತ್ತಿದ್ದು, ಕೋವಿಡ್ ಹಿನ್ನಲೆ ಚಿತ್ರೀಕರಣ ಮೂಂದೂಡಲಾಗಿತ್ತು, ಸದ್ಯ ಈಗ ಚಿತ್ರೀಕರಣ ಆರಂಭವಾಗಿದ್ದು, ಸಿನಿಮಾದ ಎಲ್ಲಾ ಹಂತದ ಚಿತ್ರೀಕರಣವನ್ನು ಮಾಡಲಾಗಿದೆ. ಇನ್ನೇನಿದ್ದರೂ ಸಿನಿಮಾ ಬಿಡುಗಡೆಯ ಕೆಲಸಗಳು ಮಾತ್ರ ಬಾಕಿ ಉಳಿದಿದ್ದು, ತಮಿಳಿನಲ್ಲೂ ಸತೀಶ್ ಮಿಂಚಲಿದ್ದಾರೆ.


Click it and Unblock the Notifications











