ಸತ್ಯ ಪ್ರಕಾಶ್ ಸಿನಿಮಾಗೆ ಪುನೀತ್ ರಾಜ್ ಕುಮಾರ್ ನಿರ್ಮಾಣ?

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿರ್ಮಾಣ ಸಂಸ್ಥೆ ಪಿ ಆರ್ ಕೆ ಬ್ಯಾನರ್ ನಲ್ಲಿ ವಿಭಿನ್ನವಾದ ಚಿತ್ರಗಳು ಮೂಡಿ ಬರುತ್ತಿವೆ. ಈಗಾಗಲೆ ಪಿ ಆರ್ ಕೆ ಬ್ಯಾನರ್ ನಿಂದ 'ಕವಲುದಾರಿ' ಸಿನಿಮಾ ರಿಲೀಸ್ ಆಗಿದೆ. ಪ್ರೇಕ್ಷಕರಿಂದ ಉತ್ತಮವಾದ ಪ್ರತಿಕ್ರಿಯೆ ಕೂಡ ಪಡೆದುಕೊಂಡಿದೆ.

ಮೊದಲ ಸಿನಿಮಾ ರಿಲೀಸ್ ಮಾಡಿ ಸಕ್ಸಸ್ ನ ಸಂತಸದಲ್ಲಿರುವ ಪಿ ಆರ್ ಕೆ ನಿರ್ಮಾಣ ಸಂಸ್ಥೆಯ ಬತ್ತಳಿಯಲ್ಲಿ ನಾಲ್ಕೈದು ಸಿನಿಮಾಗಳಿವೆ. ವಿಭಿನ್ನ ಕತೆಗಳನ್ನು ಆಯ್ಕೆ ಮಾಡಿಕೊಂಡು ಹೊಸ ರೀತಿಯ, ಸದಾಭಿರುಚಿಯ ಚಿತ್ರಗಳನ್ನು ಪ್ರೇಕ್ಷಕರಿಗೆ ಉಣ ಬಡಿಸಬೇಕೆನ್ನುವ ಪ್ರಯತ್ನ ಪಿ ಆರ್ ಕೆ ಬ್ಯಾನರ್ ಗೆ ನಿರ್ದೇಶಕ ಸತ್ಯ ಪ್ರಕಾಶ್ ಸೇರ್ಪಡೆಯಾಗಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ.

ಸಾಕಷ್ಟು ಹೊಸ ಪ್ರತಿಭೆಗಳಿಗೆ ಮಣೆ ಹಾಕುತ್ತಿರುವ ಪಿ ಆರ್ ಕೆ ಸಂಸ್ಥೆಗೆ ಸ್ಯಾಂಡಲ್ ವುಡ್ ನ ಬರವಸೆಯ ನಿರ್ದೇಶಕ ಸತ್ಯ ಪ್ರಕಾಶ್ ಸೇರಿಕೊಂಡಿದ್ದಾರೆ. ಸಾಲು ಸಾಲು ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿರುವ ಪುನೀತ್ ರಾಜ್ ಕುಮಾರ್ ಬ್ಯಾನರ್ ನಲ್ಲಿ ಸತ್ಯ ಪ್ರಕಾಶ್ ನಿರ್ದೇಶನ ಮಾಡುತ್ತಿರುವ ಸಿನಿಮಾ ಯಾವುದು? ಮುಂದೆ ಓದಿ..

ಪಿ ಆರ್ ಕೆ ಬ್ಯಾನರ್ ನಲ್ಲಿ ಸತ್ಯ ಪ್ರಕಾಶ್?

ಪಿ ಆರ್ ಕೆ ಬ್ಯಾನರ್ ನಲ್ಲಿ ಸತ್ಯ ಪ್ರಕಾಶ್?

'ರಾಮ ರಾಮ ರೇ' ಮತ್ತು 'ಒಂದಲ್ಲ ಎರಡಲ್ಲ' ಎರಡು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಸತ್ಯ ಪ್ರಕಾಶ್ ಈಗ ಮೂರನೆ ಸಿನಿಮಾದ ಸಿದ್ಧತೆಯಲ್ಲಿದ್ದಾರೆ. ಹ್ಯಾಟ್ರಿಕ್ ಸಾಧನೆ ಮಾಡಲು ಭರ್ಜರಿಯಾಗಿ ತಯಾರಾಗುತ್ತಿರುವ ಸತ್ಯಾ ಪ್ರಕಾಶ್ ಸಿನಿಮಾಗೆ ಪಿ ಆರ್ ಕೆ ನಿರ್ಮಾಣ ಸಂಸ್ಥೆ ಬಂಡವಾಳ ಹೂಡಲು ಮುಂದಾಗಿದೆ. ಮೂರನೆ ಸಿನಿಮಾ ಮತ್ತಷ್ಟು ವಿಭಿನ್ನವಾಗಿರಬೇಕೆನ್ನುವ ಕನಸು ಸತ್ಯ ಪ್ರಕಾಶ್ ಅವರದ್ದು. ಅದೇ ಕನಸಿನಲ್ಲಿ ಸ್ಕ್ರಿಪ್ಟ್ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ.

ಪಿ ಆರ್ ಕೆ ಬ್ಯಾನರ್ ಗ್ರೀನ್ ಸಿಗ್ನಲ್ ನೀಡಿದ್ರೆ ಸಿನಿಮಾ

ಪಿ ಆರ್ ಕೆ ಬ್ಯಾನರ್ ಗ್ರೀನ್ ಸಿಗ್ನಲ್ ನೀಡಿದ್ರೆ ಸಿನಿಮಾ

ಮೂಲಗಳ ಪ್ರಕಾರ ಸತ್ಯ ಪ್ರಕಾಶ್ ಕತೆ ಪಿ ಆರ್ ಕೆ ನಿರ್ಮಾಣ ಸಂಸ್ಥೆಗೆ ಇಷ್ಟ ಆದರೆ ಮಾತ್ರ ಪುನೀತ್ ನಿರ್ಮಾಣ ಸಂಸ್ಥೆಯಲ್ಲಿ ಸತ್ಯ ಪ್ರಕಾಶ್ ನಿರ್ದೇಶಕರಾಗಲಿದ್ದಾರೆ. ಸದ್ಯ ಸ್ಕ್ರಿಪ್ಟ್ ಕೆಲಸದಲ್ಲಿ ನಿರತರಾಗಿದ್ದಾರೆ ಸತ್ಯ ಪ್ರಕಾಶ್. ಅವರ ಕತೆಗೆ ಪಿ ಆರ್ ಕೆ ಬ್ಯಾನರ್ ಗ್ರೀನ್ ಸಿಗ್ನಲ್ ನೀಡಿದ್ರೆ ಸತ್ಯ ಪ್ರಕಾಶ್ ಮೂರನೆ ಸಿನಿಮಾ ಮತ್ತಷ್ಟು ಅದ್ಧೂರಿಯಾಗಿ ತಯಾರಾಗಲಿದೆ.

ಪಿ ಆರ್ ಕೆ ಬ್ಯಾನರ್ ನಲ್ಲಿ ಬರ್ತಿದೆ ಮಾಯಬಜಾರ್

ಪಿ ಆರ್ ಕೆ ಬ್ಯಾನರ್ ನಲ್ಲಿ ಬರ್ತಿದೆ ಮಾಯಬಜಾರ್

'ಕವಲುದಾರಿ' ಸಿನಿಮಾ ನಂತರ ಪಿ ಆರ್ ಕೆ ಬ್ಯಾನರ್ ನಲ್ಲಿ ಸೆಟ್ಟೇರಿದ ಸಿನಿಮಾ 'ಮಾಯಬಜಾರ್'. 'ಒಂದು ಮೊಟ್ಟೆಯ ಕಥೆ' ಖ್ಯಾತಿಯ ನಟ ರಾಜ್ ಬಿ ಶೆಟ್ಟಿ ಮತ್ತು ಕಿರುತೆರೆಯ ನಟಿ ಚೈತ್ರಾ ಮುಖ್ಯ ಭೂಮಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ರಾಧಕೃಷ್ಣ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸದ್ಯ ಚಿತ್ರೀಕರಣ ಹಂತದಲ್ಲಿರುವ 'ಮಾಯಬಜಾರ್' ಸದ್ಯದಲ್ಲೆ ತೆರೆಗೆ ಬರುವ ಸಾಧ್ಯತೆ ಇದೆ.

ಪ್ರಜ್ವಲ್ ಪತ್ನಿಯ 'ಲಾ' ಸಿನಿಮಾ

ಪ್ರಜ್ವಲ್ ಪತ್ನಿಯ 'ಲಾ' ಸಿನಿಮಾ

ನಟ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಚಂದ್ರನ್ ಅಭಿನಯದ 'ಲಾ' ಸಿನಿಮಾ ಕೂಡ ಪಿ ಆರ್ ಕೆ ಬ್ಯಾನರ್ ನಲ್ಲಿ ತಯಾರಾಗುತ್ತಿದೆ. ರಘು ಸಮರ್ಥ್ ನಿರ್ದೇಶನದಲ್ಲಿ ಮೂಡಿ ಬಂದಿರುವ 'ಲಾ' ಈಗಗಾಲೆ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ನಟಿ ರಾಗಿಣಿ ಚಂದ್ರನ್ ಮೊದಲ ಬಾರಿಗೆ ನಾಯಕಿಯಾಗಿ ಬೆಳ್ಳೆಪರದೆ ಮೇಲೆ ಮಿಂಚುತ್ತಿರುವ ಸಿನಿಮಾ. ಈ ಮೊದಲು ರಚಿತಾ ರಾಮ್ ನಿರ್ಮಾಣದ ಕಿರುಚಿತ್ರದಲ್ಲಿ ಅಭಿನಯಿಸಿದ್ದರು.

ಪುನೀತ್ ನಿರ್ಮಾಣದಲ್ಲಿ ಡ್ಯಾನೀಶ್ ಸೇಠ್

ಪುನೀತ್ ನಿರ್ಮಾಣದಲ್ಲಿ ಡ್ಯಾನೀಶ್ ಸೇಠ್

'ಹಂಬಲ್ ಪೊಲಿಟೀಶಿಯನ್ ನೋಗರಾಜ್' ಚಿತ್ರದ ನಂತರ ಡ್ಯಾನೀಶ್ ಸೇಠ್ ಪುನೀತ್ ರಾಜ್ ಕುಮಾರ್ ನಿರ್ಮಾಣ ಸಂಸ್ಥೆ ಸೇರಿಕೊಂಡಿದ್ದಾರೆ. ಅಂದ್ರೆ ಪಿ ಆರ್ ಕೆ ಬ್ಯಾನರ್ ನಲ್ಲಿ ತಯಾರಾಗುತ್ತಿರುವ ಸಿನಿಮಾದಲ್ಲಿ ಡ್ಯಾನೀಶ್ ಅಭಿನಯಿಸುತ್ತಿದ್ದಾರೆ. ವಿಶೇಷ ಅಂದ್ರೆ ಚಿತ್ರಕ್ಕೆ ಪನ್ನಗ ಭರಣ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇನ್ನು ಹೆಸರಿಡದ ಈ ಚಿತ್ರ ಕಾಮಿಡಿ ಸಿನಿಮಾವಾಗಿದೆಯಂತೆ.

More from Filmibeat

English summary
Rama Rama Re fame director Satya Prakash associate with Puneeth Rajkumar PRK production. He is busy in script working.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X