For Quick Alerts
  ALLOW NOTIFICATIONS  
  For Daily Alerts

  'ಜಯನಗರ 4th ಬ್ಲಾಕ್' ನಂತರ ಮತ್ತೆ ಒಂದಾದ ಧನಂಜಯ್ ಮತ್ತು ಸತ್ಯ ಪ್ರಕಾಶ್

  |

  ಸ್ಯಾಂಡಲ್ ವುಡ್ ನ ಡಾಲಿ ಈಗ ಮಂಕಿ ಸೀನನಾಗಿ ಅಬ್ಬರಿಸುತ್ತಿದ್ದಾರೆ. 'ಪಾಪ್ ಕಾರ್ನ್ ಮಂಕಿ ಟೈಗರ್' ಸಿನಿಮಾ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುವ ಧನಂಜಯ್ ಬಗ್ಗೆ ಮತ್ತೊಂದು ಸುದ್ದಿ ಕೇಳಿ ಬರುತ್ತಿದೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ಧನಂಜಯ್ ಈಗ ಮತ್ತೊಂದು ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.

  ಹೌದು, ಒಂದಲ್ಲ ಎರಡಲ್ಲ ಖ್ಯಾತಿಯ ನಿರ್ದೇಶಕ ಸತ್ಯ ಪ್ರಕಾಶ್,ಮಂಕಿ ಸೀನನಿಗೆ ನಿರ್ದೇಶನ ಮಾಡುತ್ತಿದ್ದಾರಂತೆ. 'ಜಯನಗರ 4th ಬ್ಲಾಕ್' ಎನ್ನುವ ಕಿರು ಚಿತ್ರದ ಮೂಲಕ ಮೋಡಿ ಮಾಡಿದ್ದ ಈ ಜೋಡಿ ಈಗ ಮತ್ತೆ ಒಂದಾಗುತ್ತಿರುವುದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.

  'ಪಾಪ್ ಕಾರ್ನ್' ಪೈರಸಿ: ಕೌಂಟರ್ ಕೊಟ್ಟ ಡಾಲಿ ಧನಂಜಯ್'ಪಾಪ್ ಕಾರ್ನ್' ಪೈರಸಿ: ಕೌಂಟರ್ ಕೊಟ್ಟ ಡಾಲಿ ಧನಂಜಯ್

  ಈಗಾಗಲೆ ಸತ್ಯ ಪ್ರಕಾಶ್ ಸ್ಕ್ರಿಪ್ಟ್ ಕೆಲಸ ಶುರುಮಾಡಿಕೊಂಡಿದ್ದಾರಂತೆ. ಇದು ಪಕ್ಕಾ ಕಮರ್ಶಿಯಲ್ ಸಿನಿಮಾವಾಗಿದ್ದು, ಚಿತ್ರದಲ್ಲಿ ಧನಂಜಯ್ ಎರಡು ಶೇಡ್ ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನೆಗೆಟಿವ್ ಮತ್ತು ಪಾಸಿಟಿವ್ ಎರಡು ಶೇಡ್ ಇರಲಿದೆ. ಅಂದ್ಹಾಗೆ ಈ ಸಿನಿಮಾವನ್ನು ಡಾಲಿ ಪಿಕ್ಚರ್ಸ್ ಮತ್ತು ಸತ್ಯ ಪಿಕ್ಚರ್ಸ್ ಒಟ್ಟಿಗೆ ಸೇರಿ ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ.

  ಈ ಸಿನಿಮಾ ಮಾರ್ಚ್ ನಲ್ಲಿ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ. ಈಗಾಗಲೆ ಧನಂಜಯ್ ಬಳಿ ಸಾಕಷ್ಟು ಸಿನಿಮಾಗಳಿವೆ. ಮಂಕಿ ಸೀನನ ಹ್ಯಾಂಗ್ ಓವರ್ ನಲ್ಲಿರುವ ಧನಂಜಯ್ ಬಳಿ ಡಾಲಿ, ಬಡವ ರಾಸ್ಕಲ್, ಯುವರ್ತನ, ಪೊಗರು ಮತ್ತು ಇತ್ತೀಚಿಗೆ ಅನೌನ್ಸ್ ಆದ ಭೂಗತ ಪಾತಕಿ ಎಂ.ಪಿ ಜಯರಾಜ್ ಸಿನಿಮಾ ಸೇರಿದಂತೆ ಸಾಕಷ್ಟು ಸಿನಿಮಾಗಲಿವೆ.

  ಈ ಎಲ್ಲಾ ಸಿನಿಮಾಗಳು ಮುಗಿದ ಬಳಿಕ ಸತ್ಯಾ ಪ್ರಕಾಶ್ ಮತ್ತು ಧನಂಜಯ್ ಹೊಸ ಸಿನಿಮಾ ಶುರುವಾಗಲಿದೆ. ಅಂದ್ಹಾಗೆ ಸತ್ಯ ಪ್ರಕಾಶ್ ಕೂಡ ಸದ್ಯ ಬ್ಯುಸಿ ಇದ್ದಾರೆ. ಪವ್ರ ಸ್ಟಾರ್ ಪುನೀತ್ ರಾಜ್ ಕುಮಾರ್ ಬ್ಯಾನರ್ ನಲ್ಲಿ ಸತ್ಯ ಪ್ರಕಾಶ್ ಸಿನಿಮಾ ಮಾಡುತ್ತಿದ್ದಾರೆ. ಹಾಗಾಗಿ ಸದ್ಯ ಇಬ್ಬರ ಕೈಯಲ್ಲಿರುವ ಪ್ರಾಜೆಕ್ಟ್ ಮುಗಿದ ಬಳಿಕ ಹೊಸ ಸಿನಿಮಾ ಶುರುವಾಗಲಿದೆ.

  English summary
  Director Satya Prakash will direct to Actor Dhananjaya after Jayanagar 4th block.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X