For Quick Alerts
  ALLOW NOTIFICATIONS  
  For Daily Alerts

  ಕಡೆಗೂ ಸತ್ಯಜಿತ್ ಜೊತೆಯಾಯ್ತು ಕೃತಕ ಕಾಲು

  By Pavithra
  |

  ಕನ್ನಡ ಸಿನಿಮಾರಂಗದಲ್ಲಿ ಉತ್ತಮ ಕಲಾವಿದನಾಗಿ ಸುಮಾರು 654ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸುತ್ತಾ ಕನ್ನಡ ಚಿತ್ರ ಪ್ರೇಕ್ಷಕರನ್ನ ರಂಜಿಸುತ್ತಾ ಬಂದಿರುವ ಸತ್ಯಜಿತ್ ಅವರಿಗೆ ಮತ್ತೆ ಜೀವನೋತ್ಸಹ ಸಿಕ್ಕಿದೆ.

  ಗ್ಯಾಂಗ್ರಿನ್'ಗೆ ತುತ್ತಾಗಿ ಎಡಗಾಲು ಕಳೆದುಕೊಂಡ ಸತ್ಯಜಿತ್ ಧೈರ್ಯಗುಂದದ ನಟ ಎನ್ನುವುದನ್ನ ನಿರೂಪಿಸಿದ್ದಾರೆ. ಬಾಗಲಕೋಟೆಯಿಂದ ಕೃತಕ ಕಾಲು ತರಿಸಿ ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಸತ್ಯಜಿತ್ ಅವರ ಸ್ಥಿತಿಯನ್ನ ನೋಡಿ ಕನ್ನಡ ಸಿನಿಮಾರಂಗವೂ ಕೂಡ ಅವರನ್ನ ಬಾಚಿ ತಬ್ಬಿಕೊಂಡಿತ್ತು.

  ಈಗಾಗಲೇ ನಾಲ್ಕಾರು ಚಿತ್ರಗಳಲ್ಲಿ ನಟಿಸಿ ಮತ್ತಷ್ಟು ಸಿನಿಮಾಗಳಲ್ಲಿ ಅಭಿನಯ ಮಾಡುತ್ತಿದ್ದಾರೆ. ಕೆ.ಎಸ್.ಆರ್.ಟಿ.ಸಿ. ಬಸ್ ಡ್ರೈವರ್ ಆಗಿದ್ದಾಗ ಅಯ್ಯಂಗಾರ್ ಹುಡುಗಿಯನ್ನು ಪ್ರೀತಿಸಿ ಮದುವೆಯಾದ ಈ ಮುಸಲ್ಮಾನ ಸಯ್ಯದ್ ಸತ್ಯಜಿತ್ ಆಗಿ ಬದಲಾಗಿ ಕುತೂಹಲದ ಸಂಗತಿ.

  ಒಂದು ಕಾಲು ಕಳಕೊಂಡರೂ ಬಾಳಸಂಗಾತಿಯೇ ಕಾಲಾಗಿ ಜೊತೆಯಾದರು. ಮಗ ನಾಯಕನಾಗಿ ಸಿನಿಮಾರಂಗಕ್ಕೆ ಕಾಲಿಡಲು ತಯಾರಿಯಲ್ಲಿದ್ದಾನೆ. ಮಗಳು ಪೈಲೆಟ್. 'ಆ ದೇವರು ನನಗೆ ಎಲ್ಲವನ್ನೂ ಕೊಟ್ಟಿದ್ದಾನೆ. ಒಂದು ಕಾಲನ್ನು ಮಾತ್ರ ತೆಗೆದುಕೊಂಡು ಬಿಟ್ಟ. ಆದರೂ ನಾನು ಎದೆಗುಂದಿಲ್ಲ. ಸದ್ಯ, ಈ ಕೃತಕ ಕಾಲಿಗೆ ಅಜೆಸ್ಟ್ ಆಗಲು ಶ್ರಮಿಸುತ್ತಿದ್ದೇನೆ ಎನ್ನುವುದು ಇಂದಿಗೂ ಸತ್ಯಜಿತ್ ಅವರ ಬಾಯಲ್ಲಿ ಬರುವ ಮಾತು.

  ಛೇ..ಸತ್ಯಜೀತ್ ಕಲಾ ಸೇವೆಗೆ ಕನ್ನಡ ಸಿನಿಮಾ ಕಲಾವಿದರ ಸಂಘ ಕೊಡುವ ಬೆಲೆ ಇದೇನಾ!?ಛೇ..ಸತ್ಯಜೀತ್ ಕಲಾ ಸೇವೆಗೆ ಕನ್ನಡ ಸಿನಿಮಾ ಕಲಾವಿದರ ಸಂಘ ಕೊಡುವ ಬೆಲೆ ಇದೇನಾ!?

  English summary
  Kannada film actor Satyajith was brought artificial leg from Bagalkot. Satyajit is currently practicing his artificial foot.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X