ತಮಿಳಿನಲ್ಲಿ 'ಕವಲುದಾರಿ' ರೀಮೇಕ್: ಅಪ್ಪ ಮತ್ತು ಮಗನೇ ಹೀರೋಗಳು

Recommended Video

ತಮಿಳಿನ ಕಾವಲುದಾರಿಯಲ್ಲಿ ಅಪ್ಪ ಮಕ್ಕಳ ಅಭಿನಯ

ಕನ್ನಡದ ಯಶಸ್ಸು ಕಂಡಿದ್ದ ಕವಲುದಾರಿ ಸಿನಿಮಾ ಈಗ ತಮಿಳಿನಲ್ಲಿ ರೀಮೇಕ್ ಆಗ್ತಿದೆ. ಹೇಮಂತ್ ರಾವ್ ನಿರ್ದೇಶಿಸಿ, ರಿಷಿ ಮತ್ತು ಅನಂತ್ ನಾಗ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ಈ ಚಿತ್ರದ ತಮಿಳು ಅವತರಣಿಕೆಯಲ್ಲಿ ನಿಜ ಜೀವನದ ಅಪ್ಪ ಮತ್ತು ಮಗನೇ ಅಭಿನಯಿಸುತ್ತಿದ್ದಾರೆ.

ಅನಂತ್ ನಾಗ್ ಪಾತ್ರದಲ್ಲಿ ಹಿರಿಯ ತಮಿಳು ನಟ ಸತ್ಯರಾಜ್ ಹಾಗೂ ರಿಷಿ ಕಾಣಿಸಿಕೊಂಡಿದ್ದ ಪಾತ್ರದಲ್ಲಿ ಸತ್ಯರಾಜ್ ಅವರ ಮಗ ಸಿಬಿರಾಜ್ ಬಣ್ಣ ಹಚ್ಚುತ್ತಿದ್ದಾರೆ.

ತಮಿಳಿನಲ್ಲಿ ಪ್ರದೀಪ್ ಕೃಷ್ಣಮೂರ್ತಿ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ. ಟ್ರಾಫಿಕ್ ಪೊಲೀಸ್ ಅಧಿಕಾರಿ ಸುಮಾರು 30 ವರ್ಷದ ಹಿಂದಿನ ಮರ್ಡರ್ ಕೇಸ್ ತನಿಖೆ ಮಾಡುವ ರೋಚಕ ಕಥಾಹಂದರವನ್ನ ಈ ಚಿತ್ರ ಹೊಂದಿದೆ.

Satyaraj And His Son Playing Lead Role In Kavaludaari Tamil Remake

ಸದ್ಯಕ್ಕೆ ಸತ್ಯರಾಜ್ ಮತ್ತು ಸಿಬಿರಾಜ್ ಅವರನ್ನ ಅಂತಿಮಗೊಳಿಸಿಕೊಂಡಿರುವ ನಿರ್ದೇಶಕ, ಉಳಿದ ಪಾತ್ರದಾರಿಗಳಿಗಾಗಿ ಹುಡುಕಾಟ ಮಾಡುತ್ತಿದ್ದಾರೆ. ಬಹುತೇಕ ಪ್ರೀ-ಪ್ರೊಡಕ್ಷನ್ ಕೆಲಸ ಮುಗಿಸಿರುವ ಚಿತ್ರತಂಡ ಅಕ್ಟೋಬರ್ ನಲ್ಲಿ ಸೆಟ್ಟೇರಲಿದೆ.

ಸಿಬಿರಾಜ್ ಮತ್ತು ಪ್ರದೀಪ್ ಕಾಂಬಿನೇಷನ್ ನಲ್ಲಿ ಈ ಹಿಂದೆ 'ಸತ್ಯ' ಎಂಬ ಸಿನಿಮಾ ಬಂದಿತ್ತು. ಇದೀಗ ಎರಡನೇ ಬಾರಿ ಈ ಜೋಡಿ ಒಂದಾಗಿದೆ. ಈ ಚಿತ್ರದ ಜೊತೆಗೆ ಸಿಬಿರಾಜ್ ಕೈಯಲ್ಲಿ ರಂಗಾ, ಮಾಯನ್ ಮತ್ತು ವಾಟ್ಲರ್ ಎಂಬ ಮೂರು ವಿಭಿನ್ನ ಪ್ರಾಜೆಕ್ಟ್ ಇದೆ.

More from Filmibeat

English summary
Anant nag and rishi starrer kavaludaari movie to remade in tamil. sathyaraj and sibiraj playing lead role in this project.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X