»   » ನಗೆ ಕಚ್ಚಾಯ : ಕಿರುತೆರೆಯಲ್ಲಿ 'ಸತ್ಯವಾನ್ ಸಾವಿತ್ರಿ'

ನಗೆ ಕಚ್ಚಾಯ : ಕಿರುತೆರೆಯಲ್ಲಿ 'ಸತ್ಯವಾನ್ ಸಾವಿತ್ರಿ'

Subscribe to Filmibeat Kannada


ಬೆಂಗಳೂರು, ನ. 08 : ದೀಪಾವಳಿ, ಈ ಬೆಳಕಿನ ಹಬ್ಬ ಬದುಕಿನ ದು:ಖಗಳನ್ನೆಲ್ಲ ಮರೆತು ಸಂತಸ ಅನುಭವಿಸುವ ಹಬ್ಬ. ಬೆಳಕಿನ ಹಬ್ಬವನ್ನು ನಗುವಿನ ಹಬ್ಬವಾಗಿಸಲು ಜೀ ಕನ್ನಡದಲ್ಲಿ ವೀಕ್ಷಿಸಿ 2007ರ ಬ್ಲಾಕ್ ಬಸ್ಟರ್ ಸಿನೆಮಾ "ಸತ್ಯವಾನ್ ಸಾವಿತ್ರಿ".

ಎರಡೂವರೆ ತಾಸುಗಳ ಭರಪೂರ್ ಮನರಂಜನೆಯ "ಸತ್ಯವಾನ್ ಸಾವಿತ್ರಿ" ನವೆಂಬರ್ 10ರಂದು ಮಧ್ಯಾಹ್ನ 12.30ಕ್ಕೆ ನಿಮ್ಮ ಮನೆಯ ಕಿರುತೆರೆಯಲ್ಲಿ ಮೂಡಿಬರಲಿದೆ. ಪರಮ ರಸಿಕ ಡಾ.ಸತ್ಯನ ಲೀಲೆಗಳು ಹಾಗೂ ಅವನ ಸುಳ್ಳುಗಳಿಂದ ಆಗುವ ಪೇಚಾಟಗಳು ನಿಮ್ಮನ್ನು ನಗೆಗಡಲಲ್ಲಿ ಮುಳುಗಿಸುತ್ತವೆ.

ರಮೇಶ್ ಅರವಿಂದ್, ಡೈಸಿ ಬೋಪಣ್ಣ, ಜೆನ್ನಿಫರ್ ಕೊತ್ವಾಲ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಕೋಮಲ್, ಅನಿರುದ್ಧ, ಮೋಹನ್, ಮುಂತಾದವರು ಸಹಕಲಾವಿದರಾಗಿ ಅಭಿನಯಿಸುತ್ತಿದ್ದಾರೆ. ಲಾಂಗು ಮಚ್ಚುಗಳ ಸಿನೆಮಾ ಭರಾಟೆಯೇ ಕನ್ನಡ ಸಿನೆಮಾ ರಂಗದಲ್ಲಿರುವಾಗ, ಉಳಿದ ಸಿನೆಮಾಗಳಿಗಿಂತ ಭಿನ್ನವಾಗಿ ಹಾಸ್ಯ ಸಿನೆಮಾ ಮಾಡಿ ಯಶಸ್ಸು ಕಂಡವರು ರಮೇಶ್ ಅರವಿಂದ್. ಅವರ ನಿರ್ದೇಶನದ "ಸತ್ಯವಾನ್ ಸಾವಿತ್ರಿ" ಇದಕ್ಕೆ ಉದಾಹರಣೆ.

ಪಿ.ಕೆ.ಎಚ್.ದಾಸ್ ಛಾಯಾಗ್ರಹಣ, ರಾಜೇಂದ್ರ ಕಾರಂತ್ ಸಂಭಾಷಣೆ ಹಾಗೂ ಗುರುಕಿರಣ್ ಅವರು ಸಂಗೀತ ಸಂಯೋಜನೆ ನೀಡಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada