ರಘು ಮುಖರ್ಜಿ ಜೊತೆ ಚಂದ್ರು 'ಸವಾರಿ' ಏನಿದು?

By Rajendra

ಹೇಗೆ ಏನು ಎಂಬುದನ್ನೆಲ್ಲ ಹೇಳುವುದಿಲ್ಲ ಚಂದ್ರು. ಆದರೆ ಮೊದಲ ಬಾರಿಗೆ ಸಿನಿಮಾವೊಂದನ್ನ ನಿರ್ದೇಶಿಸಲು ಅವಕಾಶ ಸಿಕ್ಕಿರುವುದರಿಂದ ಆತ ತುಂಬಾ ಉತ್ಸಾಹದಲ್ಲಿದ್ದಾರೆ. ರಘು ಮುಖರ್ಜಿ ಅಭಿನಯಿಸಿರುವ 'ಸವಾರಿ' ಸಿನಿಮಾಕ್ಕೂ ಈ ಸಿನಿಮಾಕ್ಕೂ ಯಾವುದೇ ಹೋಲಿಕೆ ಇಲ್ಲ. ಜೊತೆಗೆ ಆ 'ಸವಾರಿ'ಯ ಮುಂದುವರಿದ ಭಾಗ ಕೂಡ ಇದಲ್ಲ ಅನ್ನೋದು ಅವರ ಖಚಿತ ನುಡಿ.

ಬನಶಂಕರಿ ಎರಡನೇ ಹಂತದ ಧರ್ಮಗಿರಿ ದೇವಸ್ಥಾನದಲ್ಲಿ ತಮ್ಮ 'ಸವಾರಿ ಟು 1000 ಎಡಿ' ಸಿನಿಮಾದ ಮುಹೂರ್ತ ಮಾಡಿದ ತಿಮ್ಮಾಪಳ್ಳಿ ಚಂದ್ರು, ಈ ಚಿತ್ರದಲ್ಲಿ ಒಂದು ಸಾವಿರ ವರ್ಷದ ಹಿಂದಿನ ಚಿತ್ರಣವನ್ನ ಕಟ್ಟಿಕೊಡುವುದಾಗಿ ಹೇಳಿಕೊಳ್ಳುತ್ತಾರೆ.

ಪ್ರಸ್ತುತದಲ್ಲಿ ನಡೆಯುತ್ತಿರುವ ಕಥೆಯಾದರೂ, ಅದೇಕೋ ನಾಯಕ ಮಾತ್ರ ಏಕ್ದಂ ಒಂದು ಸಾವಿರ ವರ್ಷಗಳಷ್ಟು ಹಿಂದಕ್ಕೆ 'ಸವಾರಿ' ಮಾಡಿಬಿಡುತ್ತಾನಂತೆ. ಅದು ಕನಸೋ ಅಥವಾ ಯಾವುದರ ಮೂಲಕ ನಾಯಕ ಅಲ್ಲೀವರೆಗೂ ಹೋಗಿ ಬರುತ್ತಾನೆ ಅನ್ನೋದೆಲ್ಲ ಗೊತ್ತಿಲ್ಲ. ನಿರ್ದೇಶಕರನ್ನ ಕೇಳಿದರೆ, ತಿಮ್ಮಾಪಳ್ಳಿ ಚಂದ್ರು ಚಿತ್ರ ನೋಡಿ ಪ್ಲೀಸ್ ಎಂದು ವಿನಂತಿಸಿಕೊಳ್ಳುತ್ತಿದ್ದಾರೆ.

ಒಂದು ಸಾವಿರ ವರ್ಷಗಳಷ್ಟು ಹಿಂದಕ್ಕೆ ಹೋಗಿ ಅವತ್ತಿನ ಚಿತ್ರಣ ಕಟ್ಟಿಕೊಡುವುದು ಅಷ್ಟು ಸುಲಭದಲ್ಲ. ಚಂದ್ರು ಹೊಸಬ. ಜೊತೆಗೆ ಇದೇ ಪ್ರಥಮ ಬಾರಿಗೆ ನಿರ್ಮಾಣಕ್ಕಿಳಿದಿರುವ ಹೊಸ ನಿರ್ಮಾಪಕ ಬೇರೆ. ಆ ಮ್ಯಾಜಿಕ್ಕನ್ನೆಲ್ಲ ಮಾಡಿ ಜಯಿಸಿಕೊಳ್ಳುತ್ತಾರಾ ಚಂದ್ರು ಅನ್ನೋದು ಕುತೂಹಲ. (ಒನ್‌ಇಂಡಿಯಾ ಕನ್ನಡ)

More from Filmibeat

English summary
Indian model turned Kannada actor Raghu Mukherjee's upcoming film Savaari to 1000 AD launched in Bangalore. Raghu will romance actress Milana in his Savaari while it is being produced by P Chandrashekar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X