ಸವಿ ಮಾದಪ್ಪ ಆತ್ಮಹತ್ಯೆ: ಅನುಮಾನಕ್ಕೆ ಎಡೆ ಮಾಡಿಕೊಟ್ಟ ಪ್ರಿಯಕರನ ನಡೆ

ಕಿರುತೆರೆ ನಟಿ ಸವಿ ಮಾದಪ್ಪ (ಸೌಜನ್ಯಾ) ಸೆಪ್ಟೆಂಬರ್ 30ರಂದು ಬೆಂಗಳೂರಿನ ಅಪಾರ್ಟ್‌ಮೆಂಟ್ ಒಂದರಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದರು. ಪ್ರಕರಣದ ತನಿಖೆ ನಡೆಸುತ್ತಿರುವ ಕುಂಬಳಗೋಡ ಪೊಲೀಸರು ನಟಿ ಸಾವಿಗೆ ಸಂಬಂಧಪಟ್ಟ ಹಲವರನ್ನು ವಿಚಾರಣೆ ನಡೆಸುತ್ತಿದ್ದಾರೆ.

ಸವಿ ಮಾದಪ್ಪ ಪೋಷಕರು ನಟಿಯ ಪಿಎ ಮಹೇಶ್ ಹಾಗೂ ಪ್ರಿಯಕರ ವಿವೇಕ್ ವಿರುದ್ಧ ಆರೋಪ ಹೊರಿಸಿ ದೂರು ನೀಡಿದ್ದಾರೆ. ವಿವೇಕ್ ಕೆಲವು ವರ್ಷಗಳಿಂದ ನನ್ನ ಮಗಳನ್ನು ಮದುವೆ ಆಗುವಂತೆ ಒತ್ತಾಯ ಹೇರುತ್ತಿದ್ದ ಎಂದಿದ್ದಾರೆ.

ಕೆಲವು ತೆಲುಗು, ಕನ್ನಡ ಧಾರಾವಾಹಿಗಳಲ್ಲಿ ನಟಿಸಿರುವ ವಿವೇಕ್‌ಗೆ ಕುಂಬಳಗೋಡ ಪೊಲೀಸರು ನೊಟೀಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಹೇಳಿದ್ದರು. ಆದರೆ ವಿವೇಕ್ ವಿಚಾರಣೆಗೆ ಗೈರಾಗಿದ್ದಾರೆ, ಪೊಲೀಸರ ಸಂಪರ್ಕಕ್ಕೂ ಸಿಗುತ್ತಿಲ್ಲ ಎನ್ನಲಾಗುತ್ತಿದೆ. ವಿವೇಕ್‌ರ ಈ ನಡೆ ಅವರ ಮೇಲೆ ಅನುಮಾನ ಮೂಡುವಂತೆ ಮಾಡಿದೆ.

ವಿವೇಕ್, ಶನಿವಾರ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಬೇಕಿತ್ತು, ಆದರೆ ವಿವೇಕ್ ವಿಚಾರಣೆಗೆ ಬಂದಿಲ್ಲ. ವಿವೇಕ್‌ರ ಹೇಳಿಕೆಯ ಲಿಖಿತ ದಾಖಲೆಯನ್ನು ಪೊಲೀಸರು ಮಾಡಿಕೊಳ್ಳಬೇಕಿತ್ತು, ವಿವೇಕ್‌ರ ಮೊಬೈಲ್ ಮಾಹಿತಿಗಳನ್ನು ಸಹ ಪರಿಶೀಲನೆ ಮಾಡಬೇಕಿತ್ತು. ಆದರೆ ಇದ್ಯಾವುದು ಸಹ ಸಾಧ್ಯವಾಗಿಲ್ಲ.

ವಿಚಾರಣೆಗೆ ಗೈರಾದ ವಿವೇಕ್

ವಿಚಾರಣೆಗೆ ಗೈರಾದ ವಿವೇಕ್

ವಿಚಾರಣೆಗೆ ವಿವೇಕ್ ಹಾಜರಾಗದಿರುವುದು ವಿವೇಕ್‌ ಮೇಲೆ ಅಲ್ಪಮಟ್ಟದ ಅನುಮಾನ ಮೂಡಲು ಕಾರಣವಾಗಿದೆ. ''ಸಪ್ನಾ ಸಾಯುವ ಸಮಯದಲ್ಲಿ ನಾನು ಆಕೆಯೊಂದಿಗೆ ಇರಲಿಲ್ಲ'' ಎಂದು ವಿವೇಕ್ ಸೆಪ್ಟೆಂಬರ್ 30ರಂದು ಪೊಲೀಸರಿಗೆ ಹೇಳಿದ್ದರು ಎನ್ನಲಾಗಿದೆ. ನಟಿಯ ಪಿಎ ಮಹೇಶ್ ಅನ್ನು ಈಗಾಗಲೇ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಸವಿ ಮಾದಪ್ಪ ಸಾವಿಗೆ ಕಾರಣ ಗೊತ್ತಿಲ್ಲ: ವಿವೇಕ್

ಸವಿ ಮಾದಪ್ಪ ಸಾವಿಗೆ ಕಾರಣ ಗೊತ್ತಿಲ್ಲ: ವಿವೇಕ್

ಎರಡು ದಿನದ ಹಿಂದೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ವಿವೇಕ್, ''ಸವಿ ಮಾದಪ್ಪ ಸಾವಿಗೆ ಕಾರಣ ಏನೆಂದು ನನಗೆ ಗೊತ್ತಿಲ್ಲ. ಆಕೆಯ ಸಾವಿಗೆ ಕಾರಣವೇನೆಂದು ನೀವೆಲ್ಲ ಎದುರು ನೋಡುತ್ತಿರುವಂತೆ ನಾನೂ ಎದುರು ನೋಡುತ್ತಿದ್ದೇನೆ. ಆಕೆ ಬಹಳ ಒಳ್ಳೆಯ ಹುಡುಗಿ, ಬಹಳ ಮುಗ್ಧೆ ಆಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ ಎಂದೂ ಎನಿಸಿರಲಿಲ್ಲ. ಆಕೆಯ ಮರಣೋತ್ತರ ಪರೀಕ್ಷಾ ವರದಿ ಬರಲೆಂದು ನಾನೂ ಕಾಯುತ್ತಿದ್ದೇನೆ. ಆಕೆಯ ಸಾವಿಗೆ ಕಾರಣವೇನು ಎಂದು ನಾನು ತಿಳಿದುಕೊಳ್ಳಬೇಕಿದೆ'' ಎಂದಿದ್ದರು.

ಯಾರು ತಪ್ಪಿತಸ್ಥರು ಎಂಬುದು ಗೊತ್ತಾಗಲಿದೆ: ವಿವೇಕ್

ಯಾರು ತಪ್ಪಿತಸ್ಥರು ಎಂಬುದು ಗೊತ್ತಾಗಲಿದೆ: ವಿವೇಕ್

''ನಾವು ಲಿವ್‌ ಇನ್ ರಿಲೇಷನ್‌ನಲ್ಲಿರಲಿಲ್ಲ. ಆಕೆ ಆಗಾಗ್ಗೆ ನನಗೆ ಸಿಗುತ್ತಿದ್ದಳು. ಬೇಸರ ಎನಿಸಿದಾಗ ನನ್ನನ್ನು ಭೇಟಿ ಮಾಡುತ್ತಿದ್ದಳು, ಸ್ವಲ್ಪ ಕಾಲ ಮಾತನಾಡುತ್ತಿದ್ದೆವು, ಕಷ್ಟ-ಸುಖ ಹಂಚಿಕೊಳ್ಳುತ್ತಿದ್ದಳು, ಆಕೆ ಬೇಸರಗೊಂಡಿದ್ದಳು, ಆದರೆ ಏಕೆ ಎಂಬುದು ಗೊತ್ತಿಲ್ಲ. ಮಗಳನ್ನು ಕಳೆದುಕೊಂಡಿದ್ದಾರೆ ಅದಕ್ಕೆ ಹಾಗೆ ಮಾತನಾಡುತ್ತಿದ್ದಾರೆ. ಮದುವೆಗೆ ಯಾರು ಒತ್ತಾಯ ಮಾಡಿದ್ದರು ಎಂಬೆಲ್ಲ ಅಂಶಗಳು ಮುಂದೆ ನಿಮಗೇ ಗೊತ್ತಾಗಲಿವೆ, ಪೊಲೀಸರ ತನಿಖೆ ಮುಗಿಯುವವರೆಗೆ ತಾಳ್ಮೆಯಿಂದಿರಿ'' ಎಂದು ಮಾಧ್ಯಮಗಳ ಬಳಿ ಮನವಿ ಮಾಡಿದ್ದರು. ಆದರೆ ಈಗ ವಿಚಾರಣೆಗೆ ಗೈರಾಗುವ ಮೂಲಕ ಅವರೇ ತನಿಖೆಗೆ ಅಸಹಕಾರ ನೀಡಿದ್ದಾರೆ.

ಸೂಸೈಡ್‌ ನೋಟ್ ಬರೆದಿದ್ದ ಸವಿ ಮಾದಪ್ಪ

ಸೂಸೈಡ್‌ ನೋಟ್ ಬರೆದಿದ್ದ ಸವಿ ಮಾದಪ್ಪ

ಸವಿ ಮಾದಪ್ಪ, ಕನ್ನಡದ 'ಚೌಕಟ್ಟು', 'ಫನ್' ಸಿನಿಮಾಗಳಲ್ಲಿ ನಟಿಸಿದ್ದರು. ಜೊತೆಗೆ ಕೆಲವು ಧಾರಾವಾಹಿಗಳಲ್ಲಿಯೂ ಸವಿ ನಟಿಸಿದ್ದರು. ಬೆಂಗಳೂರು ದಕ್ಷಿಣ ತಾಲೂಕಿನ ದೊಡ್ಡಬೆಲೆ ಗ್ರಾಮದ ಅಪಾರ್ಟ್‌ಮೆಂಟ್‌ನಲ್ಲಿ ಬಾಯ್‌ಫ್ರೆಂಡ್‌ ಜೊತೆ ಇದ್ದ ಸವಿ ಮಾದಪ್ಪ ಸೆಪ್ಟೆಂಬರ್ 30 ಬೆಳಗ್ಗೆ ಗೆಳೆಯ ತಿಂಡಿ ತರಲು ಹೊರಗೆ ಹೋಗಿದ್ದ ಸಂದರ್ಭದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸವಿ ಮಾದಪ್ಪ ಬರೆದಿದ್ದಾರೆ ಎನ್ನಲಾದ ಡೆತ್‌ ನೋಟ್ ಪೊಲೀಸರಿಗೆ ದೊರಕಿದ್ದು, ''ನನ್ನ ಗೆಲುವಿಗೆ ಸಹಾಯ‌ ಮಾಡಿ ಎಲ್ಲರಿಗೂ ಧನ್ಯವಾದಗಳು. ಜೀವನದಲ್ಲಿ ತುಂಬಾನೆ ಜವಬ್ದಾರಿ ಇತ್ತು. ನನ್ನ ಸಾವಿಗೆ ಯಾರೂ ಕಾರಣರಲ್ಲ, ನಾನೇ ಕಾರಣ. ನಾನು ಮಾತು ಕೊಟ್ಟ ಯಾವುದೇ ಕೆಲಸ ಮಾಡಲು ಸಾಧ್ಯವಾಗಿಲ್ಲ. ಐ ಲವ್ ಯು ಪಪ್ಪ, ಅಮ್ಮ ನಾನು ಮನೆಗೆ ಬರುತ್ತೇನೆ ಎಂದು ಹೇಳಿದ್ದೆ. ಆದರೆ ಈ ಸ್ಥಿತಿಯಲ್ಲಿ ಮನೆಗೆ ಬರುತ್ತೇನೆ ಅಂದುಕೊಂಡಿರಲಿಲ್ಲ. ನನಗೆ ಮುಂದೆ ಒಳ್ಳೆಯ ಭವಿಷ್ಯ ಇತ್ತು ಅನ್ನೋದು ಗೊತ್ತಿದೆ, ಆದರೂ ಪರವಾಗಿಲ್ಲ. ನನ್ನ‌ ಸಾವಿನ ಬಗ್ಗೆ ಹಾಗೂ ಬರೆದಿರುವ ಪತ್ರವನ್ನ ಯಾವುದೇ ಮಾಧ್ಯಮಗಳಿಗೂ ಕೊಡಬೇಡಿ'' ಎಂದು ನಟಿ ಸವಿ ಮಾದಪ್ಪ ಮನವಿ ಮಾಡಿದ್ದರು.

ಸಹಾಯವಾಣಿ; ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಸ್ಥಾಪನೆ ಮಾಡಲಾಗಿದೆ. ದೂರವಾಣಿ ಸಂಖ್ಯೆ 080 - 25497777.

More from Filmibeat

English summary
Actress Savi Madappa's boyfriend Vivek absent for police inquiry. Savi Madappa died on September 30. Savi Madappa's parents alleged that Vivek is the reason of their daughter's death.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X