For Quick Alerts
ALLOW NOTIFICATIONS  
For Daily Alerts

ಸಖತ್ ಜೋರಾಗಿದೆ 'ಯುವರತ್ನ' ನಾಯಕಿ ಸಯೇಶಾ ಮದುವೆ ಸಂಭ್ರಮ

|

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಹೊಸ ಸಿನಿಮಾ 'ಯುವರತ್ನ' ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿರುವ ಸಯೇಶಾ ಅವರ ಮದುವೆ ಮಾರ್ಚ್ 9 ಮತ್ತು 10 ರಂದು ಅದ್ಧೂರಿಯಾಗಿ ನಡೆಯಲಿದೆ. ತಮಿಳು ನಟ ಆರ್ಯ ಅವರ ಕೈಹಿಡಿಯುತ್ತಿರುವ ಸಯೇಶಾ ಅವರ ಮನೆಯಲ್ಲಿ ಈಗಾಗಲೇ ಸಂಭ್ರಮ ಜೋರಾಗಿದೆ.

ಪ್ರೇಮಿಗಳ ದಿನಾಚರಣೆಯ ದಿನ ಇಬ್ಬರ ಮದುವೆ ವಿಚಾರವನ್ನು ಬಹಿರಂಗ ಪಡಿಸುವ ಮೂಲಕ ಅಭಿಮಾನಿಗಳಿಗೆ ಅಚ್ಚರಿ ನೀಡಿದ್ದ ಈ ಜೋಡಿ ಇವತ್ತು ಮತ್ತು ನಾಳೆ ಹೈದ್ರಾಬಾದ್ ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಖಾಸಗಿಯಾಗಿ ನಡೆಯುವ ಇಬ್ಬರ ಮದುವೆ ಸಮಾರಂಭಕ್ಕೆ ಬಾಲಿವುಡ್ ಮತ್ತು ಕಾಲಿವುಡ್ ಚಿತ್ರರಂಗದ ಗಣ್ಯರು ಸಾಕ್ಷಿಯಾಗಲಿದ್ದಾರೆ.

ತೆಲುಗು ನಟ ಅಖಿಲ್ ಅಕ್ಕಿನೇನಿ ಅಭಿನಯದ ಚೊಚ್ಚಲ ಅಖಿಲ್ ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಮುಂಬೈ ಮೂಲದ ಸಯೇಶಾ ಸೈಗಲ್ ಸೌತ್ ಸಿನಿ ಇಂಡಸ್ಟ್ರಿಗೆ ಪರಿಚಿತರಾದರು. ನಂತರ ಬಾಲಿವುಡ್ ನಲ್ಲಿ ಅಜಯ್ ದೇವಗನ್ ಅಭಿನಯದ ಶಿವಾಯ್ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅಷ್ಟಕ್ಕೂ, ಬಹುಭಾಷಾ ನಟಿ ಸಯೇಶಾ ಸೈಗಲ್ ಸಂಗೀತ್ ಸಂಭ್ರಮ ಹೇಗಿದೆ ಗೊತ್ತಾ? ಮುಂದೆ ಓದಿ

ಸಂಗೀತ್ ಸಂಭ್ರಮದಲ್ಲಿ ಸಯೇಶಾ

ಸಂಗೀತ್ ಸಂಭ್ರಮದಲ್ಲಿ ಸಯೇಶಾ

ಹೈದ್ರಾಬಾದ್ ನಲ್ಲಿ ಸಯೇಶಾ ಮತ್ತು ಆರ್ಯ ಅವರ ಮದುವೆ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆಯುತ್ತಿದೆ. ಸಯೇಶಾ ಮನೆಯಲ್ಲಿ ಇಂದು ಸಂಗೀತ್ ಕಾರ್ಯಕ್ರಮದ ರಂಗು ಕಳೆಗಟ್ಟಿದೆ. ಪಿಂಕ್ ಕಲರ್ ಲೆಹಂಗಾದಲ್ಲಿ ಮದುಮಗಳಾಗಿ ಸಯೇಶಾ ಕಂಗೊಳಿಸುತ್ತಿದ್ದಾರೆ. ಈ ಅದ್ದೂರಿ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ಸಂಜಯ್ ದತ್ ಅತಿಥಿಯಾಗಿ ಭಾಗಿಯಾಗಿದ್ದು ವಿಶೇಷವಾಗಿತ್ತು.

ಇಬ್ಬರ ನಡುವೆ 17 ವರ್ಷ ವಯಸ್ಸಿನ ಅಂತರ

ಇಬ್ಬರ ನಡುವೆ 17 ವರ್ಷ ವಯಸ್ಸಿನ ಅಂತರ

ಪ್ರೀತಿಗೆ ವಯಸ್ಸಿನ ಅಂತರವಿಲ್ಲ ಎಂದು ಹೇಳುತ್ತಾರೆ. ಈ ಜೊಡಿಯ ವಿಚಾರದಲ್ಲಿ ನಿಜವಾಗಿದೆ. ಯಾಕಂದ್ರೆ ಸಯೇಶಾಗೆ ಇನ್ನೂ 21 ವರ್ಷ. ಚಿತ್ರರಂಗದಲ್ಲಿನ್ನೂ ಅಂಬೆಗಾಲಿಡುತ್ತಿರುವ ನಟಿ. ಆದ್ರೆ ನಟ ಆರ್ಯ ಅವರಿಗೆ 38 ವರ್ಷ ವಯಸ್ಸಾಗಿದೆ. ಇಬ್ಬರ ನಡುವ ಬರೋಬ್ಬರಿ 17 ವರ್ಷದ ಅಂತರವಿದೆ.

'ಘಜನಿಕಾಂತ್' ಚಿತ್ರದಲ್ಲಿ ಅರಳಿದ ಪ್ರೇಮ

'ಘಜನಿಕಾಂತ್' ಚಿತ್ರದಲ್ಲಿ ಅರಳಿದ ಪ್ರೇಮ

ಅಸಲಿಗೆ ಈ ತಾರಾ ಜೋಡಿಯ ಪ್ರೇಮ್ ಕಹಾನಿ ಶುರುವಾಗಿದ್ದು "ಘಜನಿಕಾಂತ್" ಚಿತ್ರದ ಮೂಲಕ. "ಘಜನಿಕಾಂತ್" ಚಿತ್ರದಲ್ಲಿ ಆರ್ಯಾಗೆ ನಾಯಕಿಯಾಗಿ ಮಿಂಚಿದ್ದರು ಸಯೇಶಾ. ಆಗಲೆ ಇಬ್ಬರ ನಡುವೆ ಪ್ರೀತಿ ಶುರುವಾಗಿದ್ದು. ನಂತರ ಇವರಿಬ್ಬರ ಪ್ರೀತಿಗೆ ಮನೆಯವರಿಂದ ಗ್ರೀನ್ ಸಿಗ್ನಲ್ ಸಹ ಸಿಕ್ಕಿದೆ, ಈಗ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಮುಸ್ಲಿಂ ಸಂಪ್ರದಾಯದಂತೆ ಮದುವೆ

ಮುಸ್ಲಿಂ ಸಂಪ್ರದಾಯದಂತೆ ಮದುವೆ

ಅಂದ್ಹಾಗೆ, ಸಯೇಶಾ ಮತ್ತು ಆರ್ಯ ಮದುವೆ ಮುಸ್ಲಿಂ ಕುಟುಂಬದ ಸಂಪ್ರದಾಯದಂತೆ ನಡೆಯಲಿದೆ. ಆರ್ಯ ಮತ್ತು ಸಯೇಶಾ ಇಬ್ಬರು ಮುಸ್ಲಿಂ ಕುಟುಂಬದವರಾಗಿದ್ದರಿಂದ ಮದುವೆ ಸಹ ಮುಸ್ಲಿಂ ಸಂಪ್ರದಾಯದ ಪ್ರಕಾರ ನಡೆಯಲಿದೆ.

ಹೈದ್ರಾಬಾದ್ ನಲ್ಲಿ ಆರತಕ್ಷತೆ

ಹೈದ್ರಾಬಾದ್ ನಲ್ಲಿ ಆರತಕ್ಷತೆ

ಈಗಾಗಲೇ ಹೈದ್ರಾಬಾದ್ ನಲ್ಲಿ ಸಂಗೀತ್ ಮತ್ತು ಮೆಹಂದಿ ಕಾರ್ಯಕ್ರಮ ಭರಾಟೆ ಜೋರಾಗಿದೆ. ಮಾರ್ಚ್ 9ಕ್ಕೆ ಅಂದರೆ ನಾಳೆ ಹೈದ್ರಾಬಾದ್ ನಲ್ಲಿ ವಿವಾಹ ಕಾರ್ಯಕ್ರಮ ನಡೆಯಲಿದೆ. ಜೊತೆಗೆ ಆರತಕ್ಷತೆಯೂ ಸಹ ಹೈದ್ರಾಬಾದ್ ನಲ್ಲೇ ನಡೆಯಲಿದೆ. ಆದರೆ ಸಯೇಶಾ ಕುಟುಂಬ ಮುಂಬೈ ಮೂಲದವರಾದರಿಂದ ಮುಂಬೈನಲ್ಲಿಯೂ ಆರತಕ್ಷತೆ ನಡೆಸಲು ಪ್ಲಾನ್ ಮಾಡಿದ್ದಾರೆ.

English summary
The celebrations for actors Sayyeshaa Saigal and Arya's wedding have already begun. Several pictures from what appears to be a sangeet ceremony have been shared on social media.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more