Seat Edge Trailer: ಬೆದರಿಸುವ 'ಸೀಟ್ ಎಡ್ಜ್' ಟ್ರೈಲರ್; ಕುತೂಹಲ ಕೆರಳಿಸಿದ ಹಾರರ್ ಥ್ರಿಲ್ಲರ್

ಚೇತನ್ ಶೆಟ್ಟಿ ನಿರ್ದೇಶನದ ಆಕ್ಷನ್ ಥ್ರಿಲ್ಲರ್ 'ಸೀಟ್ ಎಡ್ಜ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಮುಂದಿನ ವಾರ ಸಿನಿಮಾ ತೆರೆಗಪ್ಪಳಿಸಲಿದ್ದು ಸದ್ಯ ಟ್ರೈಲರ್ ರಿಲೀಸ್ ಆಗಿ ಗಮನ ಸೆಳೆಯುತ್ತಿದೆ. ಸಿದ್ದು ಮೂಲಿಮನೆ, ರವಿಕ್ಷಾ ಶೆಟ್ಟಿ, ರಾಘು ರಾಮಣ್ಣ ಕೊಪ್ಪ, ಗಿರಿ ಶಿವಣ್ಣ, ಮಿಮಿಕ್ರಿ ಗೋಪಿ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

ವ್ಲಾಗ್ಲರ್ ಒಬ್ಬನ ನೋವು ನಲಿವಿನ ಕಥೆ ಈ ಚಿತ್ರದಲ್ಲಿದೆ. 'ಎನ್‌.ಆರ್‌. ಸಿನಿಮಾ ಪ್ರೊಡಕ್ಷನ್ಸ್‌' ಬ್ಯಾನರ್ ಅಡಿಯಲ್ಲಿ ಗಿರಿಧರ ಟಿ ವಸಂತ ಪುರ 'ಸೀಟ್ ಎಡ್ಜ್' ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಟೀಸರ್, ಸಾಂಗ್ಸ್ ರಿಲೀಸ್ ಹಿಟ್ ಆಗಿ ಸಿನಿಮಾ ಬಗ್ಗೆ ಕುತೂಹಲ ಮೂಡಿಸಿತ್ತು. ಇದೀಗ ಟ್ರೈಲರ್ ರಿಲೀಸ್ ಆಗಿ ಹೈಪ್ ಕ್ರಿಯೇಟ್ ಮಾಡ್ತಿದೆ. ಈಗಾಗಲೇ ಒಂದಷ್ಟು ಸಿನಿಮಾಗಳಲ್ಲಿ ನಟಿಸಿ ಭರವಸೆ ಮೂಡಿಸಿರುವ ಸಿದ್ದು ಮೂಲಿಮನಿ ಮತ್ತೊಮ್ಮೆ ಹೀರೊ ಆಗಿ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ.

Seat Edge Trailer Creates Buzz Sidhu Moolimane s Horror Thriller set to release January 30

'ನನ್‌ ನೋಡಿ' ಎಂಬ ಯೂಟ್ಯೂಬ್ ಚಾನಲ್ ಹೊಂದಿರುವ ಸಿದ್ದು ಕಂಟೆಂಟ್ ಕ್ರಿಯೇಟ್ ಮಾಡಲು ಏನೆಲ್ಲಾ ಸರ್ಕಸ್ ಮಾಡ್ತಾನೆ? ಮುಂದೆ ಅವನ ಬದುಕಿನಲ್ಲಿ ಏನೆಲ್ಲಾ ತಿರುವುಗಳು ಸಿಗುತ್ತದೆ, ಆತನಿಗೆ ಮಾತ್ರವಲ್ಲ ಆತನ ಜೊತೆಗಿರುವವರು ಹೇಗೆ ಸಂಕಷ್ಟಕ್ಕೆ ಸಿಲುಕುತ್ತಾರೆ ಎನ್ನುವುದನ್ನು ಚಿತ್ರದಲ್ಲಿ ಹೇಳಲಾಗ್ತಿದೆ. ಉತ್ತರ ಭಾರತದ ಘೋಸ್ಟ್ ಹಂಟರ್ ಖ್ಯಾತಿಯ ಗೌರವ್ ತಿವಾರಿ ಜೀವನದ ಕೆಲ ಘಟನೆಗಳೇ ಈ ಚಿತ್ರದ ಕಥೆಗೆ ಸ್ಫೂರ್ತಿ ಎನ್ನಲಾಗ್ತಿದೆ. ಸಾಮಾನ್ಯವಾಗಿ ಹಾರರ್ ಸಿನಿಮಾಗಳಲ್ಲಿ ಇರುವಂತೆ ಒಂದು ಭೂತಬಂಗಲೆ. ಅಲ್ಲಿಗೆ ಹೋಗುವ ನಾಯಕ. ಮುಂದೇನು ಎನ್ನುವುದೇ ಸಿನಿಮಾ ಕಥೆ ಎನ್ನುವುದು ಟ್ರೈಲರ್ ನೋಡಿದರೆ ಅರ್ಥವಾಗ್ತಿದೆ. ಆಕಾಶ್ ಪರ್ವ ಸಂಗೀತದಲ್ಲಿ 'ಸೀಟ್‌ ಎಡ್ಜ್' ಚಿತ್ರದ ಹಾಡುಗಳು ಹಿಟ್ ಆಗಿದೆ.

ರಾಘು ರಾಮಣ್ಣ ಕೊಪ್ಪ, ಗಿರಿ ಶಿವಣ್ಣ, ಮಿಮಿಕ್ರಿ ಗೋಪಿ ಚಿತ್ರದಲ್ಲಿದ್ದು ಕಾಮಿಡಿಗೆ ಬರವಿಲ್ಲ. ನಗಿಸುತ್ತಾ ನಗಿಸುತ್ತಾ ಬಳಿಕ ಸಿನಿಮಾ ಹಾರರ್ ಥ್ರಿಲ್ ಕೊಡುವಂತಿದೆ. ನಡುವೆ ಸಿದ್ದು ಲವ್ ಸ್ಟೋರಿ ಕೂಡ ಸಾಗುತ್ತದೆ. ಶಿವಮೊಗ್ಗ, ಮೈಸೂರು, ಕುದುರೆ ಮುಖ ಹಾಗೂ ಬೆಂಗಳೂರಿನಲ್ಲಿ ಈ ಸಿನಿಮಾ ಚಿತ್ರೀಕರಣ ನಡೆದಿದೆ. ರಘು ಆರ್‌ಜೆ ಚಿತ್ರದ ಹಾಡುಗಳಿಗೆ ಡ್ಯಾನ್ಸ್ ಕಂಪೋಸ್ ಮಾಡಿದ್ದು ದೀಪಕ್ ಕುಮಾರ್ ತಮ್ಮ ಕ್ಯಾಮರಾ ಕಣ್ಣಲ್ಲಿ ಸಿನಿಮಾ ಸೆರೆ ಹಿಡಿದಿದ್ದಾರೆ. ಶಿವರಾಜ್‌ಕುಮಾರ್ ಹಾಗೂ ಲೂಸ್ ಮಾದ ಯೋಗಿ ಚಿತ್ರಕ್ಕೆ ಶುಭ ಕೋರಿದ್ದಾರೆ.

Seat Edge Trailer Creates Buzz Sidhu Moolimane s Horror Thriller set to release January 30

ಈಗ ಎಲ್ಲರ ಕೈಯಲ್ಲೂ ಫೋನು, ಸೋಶಿಯಲ್ ಮೀಡಿಯಾ ದರ್ಬಾರ್ ನಡೀತಿದೆ. ಯೂಟ್ಯೂಬರ್, ಸೋಶಿಯಲ್ ಇನ್‌ಫ್ಲುಯೆನ್ಸರ್‌ಗಳ ಕಾರುಬಾರು ಜೋರಾಗಿದೆ. ಇದನ್ನೆಲ್ಲಾ ಮನಸ್ಸಿನಲ್ಲಿಟ್ಟುಕೊಂಡು ಈ ಜಮಾನದ ಪ್ರೇಕ್ಷಕರನ್ನು ರಂಜಿಸಲು 'ಸೀಟ್‌ ಎಡ್ಜ್' ಸಿನಿಮಾ ಬರ್ತಿದೆ. ನಗಿಸಿ, ಬೆದರಿಸಿ ನೋಡುಗರಿಗೆ ಥ್ರಿಲ್ ಕೊಡಲಿದೆ. ಚಿತ್ರದ ಆಲ್ಬಮ್ ಹಿಟ್ ಆಗಿದ್ದು 'ಹಂಗೋ ಹಿಂಗೋ' ಹಾಡಿನ ಹುಕ್ ಸ್ಟೆಪ್ಸ್ ವೈರಲ್ ಆಗಿದ್ದು ಗೊತ್ತೇಯಿದೆ.

ಜನವರಿ 30ರಂದು ರಾಜ್ಯಾದ್ಯಂತ 'ಸೀಟ್‌ ಎಡ್ಜ್' ಸಿನಿಮಾ ಬಿಡುಗಡೆ ಆಗಲಿದೆ. ವಿಜಯ್ ಫಿಲ್ಮ್ಸ್ ಮೂಲಕ ಚಿತ್ರವನ್ನು ವಿತರಣೆ ಮಾಡಲಾಗ್ತಿದೆ. ಹೊಸಬರ ತಂಡ ಈ ಚಿತ್ರವನ್ನು ಕಟ್ಟಿಕೊಟ್ಟಿದೆ. ಸೋಶಿಯಲ್ ಮೀಡಿಯಾದಲ್ಲಿ ವೀವ್ಸ್, ಲೈಕ್ಸ್‌ಗಾಗಿ ಜನ ಏನೆಲ್ಲಾ ಮಾಡ್ತಾರೆ, ಬೇಗ ಜನಪ್ರಿಯರಾಗಬೇಕು ಎಂದು ಸಾಹಸಕ್ಕೆ ಕೈಹಾಕಿ ಹೇಗೆ ಸಮಸ್ಯೆಗೆ ಸಿಲುಕುತ್ತಾರೆ ಎನ್ನುವುದನ್ನು ಚಿತ್ರದಲ್ಲಿ ಹೇಳುತ್ತಿರುವುದಾಗಿ ನಿರ್ದೇಶಕರು ಹೇಳಿದ್ದಾರೆ. ಸಿನಿಮಾ ಪ್ರಚಾರ ಭರದಿಂದ ಸಾಗುತ್ತಿದೆ. ಇತ್ತೀಚೆಗೆ ಹಾರರ್ ಥ್ರಿಲ್ಲರ್ ಚಿತ್ರಗಳ ಸಂಖ್ಯೆ ಕಮ್ಮಿ ಆಗಿದ್ದು ಆ ಕೊರಗನ್ನು ಈ ಸಿನಿಮಾ ನೀಗಿಸುವಂತಿದೆ.

More from Filmibeat

Read more about: sandalwood kannada actor
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X