»   » ಕನ್ನಡ ಚಿತ್ರರಂಗದ 'ಅಯೋಗ್ಯ'ನಿಗೆ ಮತ್ತೊಮ್ಮೆ ಸಿಕ್ತು ಮುಹೂರ್ತ ಭಾಗ್ಯ

ಕನ್ನಡ ಚಿತ್ರರಂಗದ 'ಅಯೋಗ್ಯ'ನಿಗೆ ಮತ್ತೊಮ್ಮೆ ಸಿಕ್ತು ಮುಹೂರ್ತ ಭಾಗ್ಯ

Posted By:
Subscribe to Filmibeat Kannada

ಸದ್ಯ ಸ್ಯಾಂಡಲ್ ವುಡ್ ನಲ್ಲಿ 'ಅಯೋಗ್ಯ' ಎಂದರೆ ನೆನಪಾಗುವುದು ಇಬ್ಬರು. ಒಬ್ಬರು ನಟ ನಿನಾಸಂ ಸತೀಶ್ ಮತ್ತೊಬ್ಬರು 'ಅಯೋಗ್ಯ' ಸಿನಿಮಾದ ನಿರ್ದೇಶಕ ಮಹೇಶ್.

'ಅಯೋಗ್ಯ' ನಿನಾಸಂ ಸತೀಶ್ ಅವ್ರಿಗೆ ಮುಹೂರ್ತ ಭಾಗ್ಯ ಸಿಕ್ಕಿದೆ. ಇದೇನಪ್ಪಾ ಅಂತ ತಲೆ ಕೆಡಿಸಿಕೊಳ್ಳಬೇಡಿ. 'ಅಯೋಗ್ಯ' ಸಿನಿಮಾ ಮುಹೂರ್ತದ ಡೇಟ್ ಫಿಕ್ಸ್ ಆಗಿದೆ. ಅರೆ... ಕಳೆದ ತಿಂಗಳಲ್ಲೇ ಅದ್ದೂರಿ ಮುಹೂರ್ತ ಮಾಡಿದ್ರಲ್ಲ ಅಂತ ನೆನಪಿಸಿಕೊಳ್ತಿದ್ರಾ.? 'ಅಯೋಗ್ಯ'ನಿಗೆ ಮತ್ತೆ ಮುಹೂರ್ತ ಫಿಕ್ಸ್ ಆಗಿದೆ. ಮುಂದೆ ಓದಿರಿ...

'ಅಯೋಗ್ಯ' ಸಿನಿಮಾ ಮುಹೂರ್ತ ಫಿಕ್ಸ್

'ಅಯೋಗ್ಯ'... ನೀನಾಸಂ ಸತೀಶ್ ಹಾಗೂ ರಚಿತಾ ರಾಮ್ ಅಭಿನಯದ ಹೊಸ ಸಿನಿಮಾ. ಎಸ್.ಮಹೇಶ್ ಕುಮಾರ್ ನಿರ್ದೇಶನದ ಸಿನಿಮಾ. ಕಲರ್ ಫುಲ್ ಆಗಿ ಫೋಟೋ ಶೂಟ್ ಮಾಡಿ ಅದ್ಧೂರಿಯಾಗಿ ಮುಹೂರ್ತ ಮಾಡಿದ್ದ ಸಿನಿಮಾತಂಡ ಈಗ ಮತ್ತೊಮ್ಮೆ ಮುಹೂರ್ತ ಮಾಡೋದಕ್ಕೆ ಸಜ್ಜಾಗಿದೆ.

ಎರಡನೇ ಬಾರಿ 'ಮುಹೂರ್ತ'

'ಅಯೋಗ್ಯ' ಸಿನಿಮಾಗೆ ಮುಹೂರ್ತ ಆಗಿದ್ದು ಈಗ ಹಳೆ ಕತೆ. ಆದ್ರೆ ಬರುವ ಸೋಮವಾರ ಅಂದರೆ ನವೆಂಬರ್ 27 ರಂದು ಸಿನಿಮಾ ತಂಡ ರಾಜಾರಾಜೇಶ್ವರಿ ನಗರದಲ್ಲಿ ಸಿನಿಮಾದ ಮರು ಮುಹೂರ್ತ ಮಾಡಲು ಸಿದ್ದತೆ ಮಾಡಿಕೊಂಡಿದೆ.

ಹೊಸ ನಿರ್ಮಾಪಕರಿಂದ ಚಿತ್ರಕ್ಕೆ ಚಾಲನೆ

'ಅಯೋಗ್ಯ' ಸಿನಿಮಾಗೆ ಮರು ಮುಹೂರ್ತ ಆಗೋದಕ್ಕೆ ಕಾರಣ ಇದೇ. ಈ ಹಿಂದೆ ಇದ್ದ ನಿರ್ಮಾಪಕ 'ಸತೀಶ್' ಕಾರಣಾಂತರದಿಂದ ಬದಲಾಗಿದ್ದಾರೆ. 'ಬೀರ್ ಬಲ್', 'ಚಮಕ್', 'ಜಾನ್ ಸೇನಾ' ಚಿತ್ರಗಳನ್ನ ನಿರ್ಮಾಣ ಮಾಡಿರುವ ಪ್ರೊಡ್ಯೂಸರ್ 'ಟಿ ಆರ್ ಚಂದ್ರಶೇಖರ್' ಅಯೋಗ್ಯ ಸಿನಿಮಾಗೆ ಬಂಡವಾಳ ಹಾಕಲು ಸಜ್ಜಾಗಿದ್ದಾರೆ.

ಶುರುವಾಯ್ತು 'ಅಯೋಗ್ಯ'ನ ಪ್ರಯಾಣ

ನಿರ್ಮಾಪಕರಷ್ಟೇ ಬದಲಾಗಿರೋ 'ಅಯೋಗ್ಯ' ಚಿತ್ರದಲ್ಲಿ ಈ ಹಿಂದೆ ಸಿನಿಮಾ ತಂಡ ತಿಳಿಸಿದಂತೆ ಸತೀಶ್ ಹಾಗೂ ರಚಿತಾ ರಾಮ್ ನಾಯಕ-ನಾಯಕಿಯಾಗಿ ಅಭಿನಯಿಸುತ್ತಾರೆ. ಎಸ್ ಮಹೇಶ್ ನಿರ್ದೇಶನದ ಜವಾಬ್ದಾರಿ ಹೊಂದಿದ್ದು ಸೋಮವಾರ ಮುಹೂರ್ತ ಮುಗಿಸಿ ಚಿತ್ರೀಕರಣಕ್ಕೂ ಚಾಲನೆ ನೀಡಲಿದ್ದಾರೆ. ಡಿಸೆಂಬರ್ 1 ರಿಂದ ಸಿನಿಮಾತಂಡ ಮಂಡ್ಯದಲ್ಲಿ ಚಿತ್ರೀಕರಣ ಶುರು ಮಾಡಲಿದೆ.

English summary
Second time Muhoorta for Ninasam Sathish starrer 'Ayogya', ಸತೀಶ್ ನಿನಾಸಂ ಅಭಿನಯದ ಅಯೋಗ್ಯ ಚಿತ್ರದ ಮರು ಮುಹೂರ್ತ ಸಮಾರಂಭ ನಡೆಯಲಿದೆ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada