ಪುನೀತ್ 'ಯುವರತ್ನ' ತಂಡದಿಂದ ಕ್ರಿಸ್ಮಸ್ ಗೆ ಭರ್ಜರಿ ಉಡುಗೊರೆ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಬಹುನಿರೀಕ್ಷೆಯ ಯುವರತ್ನ ಸಿನಿಮಾತಂಡ ಕ್ರಿಸ್ಮಸ್ ಗೆ ಭರ್ಜರಿ ಉಡುಗೊರೆ ನೀಡಲು ತಯಾರಿ ನಡೆಸಿದ್ದಾರೆ. ಯುವರತ್ನ ಚಿತ್ರಕ್ಕಾಗಿ ಕಾದುಕುಳಿತಿರುವ ಅಭಿಮಾನಿಗಳಿಗೀಗ ಸಖತ್ ಉಡುಗೊರೆ ಸಿಗುತ್ತಿದೆ.

ಹೌದು, ಪವರ್ ಸ್ಟಾರ್ ಸಿನಿಮಾದ ಎರಡನೇ ಹಾಡು ರಿಲೀಸ್ ಡಿಸೆಂಬರ್ 25ರಂದು ಬಿಡುಗಡೆ ಆಗುತ್ತಿದೆ. ಈ ಬಗ್ಗೆ ಸಿನಿಮಾತಂಡ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದೆ. ಡಿಸೆಂಬರ್ 25ರಂದು ಮಧ್ಯಾಹ್ನ 12.05ಕ್ಕೆ ಚಿತ್ರದ ಹಾಡು ರಿಲೀಸ್ ಆಗುತ್ತಿದೆ.

ನೀನಾದೆ ನಾ ಸಾಲುಗಳಿಂದ ಪ್ರಾರಂಭವಾಗುವ ರೊಮ್ಯಾಂಟಿಕ್ ಹಾಡು ಇದಾಗಿದೆ. ವಿಶೇಷ ಎಂದರೆ ಕನ್ನಡದ ಜೊತೆಗೆ ತೆಲುಗಿನಲ್ಲೂ ಹಾಡು ರಿಲೀಸ್ ಆಗುತ್ತಿದೆ. ಎಸ್ ತಮನ್ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಹಾಡು ಇದಾಗಿದೆ. ಈಗಾಗಲೇ ಸಿನಿಮಾದಿಂದ ಮೊದಲ ಹಾಡು ಕನ್ನಡದ ಜೊತೆಗೆ ತೆಲುಗಿನಲ್ಲೂ ರಿಲೀಸ್ ಆಗಿದ್ದು, ಅಭಿಮಾನಿಗಳ ಹೃದಯ ಗೆದ್ದಿದೆ.

Second Song From Puneeth Rajkumars Yuvarathnaa to be out on December 25th

ಚಿತ್ರದ ಮೊದಲ ಹಾಡು, ಪವರ್ ಆಫ್ ಯೂತ್ ಟ್ರೆಂಡಿಂಗ್ ನಲ್ಲಿದ್ದು, ಅಭಿಮಾನಿಗಳು ಕುಣಿದು ಕುಪ್ಪಳಿಸುತ್ತಿದ್ದಾರೆ. ಅಂದಹಾಗೆ ಈ ಹಾಡಿನ ಚಾಲೆಂಜ್ ಪ್ರಾರಂಭವಾಗಿದ್ದು, ಅದ್ಭುತ ವಿಡಿಯೋಗೆ ಭರ್ಜರಿ ಗಿಫ್ಟ್ ಕೊಡುವುದಾಗಿ ಸಿನಿಮಾತಂಡ ಅನೌನ್ಸ್ ಮಾಡಿತ್ತು. ಪವರ್ ಆಫ್ ಯೂತ್ ಹಾಡಿಗೆ ಅಭಿಮಾನಿಗಳನ್ನು ಡ್ಯಾನ್ಸ್ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಬೇಕಿತ್ತು. ಈ ಚಾಲೆಂಜ್‌ನಲ್ಲಿ ವಿನ್ ಆದವರಿಗೆ ಸರ್ಪ್ರೈಸ್ ನೀಡಲಾಗುವುದು ಎಂದು ಪ್ರಕಟಿಸಿದ್ದರು.

ಇದೀಗ, ಈ ಚಾಲೆಂಜ್‌ನ ವಿನ್ನರ್ ಯಾರೆಂದು ಘೋಷಣೆಯಾಗಿದೆ. ಐದು ಮಂದಿಯನ್ನು ವಿನ್ನರ್ ಎಂದು ಪ್ರಕಟಿಸಲಾಗಿದೆ. ಜಯಶಾಲಿಯಾದ ಎಲ್ಲರಿಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಭೇಟಿಯಾಗುವ ಅವಕಾಶ ಸಿಕ್ಕಿದೆ ಎಂದು ಚಿತ್ರತಂಡ ತಿಳಿಸಿದೆ. ಸದ್ಯ ರಿಲೀಸ್ ಆಗುತ್ತಿರುವ ಎರಡನೇ ಹಾಡು ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ.

More from Filmibeat

English summary
Second song from Puneeth Rajkumar starrer Yuvarathnaa to be out on December 25th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X