'PS- 2' Vs 'ರಾಘವೇಂದ್ರ ಸ್ಟೋರ್ಸ್'; 2ನೇ ಭಾನುವಾರ ಬೆಂಗಳೂರಿನಲ್ಲಿ ಯಾವ ಚಿತ್ರಕ್ಕೆ ಎಷ್ಟು ಶೋ?

ಎಲೆಕ್ಷನ್ ಭರಾಟೆ, ಐಪಿಎಲ್‌ ಆರ್ಭಟದ ನಡುವೆಯೂ ಕೆಲ ಸಿನಿಮಾಗಳು ಥಿಯೇಟರ್‌ಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಪರಭಾಷಾ ಸಿನಿಮಾಗಳ ಹಾವಳಿ ತುಸು ಹೆಚ್ಚು ಎಂದು ಹೇಳಬಹುದು. ಸದ್ಯ ಕನ್ನಡದ 'ರಾಘವೇಂದ್ರ ಸ್ಟೋರ್ಸ್' ಜೊತೆಗೆ ತಮಿಳಿನ 'ಪೊನ್ನಿಯಿನ್ ಸೆಲ್ವನ್- 2', ಹಿಂದಿಯ 'ದಿ ಕೇರಳ ಸ್ಟೋರಿ', ತೆಲುಗಿನ 'ರಾಮಬಾಣಂ', 'ಉಗ್ರಂ' ಪ್ರದರ್ಶನ ಕಾಣ್ತಿವೆ.

ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ಸಿನಿಮಾಗಳು ಬಿಡುಗಡೆ ಆಗ್ತಿಲ್ಲ. ಕಾರಣ ಎಲೆಕ್ಷನ್ ಹಾಗೂ ಐಪಿಎಲ್. ಆದರೆ ಕಳೆದ ವಾರ ಬಿಡುಗಡೆಯಾದ ಜಗ್ಗೇಶ್ ನಟನೆಯ 'ರಾಘವೇಂದ್ರ ಸ್ಟೋರ್ಸ್' ಸಿನಿಮಾ ಸೆಕೆಂಡ್ ವೀಕೆಂಡ್‌ನಲ್ಲೂ ಸಖತ್ ಸದ್ದು ಮಾಡ್ತಿದೆ. ಇತ್ತೀಚೆಗೆ ಚಿತ್ರತಂಡ ಸಕ್ಸಸ್ ಮೀಟ್ ಕೂಡ ಮಾಡಿತ್ತು. ಒಂದೊಳ್ಳೆ ಫ್ಯಾಮಿಲಿ ಎಂಟರ್‌ಟೈನರ್ ಆಗಿರುವ ಈ ಸಿನಿಮಾ ನೋಡಲು ಫ್ಯಾಮಿಲಿ ಆಡಿಯನ್ಸ್ ಮುಗಿಬಿದ್ದಿದ್ದಾರೆ. 'ರಾಘವೇಂದ್ರ ಸ್ಟೋರ್ಸ್' ಬಿಟ್ರೆ ಮಣಿರತ್ನಂ ನಿರ್ದೇಶನದ 'ಪೊನ್ನಿಯಿನ್ ಸೆಲ್ವನ್- 2' ಆರ್ಭಟ ಜೋರಾಗಿದೆ. ಇನ್ನು ಹಾಲಿವುಡ್‌ನ 'ಗಾರ್ಡೆನ್ಸ್ ಆಫ್ ದ ಗೆಲಾಕ್ಸಿ' ಮಲ್ಟಿಪ್ಲೆಕ್ಸ್‌ಗಳಲ್ಲಿ ಜಾಗ ಮಾಡಿಕೊಂಡಿದೆ.

Second Sunday Raghavendra stores and Ponniyin selvan- 2 Bengaluru region show count

ಬೆಂಗಳೂರಿನಲ್ಲಿ 2ನೇ ಭಾನುವಾರವೂ 'ರಾಘವೇಂದ್ರ ಸ್ಟೋರ್ಸ್' ಹಾಗೂ 'ಪೊನ್ನಿಯಿನ್ ಸೆಲ್ವನ್- 2' ಸಿನಿಮಾಗಳ ಸದ್ದು ಜೋರಾಗಿದೆ. ಶೋಗಳ ಸಂಖ್ಯೆ ಕಮ್ಮಿ ಆಗುತ್ತಿಲ್ಲ. ಇನ್ನು ಯಾವ ಚಿತ್ರಕ್ಕೆ ಬೆಂಗಳೂರಿನಲ್ಲಿ ಭಾನುವಾರ ಎಷ್ಟು ಶೋಗಳು ಸಿಕ್ಕಿದೆ ಎನ್ನುವ ಮಾಹಿತಿ ಕೂಡ ಇದೆ. 'ಪೊನ್ನಿಯಿನ್ ಸೆಲ್ವನ್- 2' ಚಿತ್ರಕ್ಕೆ ಒಟ್ಟು 317 ಶೋಗಳು ಸಿಕ್ಕಿದ್ದು ರಾಜಧಾನಿಯಲ್ಲಿ ಐತಿಹಾಸಿಕ ಚಿತ್ರದ ಆರ್ಭಟ ಜೋರಾಗಿದೆ ಎನ್ನಬಹುದು. 5 ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ಬಿಡುಗಡೆಯಾಗಿತ್ತು. ವಿಕ್ರಂ, ಐಶ್ವರ್ಯ ರೈ, ಕಾರ್ತಿ, ತ್ರಿಶಾ, ಜಯಂ ರವಿ ಸೇರಿದಂತೆ ದೊಡ್ಡ ತಾರಾಗಣ ಈ ಚಿತ್ರದಲ್ಲಿದೆ.

ಬೆಂಗಳೂರಿನಲ್ಲಿ 2ನೇ ವಾರ 'ಪೊನ್ನಿಯಿನ್ ಸೆಲ್ವನ್- 2' ಕನ್ನಡ ವರ್ಷನ್‌ಗೂ ಕೆಲ ಶೋಗಳು ಸಿಕ್ಕಿದೆ. ಕಲ್ಕಿ ಕೃಷ್ಣಮೂರ್ತಿ ಬರೆದ ಕಾದಂಬರಿ ಆಧರಿ ಈ ಚಿತ್ರವನ್ನು 2 ಭಾಗಗಳಾಗಿ ಮಣಿರತ್ನಂ ಕಟ್ಟಿಕೊಟ್ಟಿದ್ದಾರೆ. ಕಳೆದ ವರ್ಷ ಮೊದಲ ಭಾಗ ರಿಲೀಸ್ ಆಗಿತ್ತು. ಆದರೆ ಮೊದಲ ಭಾಗಕ್ಕಿಂತ 2ನೇ ಭಾಗಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ತಮಿಳು ಪ್ರೇಕ್ಷಕರಂತೂ ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ. ಚಿತ್ರದಲ್ಲಿ ಚೋಳರು ಹಾಗೂ ಪಾಂಡ್ಯರ ಆಂತರಿಕ ರಾಜಕೀಯ, ಸಂಘರ್ಷ, ಸೇಡಿನ ಕಥೆಯನ್ನು ಅನಾವರಣ ಮಾಡಲಾಗಿದೆ.

Second Sunday Raghavendra stores and Ponniyin selvan- 2 Bengaluru region show count

ಜಗ್ಗೇಶ್ ನಟನೆಯ 'ರಾಘವೇಂದ್ರ ಸ್ಟೋರ್ಸ್' ಚಿತ್ರಕ್ಕೆ 2ನೇ ಭಾನುವಾರ 134 ಶೋಗಳು ಸಿಕ್ಕಿದೆ. ಸಂತೋಷ್ ಆನಂದ್‌ರಾಮ್ ನಿರ್ದೇಶನದ ಈ ಚಿತ್ರವನ್ನು ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡಿದೆ. ಬಹಳ ಹಿಂದೆ ಸಿದ್ಧವಾಗಿದ್ದ ಸಿನಿಮಾ ಕೊಂಚ ತಡವಾಗಿ ಪ್ರೇಕ್ಷಕರ ಮುಂದೆ ಬಂದಿದೆ. ಚಿತ್ರದಲ್ಲಿ ಅಡುಗೆ ಭಟ್ಟ ಹಯವದದನ ಪಾತ್ರದಲ್ಲಿ ಜಗ್ಗಣ್ಣ ನಟಿಸಿದ್ದಾರೆ. ವಯಸ್ಸು 40 ದಾಟಿದ್ರು ಮದುವೆ ಆಗದ ಹಯವದದನ ಗೋಳು, ಮದುವೆ ನಂತರ ಎದುರಾಗುವ ಸಮಸ್ಯೆಗಳ ಸುತ್ತಾ ಕಥೆ ಸುತ್ತುತ್ತದೆ. ಹಾಸ್ಯದ ಜೊತೆಗೆ ಒಂದೊಳ್ಳೆ ಸಂದೇಶವೂ ಚಿತ್ರದಲ್ಲಿದೆ. ನವರಸ ನಾಯಕನ ಹಾಸ್ಯಪಾಕಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ.

ಹಾಲಿವುಡ್‌ನ 'ಗಾರ್ಡೆನ್ಸ್ ಆಫ್ ದ ಗೆಲಾಕ್ಸಿ' ಚಿತ್ರಕ್ಕೆ 295 ಶೋ, 'ದಿ ಕೇರಳ ಸ್ಟೋರಿ'ಗೆ 207 ಶೋಗಳು ಸಿಕ್ಕಿದೆ. ಮೊದಲ ದಿನಕ್ಕಿಂತ 'ದಿ ಕೇರಳ ಸ್ಟೋರಿ' ಚಿತ್ರದ 2ನೇ ದಿನದ ಕಲೆಕ್ಷನ್ ಚೆನ್ನಾಗಿತ್ತು. 3ನೇ ದಿನ ಭಾನುವಾರ ಆಗಿರುವುದರಿಂದ ಸಿನಿಮಾ ಮತ್ತಷ್ಟು ಜೋರಾಗಿ ಸದ್ದು ಮಾಡುವ ನಿರೀಕ್ಷೆಯಿದೆ. ಮೌತ್‌ ಟಾಕ್‌ನಿಂದ ನಿಧಾನವಾಗಿ ಸಿನಿಮಾ ಪ್ರೇಕ್ಷಕರನ್ನು ಥಿಯೇಟರ್‌ಗಳಿಗೆ ಸೆಳೀತಿದೆ. ರಾಜ್ಯದಲ್ಲೂ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ.

Second Sunday Raghavendra stores and Ponniyin selvan- 2 Bengaluru region show count

ಇನ್ನು ತೆಲುಗಿನ 'ರಾಮಬಾಣಂ' ಚಿತ್ರಕ್ಕೆ 122 ಹಾಗೂ 'ಉಗ್ರಂ'ಗೆ 94 ಶೋಗಳು ಸಿಕ್ಕಿದೆ. ಈ ಎರಡು ಸಿನಿಮಾಗಳು ಅಷ್ಟಾಗಿ ಸದ್ದು ಮಾಡ್ತಿಲ್ಲ. ಒಟ್ನಲ್ಲಿ ಬೆಂಗಳೂರಿನ ಥಿಯೇಟರ್‌ಗಳಲ್ಲಿ 'ರಾಘವೇಂದ್ರ ಸ್ಟೋರ್ಸ್' ಹಾಗೂ 'ಪೊನ್ನಿಯಿನ್ ಸೆಲ್ವನ್- 2' ಸಿನಿಮಾಗಳ ಸದ್ದು ಗದ್ದಲವೇ ಜೋರಾಗಿದೆ.

More from Filmibeat

English summary
Second Sunday Raghavendra stores and Ponniyin selvan- 2 Bengaluru region show count. These 2 movies running successfully in theatres despite the elections and IPL. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X