ರಾಕಿಂಗ್ ಸ್ಟಾರ್ ಯಶ್ ಟೆಂಪಲ್ ರನ್ ಹಿಂದಿನ ರಹಸ್ಯ ಬಯಲು!
ರಾಕಿಂಗ್ ಸ್ಟಾರ್ ಯಶ್ ಅಥವಾ ಕೆಜಿಎಫ್ ಟೀಂ ಎಂದಾಕ್ಷಣ ಸಿನಿಮಾ ಪ್ರೇಕ್ಷಕರಿಗೆ ನೆನಪಾಗೋದೆ ಕೆಜಿಎಫ್ 2 ಸಿನಿಮಾದ ರಿಲೀಸ್. ಯಾಕೆಂದರೆ ವರ್ಷಗಳಿಂದ ಸಿನಿಮಾ ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ. ಇಷ್ಟು ದಿನ ಕೆಜಿಎಫ್ 2 ಸಿನಿಮಾದ ಬಗ್ಗೆ ಸುದ್ದಿ ಇರಲಿಲ್ಲ. ಯಶ್ ಹುಟ್ಟುಹಬ್ಬಕ್ಕೆ ಒಂದು ಪೋಸ್ಟರ್ ಮಾತ್ರ ರಿಲೀಸ್ ಆಗಿತ್ತು.
Recommended Video
ಆದರೆ ಆ ಪೋಸ್ಟರ್‌ಗೆ ಅಷ್ಟೇನೂ ಉತ್ತಮ ರೆಸ್ಪಾನ್ಸ್ ಸಿಕ್ಕಿರಲಿಲ್ಲ. ಯಶ್ ಅಭಿಮಾನಿಗಳು ಈ ಪೋಸ್ಟರ್‌ಗೆ ಭಾರಿ ವಿರೋಧ ವ್ಯಕ್ತ ಪಡಿಸಿದ್ದರು. ಆದರೆ ಯಶ್ ಹುಟ್ಟುಹಬ್ಬ ಎನ್ನುವ ಕಾರಣಕ್ಕೆ ಮಾತ್ರವೇ ಆ ಪೋಸ್ಟರ್ ರಿಲೀಸ್ ಆಗಿತ್ತು. ಅದಾದ ಬಳಿಕ ಕೆಜಿಎಫ್ ಚಿತ್ರತಂಡದಿಂದ ಯಾವುದೇ ಸುಳಿವು ಇರಲಿಲ್ಲ.
ಕೆಜಿಎಫ್ ಬಳಗದಲ್ಲಿ ಏನು ನಡೆಯುತ್ತಿದೆ. ಸಿನಿಮಾ ತಂಡ ಪತ್ತೆನೆ ಇಲ್ಲವಲ್ಲ ಎಂದು ಯೋಚಿಸುತ್ತಿರುವಾಗಲೇ, ಈಗ ಸಿನಿಮಾ ತಂಡ ದೇಸ್ಥಾನದಲ್ಲಿ ಪ್ರತ್ಯಕ್ಷ ಆಗಿದ್ದಾರೆ. ಅಷ್ಟಕ್ಕೂ ಯಶ್ ಮತ್ತು ಕೆಜಿಎಫ್ 2 ಚಿತ್ರತಂಡ ದೇವಸ್ಥಾಕ್ಕೆ ಹೋಗಿದ್ದರ ಹಿಂದೆ ಒಂದು ಉದ್ದೇಶ ಇದೆ. ಅದು ಏನು ಎನ್ನುವುದನ್ನು ಮುಂದೆ ಓದಿ...

ಮೂಕಾಂಬಿಕಾ ಮತ್ತು ಗಣಪತಿ ದೇವಸ್ಥಾನಕ್ಕೆ ದೇವಸ್ಥಾನದಲ್ಲಿ ಯಶ್!
ನಟ ರಾಕಿಂಗ್ ಸ್ಟಾರ್ ಯಶ್ ಮತ್ತು ಕೆಜಿಎಫ್ ಸಿನಿಮಾ ತಂಡ. ಅಂದರೆ ನಿರ್ಮಾಪಕ ವಿಜಯ್ ಕಿರಗಂದೂರು ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಸೇರಿದಂತೆ ಹಲವರು ಇಂದು ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ. ಮೊದಲು ಆನೆಗುಡ್ಡೆ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ನಂತರ ಇಡೀ ತಂಡ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಾರೆ. ಕೆಜಿಎಫ್ ಸಿನಿಮಾ ತಂಡ ಹೀಗೆ ದೇವಸ್ಥಾನಗಳಿಗೆ ಭೇಟಿ ನೀಡಲು ಬಲವಾದ ಕಾರಣ ಇದೆ. ಅವರು ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿರುವುದು ಕೆಜಿಎಫ್ 2 ಸಿನಿಮಾಗಾಗಿ.

KGF 2 ಪ್ರಚಾರ ಕಾರ್ಯ ಶುರುಮಾಡಲು ವಿಶೇಷ ಪೂಜೆ!
ಇಷ್ಟು ದಿನ ಸೈಲೆಂಟಾಗಿ ಇದ್ದ ಕೆಜಿಎಫ್ ಸಿನಿಮಾ ತಂಡ ಇನ್ನು ಮುಂದೆ ವೈಲೆಂಟ್ ಆಗಲಿದೆ. ಸಿನಿಮಾ ರಿಲೀಸ್‌ಗೆ ಇನ್ನು ಕೇವಲ ಎರಡು ತಿಂಗಳು ಮಾತ್ರವೇ ಬಾಕಿ ಇದೆ. ಹಾಗಾಗಿ ಸಿನಿಮಾದ ಪ್ರಚಾರ ಕಾರ್ಯ ಶುರುಮಾಡಲು ಸಿನಿಮಾ ತಂಡ ಮುಂದಾಗಿದೆ. ಅದಕ್ಕಾಗಿ ಕೆಜಿಎಫ್ 2 ಚಿತ್ರತಂಡ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದೆ. ಪ್ರಚಾರಕ್ಕೆ ಯೋಜನೆ ಹಾಕಿಕೊಳ್ಳುವ ಮೊದಲು ಸಿನಿಮಾಗೆ ಯಾವುದೇ ರೀತಿಯ ತೊಂದರೆ ಆಗಬಾರದು ಎಂದು ಚಿತ್ರ ತಂಡ ಪೂಜೆ ಸಲ್ಲಿಸಿದೆ. ಹಾಗಾಗಿಯೇ ಯಶ್ ಜೊತೆಗೆ ನಿರ್ಮಾಪಕ, ನಿರ್ದೇಶಕರು ಕೂಡ ಪೂಜೆಯಲ್ಲಿ ಭಾಗಿ ಆಗಿದ್ದಾರೆ.

ರವಿ ಬಸ್ರೂರು ಸ್ಟೂಡಿಯೋಗೆ ಭೇಟಿ ನೀಡಿದ ಯಶ್!
ದೇವಸ್ಥಾನಗಳಿಗೆ ಮಾತ್ರವಲ್ಲ, ನಟ ಯಶ್ ಸಂಗೀತ ನಿರ್ದೇಶಕ ರವಿ ಬಸ್ರೂರು ಮ್ಯೂಜಿಕ್ ಸ್ಟೂಡಿಯೋಗೆ ಭೇಟಿ ನೀಡಿದ್ದಾರೆ. ಸದ್ಯ ಕೆಜಿಎಫ್ 2 ಸಿನಿಮಾದ ಮ್ಯೂಜಿಕ್ ಕೆಲಸಗಳು ಅಲ್ಲೇ ನಡೆಯುತ್ತಿವೆ. ಸಿನಿಮಾದ ಕೆಲಸಗಳು ಅಂತಿಮ ಘಟ್ಟದಲ್ಲಿ ಇವೆ. ಹಾಗಾಗಿ ಯಶ್, ರವಿ ಬಸ್ರೂರ್ ಸ್ಟೂಡಿಯೋಗೆ ಭೇಟಿ ನೀಡಿ, ಸಂಗೀತ ಕೆಲಸದ ಬಗ್ಗೆಯೂ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಸಿನಿಮಾ ಏಪ್ರಿಲ್ 14ಕ್ಕೆ ರಿಲೀಸ್ ದಿನಾಂಕವನ್ನು ಫಿಕ್ಸ್ ಮಾಡಿಕೊಂಡಿದ್ದು, ಆದಷ್ಟು ಬೇಗ ಸಿನಿಮಾದ ಪ್ರಚಾರ ಕೆಲಸಗಳನ್ನು ಚಿತ್ರತಂಡ ಆರಂಭಿಸಲಿದೆ.

ಯಶ್ ಕ್ರಿಕೆಟ್ ಆಡಿದ ವಿಡಿಯೋ ವೈರಲ್!
ರಾಕಿಂಗ್ಸ್ಟಾರ್ ಯಶ್ 'ಕೆಜಿಎಫ್ 2' ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಆದರೆ ಈ ನಡುವೆ ಕೊಂಚ ಬಿಡುವು ಮಾಡಿಕೊಂಡು. ಕ್ರಿಕೆಟ್ ಆಟವಾಡಿದ್ದಾರೆ. ಯಶ್ ಕ್ರಿಕೆಟ್ ಆಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಜಿಎಫ್ ನಿರ್ಮಾಪಕ ವಿಜಯ್ ಕಿರಗಂದೂರು, ನಟ ಯಶ್ ಭರ್ಜರಿ ಕ್ರಿಕೆಟ್ ಆಡಿದ್ದ ವಿಡಿಯೋ ವೈರಲ್ ಆಗಿದೆ. ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಸಂಗೀತ ನಿರ್ದೇಶಕ ರವಿ ಬಸ್ರೂರ್ ಸ್ಟುಡಿಯೋಗೆ ಭೇಟಿ ನೀಡಿದ ವೇಳೆ ಕ್ರಿಕೆಟ್ ಆಡಿದ್ದಾರೆ.


Click it and Unblock the Notifications











