'ತಾರಾ'ಸಂಗಮ; ನಟಿ ಮಣಿಯರ ಬಿಂದಾಸ್ ಡ್ಯಾನ್ಸ್ ವೀಡಿಯೋ ವೈರಲ್
ನಟಿ ತಾರಾ ಇತ್ತೀಚೆಗೆ ಹೊಸ ಮನೆಯ ಗೃಹ ಪ್ರವೇಶ ಮಾಡಿದ್ದರು. ಕಳೆದ ವಾರವಷ್ಟೆ ಅವರಿಗೆ ಗೌರವ ಡಾಕ್ಟರೇಟ್ ಸಿಕ್ಕಿತ್ತು. ಆಪ್ತರ ಜೊತೆ ಈ ಸಂಭ್ರಮವನ್ನು ಆಚರಿಸಿದ್ದಾರೆ. ಬುಧವಾರ ತಮ್ಮ ಮನೆಗೆ ಆಪ್ತರನ್ನು ಆಹ್ವಾನಿಸಿ ಊಟ ಹಾಕಿಸಿದ್ದಾರೆ. ಮಹಿಳಾ ಸ್ನೇಹಿತರು ಹಾಗೂ ಆಪ್ತರಿಗೆ ಮಾತ್ರ ಆಮಂತ್ರಣ ಸಿಕ್ಕಿತ್ತು.
ಹಿರಿಯ ನಟಿ ತಾರಾ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಕಿರುತೆರೆಯಲ್ಲಿ ಕೂಡ ಬ್ಯುಸಿಯಾಗಿದ್ದಾರೆ. ಕಲರ್ಸ್ ಕನ್ನಡ ಕಾರ್ಯಕ್ರಮ ತೀರ್ಪುಗಾರರಾಗಿ ಗುರ್ತಿಸಿಕೊಂಡಿದ್ದಾರೆ. ಇತ್ತೀಚಿಗೆ ಬಿಗ್‌ಬಾಸ್ ಮನೆಗೂ ಹೋಗಿ ಬಂದಿದ್ದರು. ಕಳೆದ ವಾರ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ 16ನೇ ಘಟಿಕೋತ್ಸವದಲ್ಲಿ ನಟಿ ತಾರ ಗೌರವ ಡಾಕ್ಟರೇಟ್ ಸೀಕ್ವರಿಸಿದ್ದರು.

ಸಿನಿಮಾ ಕ್ಷೇತ್ರದ ಸಾಧನೆಗಾಗಿ ನಟಿ ತಾರಾ ಅವರಿಗೆ ವಿಶ್ವವಿದ್ಯಾಲಯದ ಕುಲಪತಿಗಳು ಗೌರವ ಡಾಕ್ಟರೇಟ್ ಪ್ರದಾನ ಮಾಡಿದ್ದರು. ಈ ಸಂತಸವನ್ನು ಆಪ್ತರ ಜೊತೆ ತಾರಾ ಹಂಚಿಕೊಂಡಿದ್ದಾರೆ. ಹಿರಿಯ ನಟಿಯರಾದ ಭಾರತಿ ವಿಷ್ಣುವರ್ಧನ್, ಸುಧಾರಾಣಿ, ಜಯಮಾಲಾ ಸೇರಿದಂತೆ ನಟಿಯರಾದ ಅನು ಪ್ರಭಾಕರ್, ಪೂಜಾ ಗಾಂಧಿ, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಸೇರಿದಂತೆ ಹಲವರು ಈ ಸಂಭ್ರಮದಲ್ಲಿ ಭಾಗಿ ಆಗಿದ್ದರು.
ಹಲವು ವರ್ಷಗಳಿಂದ ನಟಿ ತಾರಾ ಜೆ. ಪಿ ನಗರದ ನಿವಾಸದಲ್ಲಿ ವಾಸಿಸುತ್ತಿದ್ದರು. 6 ತಿಂಗಳ ಹಿಂದೆ ಹೊಸ ಮನೆ ಕಟ್ಟಿಸಿ ಸರಳವಾಗಿ ಗೃಹಪ್ರವೇಶ ಮಾಡಿದ್ದರು. ತಮ್ಮ ಕನಸಿನಂತೆ ಮನೆಯನ್ನು ಕಟ್ಟಿಸಿಕೊಂಡಿದ್ದಾರೆ. ಕೆಲವೇ ಆಪ್ತರನ್ನು ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಕರೆದಿದ್ದರು. ಹಾಗಾಗಿ ಚಿತ್ರರಂಗದ ಆಪ್ತರನ್ನು ಕರೆಸಿ ಊಟ ಹಾಕಿಸುವ ಆಸೆ ಇತ್ತು. ಇತ್ತೀಚೆಗೆ ಡಾಕ್ಟರೇಟ್ ಗೌರವವೂ ಸಿಕ್ಕಿತ್ತು. ಜೊತೆಗೆ ಸಂಕ್ರಾಂತಿ ಹಬ್ಬ. ಹಾಗಾಗಿ ಎಲ್ಲರನ್ನು ಆಹ್ವಾನಿಸಿ ಸಂಭ್ರಮಿಸಿದ್ದಾರೆ.

ಕಾರುಣ್ಯಾ ರಾಮ್, ಸೋನು ಗೌಡ, ಶ್ರುತಿ, ಭಾವನಾ ರಾವ್, ಹೇಮಾ ಚೌಧರಿ, ಮಾಲಾಶ್ರೀ ಅಂಜಲಿ, ಪ್ರಿಯಾಂಕ ಉಪೇಂದ್ರ, ಪದ್ಮಾ ವಾಸಂತಿ, ಮಾಳವಿಕಾ ಅವಿನಾಶ್ ಸೇರಿದಂತೆ ಹಲವರು ಈ ವೇಳೆ ಹಾಜರಿದ್ದರು. ತಮಿಳು ನಟಿ ಸಾಂಘವಿ ಕೂಡ ಭಾಗಿ ಆಗಿದ್ದಾರೆ. ಪೂಜೆ ನೆರವೇರಿಸಲಾಗಿದೆ. ಬಳೆ ಶಾಸ್ತ್ರ ಮಾಡಿರುವುದನ್ನು ನೋಡಬಹುದು. ಇನ್ನು ಭಾವನಾ ರಾವ್ ಹಾಗೂ ಸುಧಾರಾಣಿ ಮಗಳು ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದಾರೆ. ಆ ವೀಡಿಯೋವನ್ನು ನಟಿ ಕಾರುಣ್ಯಾರಾಮ್ ಹಂಚಿಕೊಂಡಿದ್ದಾರೆ.
ಆರತಿ ಬೆಳಗಿ ಅತಿಥಿಗಳನ್ನು ತಮ್ಮ 'ಪುಷ್ಪ ಲೀಲಾ' ನಿವಾಸಕ್ಕೆ ತಾರಾ ಬರಮಾಡಿಕೊಂಡಿದ್ದಾರೆ. ತಾರಾ, ಅನು ಪ್ರಭಾಕರ್, ಸುಧಾರಾಣಿ, ಸಾಂಘವಿ ಎಲ್ಲರೂ ಕುಣಿದು ಖುಷಿಪಟ್ಟಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊ, ವೀಡಿಯೋಗಳು ವೈರಲ್ ಆಗುತ್ತಿದೆ. ಕಾರುಣ್ಯ ರಾಮ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ಹಂಚಿಕೊಂಡಿದ್ದು ಸಂಭ್ರಮದ ಕ್ಷಣಗಳ ಬಗ್ಗೆ ಬರೆದುಕೊಂಡಿದ್ದಾರೆ.
ಸಂಪ್ರದಾಯಬದ್ಧವಾಗಿ ಮಾಡಿರುವ ಗೆಟ್ ಟಯ ಗೆದರ್ ಇದು. ನಟಿ ಅಂಜಲಿ ಸುಧಾಕರ್ ಒಂದಷ್ಟು ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಲೈಕ್ಸ್, ಕಾಮೆಂಟ್ಸ್ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಕಿರುತೆರೆಯ 'ರಾಮಾಚಾರಿ' ಹಾಗೂ 'ಲಕ್ಷ್ಮಿ ನಿವಾಸ' ಧಾರಾವಾಹಿಗಳಲ್ಲಿ ಅವರು ನಟಿಸುತ್ತಿದ್ದಾರೆ.


Click it and Unblock the Notifications











