ಉತ್ತರ ಕರ್ನಾಟಕದ ಜಾನುವಾರುಗಳಿಗೆ ಮೇವು ನೀಡಿದ ನಟಿ ಲೀಲಾವತಿ
Recommended Video
ಬರೀ ಮಳೆಯಿಂದ ಉತ್ತರ ಕರ್ನಾಟಕದಲ್ಲಿ ಆಗಿರುವ ಪರಿಸ್ಥಿತಿಗೆ ಕರ್ನಾಟಕದ ಇತರ ಭಾಗದ ಜನರು ಸ್ಪಂದಿಸುತ್ತಿದ್ದಾರೆ. ಕನ್ನಡ ಚಿತ್ರರಂಗದ ಅನೇಕರು ಕೂಡ ನೆರೆ ಸಂತ್ರಸ್ಥರಿಗೆ ಸಹಾಯ ಮಾಡಿದ್ದಾರೆ. ಈಗ ಹಿರಿಯ ನಟಿ ಲೀಲಾವತಿ ಸಹ ಜನರ ನೆರವಿಗೆ ಬಂದಿದ್ದಾರೆ.
ಮಳೆಯಿಂದ ಜನರು ಮಾತ್ರವಲ್ಲದೆ ಜಾನುವಾರುಗಳ ಬದುಕು ಕೆಟ್ಟದಾಗಿದೆ. ಇದನ್ನು ನೋಡಿ ದುಃಖದಲ್ಲಿ ಇದ್ದ ಅವರು, ತಮ್ಮ ಕೈನಲ್ಲಿ ಆದ ಸಹಾಯವನ್ನು ಮಾಡಬೇಕು ಎಂದು ನಿರ್ಧಾರ ಮಾಡಿದರು.

ಹೀಗಾಗಿ, ಜಾನುವಾರುಗಳಿಗಾಗಿ ಒಂದು ಲಾರಿಯಲ್ಲಿ ಮೇವನ್ನು ಲೀಲಾವತಿ ಕಳಹಿಸಿಕೊಟ್ಟಿದ್ದಾರೆ. ಮುಸುಕಿನ ಜೋಳದ ಮೇವನ್ನು ತಮ್ಮ ಸ್ವತಃ ಹಣದಿಂದ ಖರೀದಿ ಮಾಡಿ ಉತ್ತರ ಕರ್ನಾಟಕಕ್ಕೆ ರವಾನೆ ಮಾಡಿದ್ದಾರೆ.
ಲೀಲಾವತಿ ಮತ್ತು ಪುತ್ರ ವಿನೋದ್ ರಾಜ್ ಬೆಂಗಳೂರಿನ ಹೊರವಲಯ ನೆಲಮಂಗಲ ತಾಲೂಕಿನ ಸೋಲದೇವನ ಹಳ್ಳಿ ವಾಸವಾಗಿದ್ದಾರೆ. ಅಲ್ಲಿನ ರೈತರಿಂದಲೇ ಮೇವನ್ನು ಖರೀದಿ ಮಾಡಿ, ನೆರೆ ಸಂತ್ರಸ್ಥರಿಗೆ ತಲುಪಿಸಿದ್ದಾರೆ. ತಾವೇ ತಮ್ಮ ಕೈಯಾರ ಲಾರಿಗೆ ಮೇವನ್ನು ತುಂಬಿಸಿದ್ದಾರೆ.
ಮಳೆ ಕಡಿಮೆ ಆಗಿ ಉತ್ತರ ಕರ್ನಾಟಕದ ಪರಿಸ್ಥಿತಿ ಆದಷ್ಟು ಬೇಗ ಸಹಜ ಸ್ಥಿತಿಗೆ ಬರಲಿ ಎಂದು ಲೀಲಾವತಿ ಪ್ರಾರ್ಥನೆ ಮಾಡಿದ್ದಾರೆ.


Click it and Unblock the Notifications











