ಒಬ್ಬ ಲಿಫ್ಟ್ ಕೇಳಿದ್ದಕ್ಕೆ ಓಕೆ ಅಂದೆ.. ಈಗ ನನ್ನ ಜೊತೆ ಕೂತಿದ್ದಾನೆ

ಅರ್ಜುನ್ ಸರ್ಜಾ ನಿರ್ಮಿಸಿ ನಿರ್ದೇಶನ ಮಾಡಿರುವ 'ಸೀತಾ ಪಯಣ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಮಗಳು ಐಶ್ವರ್ಯಗಾಗಿ ಆಕ್ಷನ್ ಕಿಂಗ್ ಸಿನಿಮಾಗಳನ್ನು ಮಾಡ್ತಿದ್ದಾರೆ. ಈ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅಣ್ಣನ ಮಗ ನಿರಂಜನ್ ಜೋಡಿಯಾಗಿ ಐಶ್ವರ್ಯ ಮಿಂಚಿದ್ದಾರೆ. ಸದ್ಯ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಕನ್ನಡ ಜೊತೆಗೆ ತೆಲುಗು, ತಮಿಳಿಗೂ ಸಿನಿಮಾ ಡಬ್ ಆಗಿ ರಿಲೀಸ್ ಆಗ್ತಿದೆ.

ಪ್ರಕಾಶ್ ರಾಜ್, ಸತ್ಯರಾಜ್ ಸೇರಿ ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಅರ್ಜುನ್ ಸರ್ಜಾ ಕೂಡ 'ಸೀತಾ ಪಯಣ'ದಲ್ಲಿ ಜೊತೆಯಾಗಿದ್ದಾರೆ. ಇನ್ನು ಧ್ರುವ ಸರ್ಜಾ ಕೂಡ ಅತಿಥಿ ಪಾತ್ರದಲ್ಲಿ ಸಾಥ್ ಕೊಟ್ಟಿದ್ದಾರೆ. ವ್ಯಾಲಂಟೈನ್ಸ್ ಡೇ ಸಂಭ್ರಮದಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ.

Seetha Payana Trailer Out Aishwarya Niranjan Romantic Journey Set for Valentine s Day Release

8 ವರ್ಷಗಳ ಹಿಂದೆ ಮಗಳಿಗಾಗಿ ಅರ್ಜುನ್ ಸರ್ಜಾ 'ಪ್ರೇಮಬರಹ' ಎಂಬ ಸಿನಿಮಾ ಕಟ್ಟಿಕೊಟ್ಟಿದ್ದರು. ಚಿತ್ರದ ಹಾಡೊಂದರಲ್ಲಿ ದರ್ಶನ್, ಧ್ರುವ ಸರ್ಜಾ, ಅರ್ಜುನ್ ಸರ್ಜಾ, ಚಿರಂಜೀವಿ ಸರ್ಜಾ ಮಿಂಚಿದ್ದರು. 'ಸೀತಾ ಪಯಣ' ಚಿತ್ರದಲ್ಲಿ ಕೂಡ ಒಂದು ರೊಮ್ಯಾಂಟಿಕ್ ಲವ್ ಸ್ಟೋರಿ ಹೇಳುವ ಪ್ರಯತ್ನ ಮಾಡಿದ್ದಾರೆ. ಟ್ರೈಲರ್ ಮೊದಲ ನೋಟದಲ್ಲೇ ಗಮನ ಸೆಳೆಯುವಂತಿದೆ.

ಲವ್, ಆಕ್ಷನ್, ಫ್ಯಾಮಿಲಿ ಎಮೋಷನ್ ಎಲ್ಲವನ್ನು ಸೇರಿಸಿ 'ಸೀತಾ ಪಯಣ' ಚಿತ್ರವನ್ನು ಅರ್ಜುನ್ ಸರ್ಜಾ ತಿದ್ದಿ ತೀಡಿದ್ದಾರೆ. ಈಗಾಗಲೇ ಸಿನಿಮಾ ಪ್ರಚಾರ ಕೆಲಸಗಳಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಫೆಬ್ರವರಿ 14ರಂದು ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ.

"ಒಬ್ಬ ಲಿಫ್ಟ್ ಕೇಳಿದ್ದಕ್ಕೆ ಓಕೆ ಅಂದೆ.. ಈಗ ನನ್ನ ಜೊತೆ ಕೂತಿದ್ದಾನೆ" ಎನ್ನುವ ಡೈಲಾಗ್ ಮೂಲಕ 'ಸೀತಾ ಪಯಣ' ಟ್ರೈಲರ್ ಶುರುವಾಗುತ್ತದೆ. ಬಹಳ ಜವಾಬ್ದಾರಿಯಿಂದ ಮಗಳನ್ನು ಬೆಳೆದಿದ ಅಪ್ಪ(ಸತ್ಯರಾಜ್), ಜರ್ನಿಯಲ್ಲಿ ಆಕೆಗೆ ಜೊತೆಯಾಗುವ ನಾಯಕ, ಈ ಭೇಟಿ ಮುಂದೆ ಇಬ್ಬರನ್ನು ಎಲ್ಲಿಗೆ ಕರೆದುಕೊಂಡು ಹೋಗಿ ನಿಲ್ಲಿಸುತ್ತದೆ ಎನ್ನುವುದು 'ಸೀತಾ ಪಯಣ' ಚಿತ್ರದ ಒನ್‌ಲೈನ್ ಸ್ಟೋರಿ.

ಸಂಬಂಧ ಅನುಬಂಧದ ಪಾಠ ಮಾಡುವ ಹಿರಿಯ ಜೀವವಾಗಿ ಪ್ರಕಾಶ್ ರಾಜ್ ಕಾಣಿಸಿಕೊಂಡಿದ್ದಾರೆ. ಬಾಲಮುರುಗನ್ ಛಾಯಾಗ್ರಹಣ, ಅನೂಪ್ ರುಬೆನ್ಸ್ ಸಂಗೀತ ಚಿತ್ರಕ್ಕಿದೆ. ಶ್ರೀರಾಮ್ ಫಿಲ್ಮ್ ಇಂಟರ್‌ನ್ಯಾಷನಲ್ ಬ್ಯಾನರ್ ಅಡಿಯಲ್ಲಿ ಅರ್ಜುನ್ ಸರ್ಜಾ ಸಿನಿಮಾ ನಿರ್ಮಾಣ ಮಾಡಿದ್ದಾರೆ.

ಈಗಾಗಲೇ ಚಿತ್ರದ ಟೀಸರ್, ಸಾಂಗ್ಸ್ ರಿಲೀಸ್ ಆಗಿ ಹಿಟ್ ಆಗಿದೆ. ಈಗ ಟ್ರೈಲರ್ ಹೊರಬಂದು ಸದ್ದು ಮಾಡ್ತಿದೆ. ನಿರಂಜನ್ ಈಗಾಗಲೇ ಒಂದೆರಡು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಸೀತಾ ಪಯಣ'ದ ಮೂಲಕ ತೆಲುಗು, ತಮಿಳು ಪ್ರೇಕ್ಷಕರಿಗೆ ಪರಿಚಯವಾಗುತ್ತಿದ್ದಾರೆ.

'ಪಟ್ಟಾತು ಯಾನೈ' ಎಂಬ ತಮಿಳು ಸಿನಿಮಾ ಮೂಲಕ ಐಶ್ವರ್ಯ ಚಿತ್ರರಂಗ ಪ್ರವೇಶಿಸಿದ್ದರು. ಬಳಿಕ 'ಪ್ರೇಮ ಬರಹ' ಚಿತ್ರದಲ್ಲಿ ಮಿಂಚಿದ್ದರು. 'ಸೀತಾ ಪಯಣ' ಆಕೆಯ 3ನೇ ಸಿನಿಮಾ. ಕೋವೈ ಸರಳಾ, ಬಿತ್ತಿರಿ ಸತಿ, ಸರಣ್ ಸಿರಿ ಹನುಮಂತ್, ಸೌಮಿತ್ರ, ನರ ಶ್ರೀನು, ಸಹಸ್ರ, ರಾಜ್ ಕುಮಾರ್, ಸಂಜಯ್, ನಾಗ ಮಹೇಶ್, ಮುರಳಿ, ನಿಯಾ, ಮಣಿ ಚಂದನ ಹೀಗೆ ದೊಡ್ಡ ಕಲಾವಿದರ ದಂಡು ಚಿತ್ರದಲ್ಲಿದೆ.

ಈಗಾಗಲೇ 180 ಸಿನಿಮಾಗಳಲ್ಲಿ ಅರ್ಜುನ್ ಸರ್ಜಾ ನಟಿಸಿದ್ದಾರೆ. ಕೆಲ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಆದರೂ ಎಲ್ಲಾ ಚಿತ್ರವನ್ನು ಮೊದಲ ಸಿನಿಮಾ ಎನ್ನುವಂತೆ ಮಾಡುವುದಾಗಿ ಹೇಳಿದ್ದಾರೆ. 'ಸೀತಾ ಪಯಣ' ಕೂಡ ನನ್ನ ಮೊದಲ ಸಿನಿಮಾ ಎನ್ನುವಂತೆ ಕಟ್ಟಿಕೊಟ್ಟಿದ್ದೀನಿ, ನಟಿಸಿದ್ದೀನಿ ಎಂದಿದ್ದಾರೆ. ಧ್ರುವ ಸರ್ಜಾ ಕಾಣಿಸಿಕೊಂಡಿರುವ 'ಬಸವಣ್ಣ' ಸಾಂಗ್ ಚಿತ್ರದ ಹೈಲೆಟ್ ಆಗುವ ಸುಳಿವು ಸಿಕ್ಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X