ವಿವಾದಾತ್ಮಕ ವಿಡಿಯೋ ಹಂಚಿಕೊಂಡು ಕಾಮೆಂಟ್ ಸೆಕ್ಷನ್ ಆಫ್ ಮಾಡಿದ ವೈಷ್ಣವಿ ಗೌಡ..!

ಮನರಂಜನೆಗಾಗಿ ಆನ್ ಲೈನ್ ಗೇಮ್ ಆಡುವ ಹವ್ಯಾಸ ಬೆಳೆಸಿಕೊಂಡ ನಂತರ ಅದು ಚಟ ಆಗಿಬಿಡುತ್ತದೆ. ರಮ್ಮಿ ಗೇಮ್ ನಂಥ ಆಟಗಳ ಚಟಕ್ಕೆ ಕೆಲವರು ತಮ್ಮ ಮನೆ ಮಠ ಕಳೆದುಕೊಂಡು ಜೀವನವನ್ನೇ ನಾಶ ಮಾಡಿಕೊಂಡಿದ್ದಾರೆ.

ಈ ಆಟದಿಂದ ಲಾಭ - ನಷ್ಟ ಎರಡೂ ಆಗಬಹುದು. ಚಿತ್ರರಂಗದ ತಾರೆಯರು ಇದರ ಪ್ರಚಾರ ಮಾಡುವುದರಿಂದ ಬಹುತೇಕರು ಹಣದಾಸೆಗೆ ಬಿದ್ದು ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಸೆಲೆಬ್ರಿಟಿಗಳಿಗೆ ಕೂಡ ಈ ವಿಚಾರ ಚೆನ್ನಾಗಿಯೇ ಗೊತ್ತು. ಆದರೂ.. ಕ್ಯಾರೇ ಎನ್ನದೇ ಹಲವರು ರಮ್ಮಿಯ ಪ್ರಚಾರವನ್ನು ಮಾಡುತ್ತಲೇ ಬಂದಿದ್ದಾರೆ. ಮಾಡುತ್ತಿದ್ದಾರೆ. ಇದಕ್ಕೆ ವೈಷ್ಣವಿ ಗೌಡ ಸದ್ಯದ ಉದಾಹರಣೆ.

Seetha Rama fame Vaishnavi Gowda is the latest celebrity to endorse Junglee Rummy

ಹೌದು, ತಮ್ಮ ಒರಿಜಿನಲ್ ಹೆಸರನ್ನೇ ಮರೆಯಾಗಿಸುವಂತೆ ಅಗ್ನಿಸಾಕ್ಷಿ ಧಾರಾವಾಹಿಯ ಸನ್ನಿಧಿ ಎಂದೇ ಖ್ಯಾತಿಯನ್ನ ಗಳಿಸಿದವರು ವೈಷ್ಣವಿ ಗೌಡ. ತಮ್ಮ ಅಭಿನಯದಿಂದ ಕನ್ನಡಿಗರ ಮನೆ ಮತ್ತು ಮನವನ್ನ ತಲುಪಿದ ವೈಷ್ಣವಿ ಗೌಡ ಭರ್ಜರಿ ಕಾಮಿಡಿ ಎಂಬ ಕಾರ್ಯಕ್ರಮದ ನಿರೂಪಕಿಯೂ ಹೌದು. ಬಿಗ್ ಬಾಸ್‌ ನ ಮಾಜಿ ಸ್ಫರ್ಧಿಯೂ ಹೌದು.

ಕಿರುತೆರೆಯಿಂದ ಹಿರಿತೆರೆಗೆ ತೆರಳಿ ಆ ನಂತರ ಮತ್ತೆ ಮರಳಿ ಕಿರುತೆರೆಗೆ ಬಂದ ವೈಷ್ಣವಿ ಗೌಡ ಸದ್ಯಕ್ಕೆ ಸೀತಾ ಎಂದೇ ಜನಪ್ರಿಯರಾಗಿದ್ದಾರೆ. ಸೀತಾ ರಾಮ ಧಾರಾವಾಹಿಯ ಮೂಲಕ ಕಿರುತೆರೆ ಪ್ರೇಕ್ಷಕರ ಪಾಲಿಗಿವರು ಮನೆಮಗಳೇ ಆಗಿ ಹೋಗಿದ್ದಾರೆ.

ಇಂಥಾ ವೈಷ್ಣವಿ ಗೌಡ ಈಗ ವಿವಾದಕ್ಕೆ ಮುನ್ನುಡಿ ಬರೆದಿದ್ದಾರೆ. ವಿವಾದವಾಗುತ್ತೆ ಎಂಬ ವಿಚಾರ ಗೊತ್ತಿದ್ದರೂ ಕೂಡ ಜಂಗ್ಲಿ ರಮ್ಮಿಯ ಪ್ರಚಾರ ಮಾಡಿದ್ದಾರೆ. ಈ ಮೂಲಕ ತಮ್ಮ ಅಸಂಖ್ಯಾತ ಅಗಣಿತ ಅಭಿಮಾನಿಗಳಿಗೆ ನಿರಾಸೆ ಮಾಡಿ ಕಾಮೆಂಟ್ ಸೆಕ್ಷನ್‌ನ ಆಫ್ ಮಾಡಿದ್ದಾರೆ. ಹೌದು, ವೈಷ್ಣವಿ ಗೌಡ ವಿವಾದಾತ್ಮಕ ಜಾಹೀರಾತಾದ ಜಂಗ್ಲಿ ರಮ್ಮಿಯ ಪ್ರಚಾರವನ್ನು ಮಾಡಿದ್ದಾರೆ. ತಾವು ಪ್ರಚಾರ ಮಾಡಿರುವ ವಿಡಿಯೋ ತುಣುಕನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಡಬಲ್ ರೋಲ್‌ನಲ್ಲಿ ಜಂಗ್ಲಿ ರಮ್ಮಿಯ ಪ್ರಚಾರವನ್ನು ಮಾಡಿರುವ ವೈಷ್ಣವಿ ಗೌಡ, ರಮ್ಮಿ ಸರ್ಕಲ್‌ನಲ್ಲಿ ದೊಡ್ಡ ದೊಡ್ಡ ರಮ್ಮಿ ಟೂರ್ನಾಮೆಂಟ್‌ಗಳು ನಡೆಯುತ್ತಾವೆ, ವರ್ಲ್ಡ್ ರಮ್ಮಿ ಟೂರ್ನಾಮೆಂಟ್ ಇರಬಹುದು, ರಮ್ಮಿ ಪ್ರಿಮಿಯರ್ ಲೀಗ್ ಇರಬಹುದು, ಇದರಲ್ಲಿ ಪ್ರಶಸ್ತಿಯ ಮೊತ್ತ ಎಲ್ಲ ಕೋಟಿಗಟ್ಟಲೆ ಇರುತ್ತೆ ಗೊತ್ತಾ ಎಂದು ಹೇಳಿದ್ದಾರೆ. ಜಂಗ್ಲಿ ರಮ್ಮಿಯ ಗುಣಗಾನವನ್ನು ಮಾಡಿದ್ದಾರೆ.

ಇನ್ನು ಎಲ್ಲರಿಗೆ ಗೊತ್ತಿರುವಂತೆ ಈ ಹಿಂದೆ ಸ್ಟಾರ್‌ಗಳೆಲ್ಲ ಈ ತರಹದ ಕೆಲಸ ಮಾಡಿದಾಗ ಅನೇಕ ಜನ ಮುಲಾಜಿಲ್ಲದೇ ಸ್ಟಾರ್‌ಗಳಿಗೆ ತಪರಾಕಿ ಹಾಕಿದ್ದಾರೆ. ಸಾಮಾಜಿಕ ಮೌಲ್ಯದ ಕುರಿತು ಪ್ರಶ್ನೆ ಮಾಡಿದ್ದಾರೆ. ನಿಂದಿಸಿದ್ದಾರೆ. ಹೀಗಾಗಿಯೇ ವೈಷ್ಣವಿ ಗೌಡ ಇದೆಲ್ಲದರಿಂದ ಮುಕ್ತಿಯನ್ನು ಪಡೆಯಲು ತಮ್ಮ ಕಾಮೆಂಟ್ ಸೆಕ್ಷನ್‌ನ್ನೇ ಆಫ್ ಮಾಡಿದ್ದಾರೆ.

ವೈಷ್ಣವಿ ಗೌಡ ತಮ್ಮ ಕಾಮೆಂಟ್ ಸೆಕ್ಷನ್ ಆಫ್ ಮಾಡಿದರೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಚರ್ಚೆ ನಡೆಯುತ್ತಿದೆ. ಚಿತ್ರರಂಗದ ತಾರೆಯರಿಗೆ ಇರಬೇಕಾದ ಸಾಮಾಜಿಕ ಜವಾಬ್ಧಾರಿಯ ಕುರಿತು ಅನೇಕರು ಮಾತನಾಡುತ್ತಿದ್ದಾರೆ. ಇನ್ನು ಇನ್ಸ್ಟಾಗ್ರಾಮ್‌ನಲ್ಲಿ ವೈಷ್ಣವಿ ಗೌಡ ಅವರಿಗೆ ಹೆಚ್ಚು ಕಡಿಮೆ ಒಂದೂವರೆ ಮಿಲಿಯನ್ ಜನ ಫಾಲೋವರ್ಸ್ ಇದ್ದಾರೆ. ಇಷ್ಟೊಂದು ದೊಡ್ಡ ಮಟ್ಟದಲ್ಲಿ ಫಾಲೋವರ್ಸ್ ಹೊಂದಿರುವ ನಟಿ ರಮ್ಮಿ ಆಡಿ ಎಂದು ತಮ್ಮ ಅಭಿಮಾನಿಗಳಿಗೆ ಮತ್ತು ಜನರಿಗೆ ಪ್ರೋತ್ಸಾಹಿಸುವುದು ಎಷ್ಟು ಸರಿ ಎಂಬ ಪ್ರಶ್ನೆಯನ್ನು ಕೂಡ ಅನೇಕರು ಮಾಡುತ್ತಿದ್ದಾರೆ. ತಮ್ಮ ಹಣದಾಸೆಗೆ ಬೇರೆಯವರ ದಾರಿಯನ್ನು ತಪ್ಪಿಸುವ ಕೆಲಸವನ್ನು ಮಾಡಬಾರದು ಎನ್ನುವ ಅಭಿಪ್ರಾಯವನ್ನು ಕೂಡ ವ್ಯಕ್ತಪಡಿಸುತ್ತಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X