ಕ್ಲೈಮ್ಯಾಕ್ಸ್ ಹಂತದಲ್ಲಿ 'ಸೀತಾ ರಾಮ ಕಲ್ಯಾಣ' ಚಿತ್ರೀಕರಣ
Recommended Video

'ಸೀತಾ ರಾಮ ಕಲ್ಯಾಣ' ನಿಖಿಲ್ ಕುಮಾರ್ ಹಾಗೂ ರಚಿತಾ ರಾಮ್ ಅಭಿನಯದ ಸಿನಿಮಾ. ಟೀಸರ್ ನಿಂದಲೇ ಬಾರಿ ಸುದ್ದಿ ಮಾಡುತ್ತಿರುವ 'ಸೀತಾ ರಾಮ ಕಲ್ಯಾಣ' ಚಿತ್ರದ ಕ್ಲೈಮ್ಯಾಕ್ಸ್ ಹಂತದ ಚಿತ್ರೀಕರಣ ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್ ನಲ್ಲಿ ನಡೆಯುತ್ತಿದೆ.
ಚಿತ್ರದಲ್ಲಿ ಕ್ಲೈಮ್ಯಾಕ್ಸ್ ಶೂಟಿಂಗ್ ನಲ್ಲಿ ನಿಖಿಲ್, ರಚಿತಾ ರಾಮ್, ಶರತ್ ಕುಮಾರ್, ಮಧುಬಾಲ ಭಾಗಿಯಾಗಿದ್ದಾರೆ. ಇದೇ ಕಾರಣದಿಂದಾಗಿ ಅದ್ದೂರಿ ಆಗಿರುವ ಸೆಟ್ ಅನ್ನು ಹಾಕಲಾಗಿದ್ದು ಕಳೆದ ನಾಲ್ಕೈದು ದಿನಗಳಿಂದ ಚಿತ್ರತಂಡ ಚಿತ್ರೀಕರಣದಲ್ಲಿ ಬ್ಯುಸಿ ಆಗಿದೆ.

ನಟಿ ರಚಿತಾ ರಾಮ್ ಮದುವೆ ಹುಡುಗಿಯಂತೆ ಸಿಂಗಾರ ಮಾಡಿಕೊಂಡು ಸೆಟ್ ತುಂಬಾ ಓಡಾಡಿಕೊಂಡಿದ್ದರೆ. ನಿಖಿಲ್ ಕ್ಲೈಮ್ಯಾಕ್ಸ್ ನಲ್ಲಿ ವಿಲನ್ ಗಳ ಜೊತೆ ಫೈಟ್ ಮಾಡುತ್ತಾರೆ ಎನ್ನುವ ಸೂಚನೆ ಸೆಟ್ ನೋಡಿದ ಕೂಡಲೆ ತಿಳಿಯುವಂತಿತ್ತು.
ಸದ್ಯ ಪ್ಯಾಲೆಸ್ ಗ್ರೌಂಡ್ ನಲ್ಲಿ ಚಿತ್ರೀಕರಣ ಮುಗಿಸಲಿರುವ ಸಿನಿಮಾತಂಡ ಇನ್ನು ಹಾಡುಗಳ ಚಿತ್ರೀಕರಣವನ್ನು ಮಾತ್ರ ಬಾಕಿ ಉಳಿಸಿಕೊಂಡಿದೆ. ನಮ್ಮ ನೆಟಿವಿಟಿಗೆ ತಕ್ಕನಾದ ಸಿನಿಮಾ ಆಗಿರುವುದರಿಂದ ಹಾಡುಗಳ ಶೂಟಿಂಗ್ ಅನ್ನು ಕರ್ನಾಟಕದಲ್ಲೇ ಮಾಡಿ ಮುಗಿಸುವ ಯೋಜನೆಯಲ್ಲಿದೆ ಚಿತ್ರತಂಡ.

ಇನ್ನು 'ಸೀತಾ ರಾಮ ಕಲ್ಯಾಣ' ಸಿನಿಮಾವನ್ನು ಎ ಹರ್ಷ ನಿರ್ದೇಶನ ಮಾಡುತ್ತಿದ್ದು ಅನಿತಾ ಕುಮಾರಸ್ವಾಮಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅನೂಪ್ ರೂಬೇನ್ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ.


Click it and Unblock the Notifications











