'ಸೀತಾರಾಮ' ಕೃಪೆಯಿಂದ ನಂಬರ್ 1 ಸ್ಥಾನಕ್ಕೇರಿದ ನಿಖಿಲ್
ನಟ ನಿಖಿಲ್ ಕುಮಾರ್ ಅವರ ಎರಡನೇ ಸಿನಿಮಾ 'ಸೀತಾರಾಮ ಕಲ್ಯಾಣ' ಚಿತ್ರದ ಮೇಲೆ ಅಭಿಮಾನಿಗಳಿಗೆ ಇದ್ದ ನಿರೀಕ್ಷೆ ಈಗ ದುಪ್ಪಟ್ಟಾಗಿದೆ. ಅದಕ್ಕೆ ಕಾರಣ ನಿನ್ನೆ ಬಿಡುಗಡೆಯಾಗಿರುವ ಚಿತ್ರದ ಟೀಸರ್.
ನಿನ್ನೆ ರಾಮನಗರದಲ್ಲಿ 'ಸೀತಾರಾಮ ಕಲ್ಯಾಣ' ಚಿತ್ರದ ಮೊದಲ ಟೀಸರ್ ಬಿಡುಗಡೆಯಾಗಿದೆ. ನಿನ್ನೆ ಸಂಜೆ ಬಿಡುಗಡೆಯಾದ ಈ ಟೀಸರ್ ಅನ್ನು 24 ಗಂಟೆಗಳ ಒಳಗೆ 5 ವರೆ ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಯೂಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವ ಟೀಸರ್ ಸದ್ಯ ಟ್ರೆಂಡಿಂಗ್ 1 ನಲ್ಲಿ ಇದೆ.
ಇದೀಗ ಬಂದಿರುವ ಟೀಸರ್ ನಿಖಿಲ್ ಫ್ಯಾನ್ಸ್ ಗಳಿಗೆ ಬಹಳ ಇಷ್ಟ ಆಗಿದೆ. ಮೇಕಿಂಗ್ ಹಾಗೂ ಕ್ವಾಲಿಟಿ ಗಮನ ಸೆಳೆಯುತ್ತಿದೆ. ಪಕ್ಕಾ ಮಾಸ್ ಆಗಿ ನಿಖಿಲ್ ದರ್ಶನ ನೀಡಿದ್ದಾರೆ. ಮೊದಲ ಚಿತ್ರಕ್ಕಿಂತ ಇನ್ನೂ ಚೆನ್ನಾಗಿ ಸಾಹಸ ಮಾಡಿದ್ದಾರೆ. ಇನ್ನು ಮೊದಲ ಟೀಸರ್ ಆಕ್ಷನ್ ದೃಶ್ಯ ಗಳಿಗೆ ಮಾತ್ರ ಸೀಮಿತವಾಗಿದೆ.

ಟೀಸರ್ ಬಳಿಕ ಸದ್ಯದಲ್ಲಿಯೇ ಚಿತ್ರದ ಹಾಡುಗಳು ಬಿಡುಗಡೆಯಾಗಲಿವೆ. ನಿಖಿಲ್ ಕುಮಾರ್ ಜೋಡಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ನಟಿಸಿದ್ದಾರೆ. ಹರ್ಷ ನಿರ್ದೇಶನ ಮಾಡಿದ್ದು, ಕುಮಾರಸ್ವಾಮಿ ಬ್ಯಾನರ್ ನಲ್ಲಿಯೇ ಚಿತ್ರ ನಿರ್ಮಾಣ ಆಗಿದೆ.


Click it and Unblock the Notifications











