For Quick Alerts
  ALLOW NOTIFICATIONS  
  For Daily Alerts

  ರಾಮನಗರ ಕರಗದಲ್ಲಿ 'ಸೀತಾರಾಮ ಕಲ್ಯಾಣ' ಟೀಸರ್ ರಿಲೀಸ್

  By Pavithra
  |

  'ಸೀತಾರಾಮ ಕಲ್ಯಾಣ' ನಿಖಿಲ್ ಕುಮಾರ್ ಹಾಗೂ ರಚಿತಾ ರಾಮ್ ಅಭಿನಯದ ಸಿನಿಮಾ. ಸದ್ಯ 80 ದಿನಗಳ ಚಿತ್ರೀಕರಣ ಮುಗಿಸಿರುವ ನಿರ್ದೇಶಕ ಎ ಹರ್ಷ ಚಿತ್ರದ ಟೀಸರ್ ಬಿಡುಗಡೆ ಮಾಡಲು ಸಿದ್ದತೆ ಮಾಡಿಕೊಂಡಿದ್ದಾರೆ.

  ರಾಮನಗರದಲ್ಲಿ ನಡೆಯುವ ಅದ್ಧೂರಿ ಕರಗೋತ್ಸವದಲ್ಲಿ ನಿಖಿಲ್ ಕುಮಾರ್ ಅಭಿನಯದ 'ಸೀತಾರಾಮ ಕಲ್ಯಾಣ' ಚಿತ್ರದ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.

  'ದರ್ಶನ್' ಜೊತೆಗಿನ ಆಂತರಿಕ ಕದನಕ್ಕೆ ಬ್ರೇಕ್ ಹಾಕಿದ 'ಅಭಿಮನ್ಯು''ದರ್ಶನ್' ಜೊತೆಗಿನ ಆಂತರಿಕ ಕದನಕ್ಕೆ ಬ್ರೇಕ್ ಹಾಕಿದ 'ಅಭಿಮನ್ಯು'

  ಜುಲೈ 31 ರಂದು ಟೀಸರ್ ರಿಲೀಸ್ ಮಾಡಲು ಮುಹೂರ್ತ ಫಿಕ್ಸ್ ಆಗಿದ್ದು, ಟೀಸರ್ ನಲ್ಲಿ ಔಟ್ ಅಂಡ್ ಔಟ್ ಆಕ್ಷನ್ ಇರುತ್ತಂತೆ. ಆದರೆ ಸಿನಿಮಾದಲ್ಲಿ ಮಾತ್ರ ಎಲ್ಲಾ ರೀತಿಯ ಕಮರ್ಷಿಯಲ್ ಎಲಿಮೆಂಟ್ಸ್ ಇದೆ ಎನ್ನುವುದನ್ನ ಚಿತ್ರದ ನಾಯಕ ನಿಖಿಲ್ ಹೇಳಿದ್ದಾರೆ.

  Seetharama Kalyana Movie Teaser will be released on July 31

  'ಸೀತಾರಾಮ ಕಲ್ಯಾಣ' ಚಿತ್ರದಲ್ಲಿ ಅದ್ಧೂರಿ ಸ್ಟಾರ್ ಕಾಸ್ಟ್ ಇದ್ದು ಬೆಂಗಳೂರು ಸೇರಿದಂತೆ ಮಂಡ್ಯ, ಮೈಸೂರಿನ ಸುತ್ತಾ ಮುತ್ತ ಚಿತ್ರೀಕರಿಸಲಾಗಿದೆ. ಈಗಾಗಲೇ ಸಿನಿಮಾದ ಪೋಸ್ಟರ್ ಗಳು ಚಿತ್ರದ ಬಗ್ಗೆ ನಿರೀಕ್ಷೆ ಹುಟ್ಟಿಸಿದ್ದು, ಟೀಸರ್ ಗಾಗಿ ಅಭಿಮಾನಿಗಳು ಕಾದಿದ್ದಾರೆ.

  English summary
  Kannada 'Seetharama Kalyana' Movie Teaser will be released on July 31. 'Seetharama Kalyana' Teaser will be released in the Karolotsava of Ramanagara .

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X