'ಯಜಮಾನ', 'ಪೈಲ್ವಾನ್' ಬಳಿಕ 'ಸೀತಾರಾಮ'ರ ಅಬ್ಬರ
ಯೂ ಟ್ಯೂಬ್ ನಲ್ಲಿ 'ಯಜಮಾನ' ಹಾಗೂ 'ಪೈಲ್ವಾನ್' ಸಿನಿಮಾಗಳ ನಂತರ ಇದೀಗ 'ಸೀತಾರಾಮ ಕಲ್ಯಾಣ' ಹವಾ ಎಬ್ಬಿಸಿದೆ. ನಿನ್ನೆ ಬಿಡುಗಡೆಯಾದ ಸಿನಿಮಾದ ಟ್ರೇಲರ್ ಧೂಳಿಪಟ ಮಾಡುತ್ತಿದೆ.
ನಿಖಿಲ್ ಕುಮಾರ್ ಅಭಿನಯದ 'ಸೀತಾರಾಮ ಕಲ್ಯಾಣ' ಸಿನಿಮಾದ ಟ್ರೇಲರ್ ನಿನ್ನೆ ಸಂಜೆ 8 ಗಂಟೆಗೆ ಬಿಡುಗಡೆಯಾಗಿದೆ. ಟ್ರೇಲರ್ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದ್ದು, ಸದ್ಯ ಯೂ ಟ್ಯೂಬ್ ನಲ್ಲಿ ಟಾಪ್ ಟ್ರೆಂಡಿಂಗ್ 2 ನಲ್ಲಿದೆ.
ಟ್ರೇಲರ್ ಬಿಡುಗಡೆಯಾದ ಕೇವಲ 13 ಗಂಟೆಗಳಲ್ಲಿ ಎರಡು ಮಿಲಿಯನ್ ಹಿಟ್ಸ್ ಪಡೆದುಕೊಂಡಿದೆ. 38 ಸಾವಿರಕ್ಕೂ ಅಧಿಕ ಜನರು ಟ್ರೇಲರ್ ಅನ್ನು ಲೈಕ್ ಮಾಡಿದ್ದಾರೆ. ಈ ಸಿನಿಮಾ ಪಕ್ಕಾ ಮಾಸ್ ಹಾಗೂ ಫ್ಯಾಮಿಲಿ ಕಥೆ ಎಂಬುದು ಟ್ರೇಲರ್ ನಲ್ಲಿ ತಿಳಿಯುತ್ತದೆ.

ಒಂದು ಕಡೆ ನಿಖಿಲ್ ಆಕ್ಷನ್ ಗಮನ ಸೆಳೆಯುತ್ತಿದೆ. ಮತ್ತೊಂದು ಕಡೆ ರಚಿತಾ ರಾಮ್ ಮುದ್ದು ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ರವಿಶಂಕರ್, ಚಿಕ್ಕಣ್ಣ, ಕಾಮಿಡಿ ಕಿಲಾಡಿ ಲೋಕಿ, ಶರತ್ ಕುಮಾರ್, ಆದಿತ್ಯ ಮೆನನ್ ಸೇರಿದಂತೆ ಅನೇಕರು ನಟಿಸಿದ್ದಾರೆ.
ಎ ಹರ್ಷ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಅನಿತಾ ಕುಮಾರಸ್ವಾಮಿ ಚಿತ್ರದ ನಿರ್ಮಾಣ ಮಾಡಿದ್ದಾರೆ. ಸಿನಿಮಾ ಜನವರಿ 25ಕ್ಕೆ ಬಿಡುಗಡೆಯಾಗಲಿದೆ.


Click it and Unblock the Notifications











