'ಪೈಲ್ವಾನ್' ಹಿಂದೆ ಹಾಕಿ 'ಯಜಮಾನ'ನ ಬಳಿ ಮುನ್ನುಗಿದ ಯುವರಾಜ

ಒಂದರ ಹಿಂದೆ ಒಂದರಂತೆ ಕನ್ನಡ ಸಿನಿಮಾಗಳ ಟ್ರೇಲರ್, ಟೀಸರ್ ಮತ್ತು ಹಾಡುಗಳು ಯೂ ಟ್ಯೂಬ್ ನಲ್ಲಿ ಅಬ್ಬರ ನಡೆಸುತ್ತಿವೆ. 'ಯಜಮಾನ' ಹಾಗೂ 'ಪೈಲ್ವಾನ್' ಬಳಿಕ 'ಸೀತಾರಾಮ ಕಲ್ಯಾಣ' ಇದೀಗ ದರ್ಬಾರ್ ನಡೆಸುತ್ತಿದೆ.

ಯುವರಾಜ ನಿಖಿಲ್ ಕುಮಾರ್ ನಟನೆಯ 'ಸೀತಾರಾಮ ಕಲ್ಯಾಣ' ದೊಡ್ಡ ಮಟ್ಟದ ಹಿಟ್ ಆಗಿದೆ. ಈಗಾಗಲೇ ಸುದೀಪ್ ಅವರ 'ಪೈಲ್ವಾನ್' ಸಿನಿಮಾದ ಟೀಸರ್ ಅನ್ನು ಹಿಂದೆ ಹಾಕಿರುವ 'ಸೀತಾರಾಮ ಕಲ್ಯಾಣ' ಟ್ರೇಲರ್, ದರ್ಶನ್ ಅವರ 'ಯಜಮಾನ'ನ ಹತ್ತಿರ ಹೋಗುತ್ತಿದೆ.

ಒಂದು ಕಡೆ ನಿಖಿಲ್ ಕುಮಾರ್ ಆಕ್ಷನ್ ಮತ್ತೊಂದು ಕಡೆ ರಚಿತಾ ರಾಮ್ ಬ್ಯೂಟಿ ಎರಡು ಸೇರಿ ಟ್ರೇಲರ್ ಅಂದವಾಗಿದೆ. ಪಕ್ಕಾ ಫ್ಯಾಮಿಲಿ ಎಂಟಟೈನಿಂಗ್ ಆಗಿರುವ 'ಸೀತಾರಾಮ ಕಲ್ಯಾಣ' ಬಿಡುಗಡೆಗೆ ಮೊದಲೇ ಆರ್ಭಟ ಶುರು ಮಾಡಿದೆ. ಮುಂದೆ ಓದಿ...

'ಪೈಲ್ವಾನ್' ಸೋಲಿಸಿದ ನಿಖಿಲ್

'ಪೈಲ್ವಾನ್' ಸೋಲಿಸಿದ ನಿಖಿಲ್

'ಸೀತಾರಾಮ ಕಲ್ಯಾಣ' ಸಿನಿಮಾದ ಟ್ರೇಲರ್ ಸದ್ಯ 4.6 ಮಿಲಿಯನ್ ಹಿಟ್ಸ್ ಪಡೆದುಕೊಂಡಿದೆ. 'ಪೈಲ್ವಾನ್' ಚಿತ್ರದ ಟೀಸರ್ 3.7 ಮಿಲಿಯನ್ ಹಿಟ್ಸ್ ಇದ್ದು, ಯುವರಾಜ 'ಪೈಲ್ವಾನ್'ನನ್ನು ಸೋಲಿಸಿದ್ದಾನೆ. ಟ್ರೇಲರ್ ಬಿಡುಗಡೆಯಾದ ಬರೀ ಎರಡೇ ದಿನದಲ್ಲಿ ಈ ಮಟ್ಟಿಗಿನ ಕ್ರೇಜ್ ಸೃಷ್ಟಿ ಮಾಡಿ ಅಚ್ಚರಿ ಮೂಡಿಸಿದೆ.

ಟ್ರೆಂಡಿಂಗ್ ನಂಬರ್ 1

ಟ್ರೆಂಡಿಂಗ್ ನಂಬರ್ 1

ನಿಖಿಲ್ ಸಿನಿಮಾದ ಟ್ರೇಲರ್ ಸದ್ಯ ಯೂ ಟ್ಯೂಬ್ ನಲ್ಲಿ ಟ್ರೆಂಡಿಂಗ್ ನಂಬರ್ 1 ವಿಡಿಯೋವಾಗಿದೆ. ನಿನ್ನೆ ನಂಬರ್ 2 ಸ್ಥಾನದಲ್ಲಿದ್ದ ಟ್ರೇಲರ್ ಇಂದು ಮೊದಲ ಸ್ಥಾನ ಪಡೆದುಕೊಂಡಿದೆ. ಯೂ ಟ್ಯೂಬ್ ನಲ್ಲಿ ಸೀತಾರಾಮ ನಾಗಾಲೋಟ ಮುಂದುವರೆಸಿದ್ದಾರೆ. 'ಪೈಲ್ವಾನ್' ಟೀಸರ್ ಸದ್ಯ 11 ಟ್ರೆಂಡಿಂಗ್ ನಲ್ಲಿದೆ.

ಸುದೀಪ್ ಶುಭಾಶಯ

ನಟ ಸುದೀಪ್ ಸಹ 'ಸೀತಾರಾಮ ಕಲ್ಯಾಣ' ಚಿತ್ರದ ಟ್ರೇಲರ್ ಬಗ್ಗೆ ಟ್ವೀಟ್ ಮಾಡಿದ್ದಾರೆ. ನಟ ನಿಖಿಲ್ ಕುಮಾರಸ್ವಾಮಿ ಹಾಗೂ ಹರ್ಷ ಸೇರಿದಂತೆ ಇಡೀ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಟ್ರೇಲರ್ ಅನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಾಕುವ ಮೂಲಕ ಸಿನಿಮಾಗೆ ಕಿಚ್ಚ ಸಾಥ್ ನೀಡಿ ಚಿತ್ರ ಗೆಲ್ಲಲಿ ಎಂದು ವಿಶ್ ಮಾಡಿದ್ದಾರೆ.

'ಯಜಮಾನ' ಬಳಿ ಮುನ್ನುಗುತ್ತಿದೆ

'ಯಜಮಾನ' ಬಳಿ ಮುನ್ನುಗುತ್ತಿದೆ

'ಯಜಮಾನ' ಸಿನಿಮಾದ ಮೊದಲ ಹಾಡು 'ಶಿವನಂದಿ' ಯೂ ಟ್ಯೂಬ್ ನಲ್ಲಿ ದೊಡ್ಡ ಪ್ರಶಂಸೆ ಪಡೆದುಕೊಂಡಿತ್ತು. ಇದೀಗ 'ಸೀತಾರಾಮ ಕಲ್ಯಾಣ' ಸಿನಿಮಾ ಟ್ರೇಲರ್ 'ಯಜಮಾನ' ಹತ್ತಿರ ಮುನ್ನುಗುತ್ತಿದೆ. 'ಯಜಮಾನ' ಮತ್ತು 'ಸೀತಾರಾಮ ಕಲ್ಯಾಣ' ಚಿತ್ರದ ನಡುವೆ 90 ಹಿಟ್ಸ್ ಅಂತರವಿದೆ.

ಇದೇ ತಿಂಗಳು ತೆರೆಗೆ

ಇದೇ ತಿಂಗಳು ತೆರೆಗೆ

'ಸೀತಾರಾಮ ಕಲ್ಯಾಣ' ಸಿನಿಮಾ ಇದೇ ತಿಂಗಳ 25ಕ್ಕೆ ಬಿಡುಗಡೆಯಾಗಲಿದೆ. ಎ ಹರ್ಷ ಈ ಸಿನಿಮಾದ ನಿರ್ದೇಶನ ಮಾಡಿದ್ದು, ಅನಿತಾ ಕುಮಾರಸ್ವಾಮಿ ನಿರ್ಮಾಣದ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ನಿಖಿಲ್ ಕುಮಾರ್, ರಚಿತಾ ರಾಮ್, ರವಿಶಂಕರ್, ಚಿಕ್ಕಣ್ಣ, ಕಾಮಿಡಿ ಕಿಲಾಡಿ ಲೋಕಿ, ಶರತ್ ಕುಮಾರ್, ಆದಿತ್ಯ ಮೆನನ್ ಸೇರಿದಂತೆ ಅನೇಕರು ನಟಿಸಿದ್ದಾರೆ.

More from Filmibeat

English summary
Kannada actor Nikhil Kumar's 'Seetharama Kalyana' movie trailer got 4.6 million views on youtube.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X