ಅಬ್ಬಬ್ಬಾ 5 ಮಿಲಿಯನ್ ಗಡಿ ದಾಡಿದ 'ಸೀತಾರಾಮ ಕಲ್ಯಾಣ' ಟ್ರೇಲರ್
'ಸೀತಾರಾಮ ಕಲ್ಯಾಣ' ಸಿನಿಮಾದ ಟ್ರೇಲರ್ ಯೂ ಟ್ಯೂಬ್ ನಲ್ಲಿ ದೊಡ್ಡ ಮಟ್ಟದ ಹಿಟ್ ಆಗಿದೆ. ಇದೀಗ ಟ್ರೇಲರ್ ಬರೋಬ್ಬರಿ 5 ಮಿಲಿಯನ್ ಹಿಟ್ಸ್ ಪಡೆದುಕೊಂಡಿದೆ.
ಕಳೆದ ಶನಿವಾರ ಸಂಜೆ ಬಿಡುಗಡೆಯಾಗಿರುವ ಟ್ರೇಲರ್ ಯೂಟ್ಯೂಬ್ ನಲ್ಲಿ ಟ್ರೆಂಡ್ ಆಗಿದೆ. ಸದ್ಯ, ಈ ಟ್ರೇಲರ್ ಯೂಟ್ಯೂಬ್ ನಲ್ಲಿ 2ನೇ ಟ್ರೆಂಡಿಂಗ್ ವಿಡಿಯೋ ಆಗಿದೆ. ಮೂರೇ ದಿನಗಳಲ್ಲಿ 5 ಮಿಲಿಯನ್ ಹಿಟ್ಸ್ ಪಡೆದು ತನ್ನ ಆರ್ಭಟವನ್ನು ಈ ಚಿತ್ರ ಮುಂದುವರೆಸಿದೆ.

ಈಗಾಗಲೇ 'ಪೈಲ್ವಾನ್' ಸಿನಿಮಾ ಟೀಸರ್ ಅನ್ನು ಹಿಂದೆ ಹಾಕಿರುವ 'ಸೀತಾರಾಮ ಕಲ್ಯಾಣ' ಟ್ರೇಲರ್ 'ಯಜಮಾನ'ನ ಶಿವನಂದಿ ಹಾಡಿನ ಸಮೀಪ ಹೋಗುತ್ತಿದೆ.
'ಸೀತಾರಾಮ ಕಲ್ಯಾಣ' ಸಿನಿಮಾ ಇದೇ ತಿಂಗಳ 25ಕ್ಕೆ ಬಿಡುಗಡೆಯಾಗಲಿದೆ. ಎ ಹರ್ಷ ಈ ಸಿನಿಮಾದ ನಿರ್ದೇಶನ ಮಾಡಿದ್ದು, ಅನಿತಾ ಕುಮಾರಸ್ವಾಮಿ ನಿರ್ಮಾಣದ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ನಿಖಿಲ್ ಕುಮಾರ್, ರಚಿತಾ ರಾಮ್, ರವಿಶಂಕರ್, ಚಿಕ್ಕಣ್ಣ, ಕಾಮಿಡಿ ಕಿಲಾಡಿ ಲೋಕಿ, ಶರತ್ ಕುಮಾರ್, ಆದಿತ್ಯ ಮೆನನ್ ಸೇರಿದಂತೆ ಅನೇಕರು ನಟಿಸಿದ್ದಾರೆ.
English summary
Kannada actor Nikhil Kumar's 'Seetharama Kalyana' movie trailer got 5 million views on youtube.


Click it and Unblock the Notifications