Seetharama ; ಸಿಹಿ ತಂದೆ ರಾಮ್ ಎಂದು ತಿಳಿದ ಶ್ಯಾಮ್ : ತಮ್ಮನಿಗಾಗಿ ಹಠ ಮಾಡುತ್ತಿರುವ ಪುಟಾಣಿ..!
ಸೀತಾರಾಮ ಧಾರಾವಾಹಿಯಲ್ಲಿ ಕೆಲ ದಿನಗಳಿಂದ ಭಾರ್ಗವಿ ನಾಪತ್ತೆಯಾಗಿದ್ದಳು. ಫೋನ್ ನಲ್ಲೇ ಮನೆಯನ್ನು ನಡೆಸಿದ್ದಳು. ಸಿಹಿ ಬೋರ್ಡಿಂಗ್ ಸ್ಕೂಲ್ ಗೆ ಹೋಗುವಂತೆ ಮಾಡಿದ್ದಳು. ಇನ್ನು ರಾಮ್ ಆಸ್ತಿ ಮೇಲಿನ ಹಕ್ಕು ಸೀತಾ ಕೈ ಸೇರುವಂತೆ ಭಾರ್ಗವಿ ಲೆಕ್ಕಾಚಾರ ಹಾಕಿದ್ದಳು. ಆದರೆ ಸತ್ಯಜಿತ್ ಮುಂದಾಲೋಚನೆಯಿಂದ ಅದು ಕೈ ತಪ್ಪಿತು. ಇನ್ನು ಭಾರ್ಗವಿ ಪ್ಲಾನ್ ಗಳೆಲ್ಲವೂ ಸಕ್ಸಸ್ ಆಗುವಂತೆ ಆಗಿ ಈಗ ಎಲ್ಲವೂ ತಳೆಕೆಳಗಾಗಿದೆ. ಭಾರ್ಗವಿ ಮನೆಗೆ ಬಂದಿದ್ದ, ಅವಳ ಬರುತ್ತಿದ್ದಂತೆ ಸಿಹಿಯೂ ವಾಪಸ್ ಆಗಿದ್ದಾಳೆ.
ಹಲವು ಮಾಹಿತಿ ಕಲೆ ಹಾಕಿರುವ ಭಾರ್ಗವಿ
ಭಾರ್ಗವಿ ಮನೆಯಿಂದ ಹೊರಗೆ ಹೋಗಿದ್ದರೂ ಕೂಡ ಸೀತಾ ಮತ್ತು ಸಿಹಿ ಹಿಂದಿನ ರಹಸ್ಯವನ್ನು ಕಲೆ ಹಾಕಿದ್ದಾಳೆ. ರುದ್ರಪ್ರತಾಪ್ ಸೀತಾ ಸಿಹಿಗೆ ಜನ್ಮ ನೀಡಿದ ಆಸ್ಪತ್ರೆಯ ಫೈಲ್ ಅನನು ತಂದು ಭಾರ್ಗವಿ ಕೈ ಸೇರುವಂತೆ ಮಾಡಿದ್ದಾನೆ. ಆದರೆ, ಅದರಲ್ಲೂ ಸಿಹಿ ಅಪ್ಪ ಯಾರು ಎಂಬ ಸತ್ಯ ಗೊತ್ತಾಗಿಲ್ಲ. ಆದರೆ, ಭಾರ್ಗವಿ ಸತ್ಯ ತಿಳಿಯುವವರೆಗೂ ಬಿಡುವ ಮಾತೇ ಇಲ್ಲ. ಡಾ. ಅನಂತಲಕ್ಷ್ಮೀ ಸೀತಾಳ ಡೆಲಿವರಿ ಮಾಡಿಸಿದ್ದು, ಆಕೆಗೆ ಸಿಹಿ ತಂದೆ ಬಗ್ಗೆ ಮಾಹಿತಿ ಗೊತ್ತಿರುತ್ತದೆ ಎಂದು ಗೆಸ್ ಮಾಡಿದ್ದಾಳೆ. ಅಲ್ಲದೇ ಸೀತಾ ಬಾಣಂತನವು ಸಂಜೀವಿನಿ ಆಶ್ರಮದಲ್ಲಿ ನಡೆಯಲು ಡಾ.ಅನಂತಲಕ್ಷ್ಮೀ ಸಹಾಯ ಮಾಡಿರುವುದು ಭಾರ್ಗವಿಗೆ ಗೊತ್ತಾಗಿದೆ.

ಸಿಹಿ ಬೋರ್ಡಿಂಗ್ ಸ್ಕೂಲ್ ಹೋಗುವಂತಿಲ್ಲ
ಸೂರಿ ತಾತ ವಂಶೋದ್ಧಾರಕ ಬೇಕು ಎಂದು ಕೇಳಿದ್ದು, ರಾಮ್ ಮತ್ತು ಸೀತಾಳ ಮನವನ್ನು ಮತ್ತೆ ಕಲುಕಿದಂತಾಗಿದೆ. ಅವರಿಬ್ಬರೂ ಬೇಡ ಎಂದುಕೊಂಡಿರುವುದನ್ನೇ ತಾತ ಪದೇ ಪದೇ ಬಯಸುತ್ತಿರುವುದಕ್ಕೆ ಇಬ್ಬರೂ ಬೇಸರ ಮಾಡಿಕೊಂಡಿದ್ದಾರೆ. ರಾಮ್ ಯಾರು ಏನೇ ಹೇಳಲಿ ನನಗೆ ಸಿಹಿ ಒಬ್ಬಳೇ ಮಗಳು. ಅವಳು ಬಿಟ್ಟು ಬೇರೆ ಯಾರೂ ಬೇಡ ಎಂದಿದ್ದಾನೆ. ಬೋರ್ಡಿಂಗ್ ಸ್ಕೂಲ್ ನಿಂದ ಸಿಹಿಯನ್ನು ಮನೆಗೆ ಕರೆ ತಂದಿದ್ದಾನೆ. ಇನ್ಮುಂದೆ ಸಿಹಿ ಎಲ್ಲೂ ಹೋಗುವಂತಿಲ್ಲ ಎಂದು ಹೇಳಿದ್ದಾನೆ. ಸೂರಿ ತಾತನಿಗೆ ಇವಳೇ ನಿಮ್ಮ ಮೊಮ್ಮಗಳು ಎಂದು ತೋರಿಸಿ, ಸಮಾಧಾನ ಮಾಡಲು ಯತ್ನಿಸಿದ್ದಾನೆ.
ತಮ್ಮನಿಗಾಗಿ ಪೂಜೆ ಮಾಡುತ್ತಿರುವ ಸಿಹಿ
ಸೂರಿ ತಾತ ಬಹಳ ಹುಷಾರಾಗಿದ್ದು, ಸಿಹಿಗೆ ತಮ್ಮ ಬೇಡವಾ ಎಂದು ಪ್ರಶ್ನಿಸಿದ್ದಾರೆ. ಏನೂ ಅರಿಯದ ಸಿಹಿ ಈಗ ರಾಮ್ ಮತ್ತು ಸೀತಾಳನ್ನು ನನಗೆ ತಮ್ಮ ಬೇಕು. ಬೇಗ ಕೊಡಿ. ನನ್ನ ತಮ್ಮನನ್ನು ನಾನೇ ನೋಡಿಕೊಳ್ಳುತ್ತೇನೆ ಎಂದು ಹಠ ಹಿಡಿದಿದ್ದಾಳೆ. ಅಲ್ಲದೇ, ನನಗೆ ತಮ್ಮ ಬರುವವರೆಗೂ ದೇವರಿಗೆ ನಿತ್ಯ ಪುಷ್ಪಾರ್ಚನೆ ಮಾಡುತ್ತೇನೆ ಎಂದು ದೇವರಲ್ಲಿ ಹರಸಿಕೊಂಡಿದ್ದಾನೆ. ವಿಶ್ವನಿಗೆ ಈ ಸತ್ಯ ಗೊತ್ತಾಗಿದ್ದು, ಭಾರ್ಗವಿ ಪ್ಲಾನ್ ಠುಸ್ ಆಗುವುದು ಗ್ಯಾರೆಂಟಿ ಎಂದು ಊಹಿಸಿದ್ದಾನೆ. ಸಿಹಿ ತಮ್ಮ ಬೇಕು ಎನ್ನುತ್ತಿರುವುದು ಸೀತಾ ಮತ್ತು ರಾಮ್ ಗೆ ಸಂಕಟವನ್ನು ತಂದಿದೆ.

ಸಿಹಿ ಬಗ್ಗೆ ತಿಳಿದ ಶ್ಯಾಮ್ ಮೊಗದಲ್ಲಿ ಖುಷಿ
ಇನ್ನು ಇತ್ತ ಮೇಘಶ್ಯಾಮ್ ಬೋರ್ಡಿಂಗ್ ಸ್ಕೂಲ್ ನಲ್ಲಿ ಸಿಹಿಯನ್ನು ನೋಡದೆಯೇ ಬೇಸರವಾಗಿದ್ದಾನೆ. ಆದರೆ, ಮನೆಗೆ ಬಂದ ಬಳಿಕ ಚಾಂದಿನಿ ಸಿಹಿ ಫೋಟೋ ತೋರಿಸಿ, ಇವಳೇನಾ ನಿನ್ನ ಪೇಶಂಟ್ ಎಂದು ಕೇಳಿದ್ದಾಳೆ. ಶ್ಯಾಮ್ ಸಿಹಿ ಫೋಟೋ ನೋಡಿ ಖುಷಿ ಪಟ್ಟಿದ್ದಾನೆ. ಸಿಹಿ ರಾಮ್ ಮಗಳು ಎಂಬ ಸತ್ಯ ತಿಳಿದು ಬಹಳ ಹ್ಯಾಪಿ ಆಗಿದ್ದಾನೆ. ರಾಮ್ ಗೆ ಈಗಲೇ ಫೋನ್ ಮಾಡಿ ಮಾತನಾಡುತ್ತೇನೆ ಎಂದಿದ್ದಾನೆ. ಚಾಂದಿನಿಯ ಅನುಮಾನಗಳು ಈಗ ಹೆಚ್ಚಾಗುತ್ತಿದೆ.


Click it and Unblock the Notifications











