₹600 ಕೋಟಿಯ 'ಟಾಕ್ಸಿಕ್' ತೋಪೆದ್ದು ಹೋಗುತ್ತೆ - ಯಶ್‌ನ ಕೆಣಕಿದ ಸ್ವಯಂಘೋಷಿತ ಬಾಲಿವುಡ್ ವಿಮರ್ಷಕ ಕೆಆರ್‌ಕೆ
ದಕ್ಷಿಣ ಭಾರತೀಯ ಚಿತ್ರರಂಗದಿಂದ ಕಾಲ ಕಾಲಕ್ಕೆ ಹೊಸದೊಂದು ಅಲೆ ಎದ್ದೇಳುತ್ತಿದೆ. ಹೀಗೆ ಎದ್ದ ಈ ಅಲೆಗೆ ಬಾಕ್ಸಾಫೀಸ್ ನಲುಗಿ ಹೋಗುತ್ತಿದೆ. ಆದರೆ .. ಬಾಲಿವುಡ್‌ನವರ ಪಾಲಿಗೆ ಈ ಅಲೆ ಬಲೆಯಂತೆ ಭಾಸವಾಗುತ್ತಿದೆ. ವಿಲ ವಿಲ ಒದ್ದಾಡುತ್ತಿದ್ದಾರೆ. ಯಾಕೆಂದರೆ.. ಹಿಂದೆ ಒಂದು ಕಾಲದಲ್ಲಿ ತಮ್ಮಿಂದನೇ ಚಿತ್ರರಂಗ ಎನ್ನುವ ಧೋರಣೆ ಇವರಲ್ಲಿತ್ತು. ಇವತ್ತು ಸೌತ್ ಚಿತ್ರರಂಗದವರ ಅಬ್ಬರದ ಮುಂದೆ...
ಮಂಕೆದ್ದು ಕುಂತ ಸ್ಟಾರ್‌ಗಳೇ ಹಿಂದೊಮ್ಮೆ ದಕ್ಷಿಣ ಭಾರತೀಯ ಚಿತ್ರರಂಗದ ಕಿಂಡಲ್ ಮಾಡುತ್ತಿದ್ದರು. ಆದರೆ ಈಗ ಜನ ಈ ಬಾಲಿವುಡ್‌ನವರನ್ನೇ ಕಂಡು ನಗಾಡುತ್ತಿದ್ದಾರೆ. ಅದೇ ಹಳಸಿದ ಕಥೆಗಳನ್ನು ಹೇಳುತ್ತಿರುವ ಹಿಂದಿ ಉದ್ಯಮದವರನ್ನು ಮೂಲೆ ಗುಂಪು ಮಾಡುತ್ತಿದ್ಧಾರೆ.

ಇದೆಲ್ಲರಿಂದ ಸದ್ಯ ಹೈರಾಣಾಗಿರುವ ಬಾಲಿವುಡ್ ಈಗ ಬಾಯಿ ಬಡಿದುಕೊಳ್ಳಲು ಶುರು ಮಾಡಿದೆ. ದಕ್ಷಿಣದ ಚಿತ್ರಗಳನ್ನು ಅವಹೇಳನ ಮಾಡುವ ಮೂಲಕ, ಇಲ್ಲಿಯ ಸ್ಟಾರ್‌ಗಳ ಕುರಿತು ನಾಲಿಗೆ ಹರಿಬಿಡುವ ಮೂಲಕ ತನ್ನ ವಿಕೃತ ಮನಸ್ಥಿತಿಯ ಪ್ರದರ್ಶನವನ್ನು ಕೂಡ ಮಾಡುತ್ತಿದೆ. ಇದಕ್ಕೆ ''ಕೆ.ಆರ್.ಕೆ'' ಅಲಿಯಾಸ್ ''ಕಮಲ್ ಆರ್ ಖಾನ್'' ಮಾಡಿರುವ ಟ್ವಿಟ್ ಸದ್ಯದ ಸಾಕ್ಷಿ.
ಹೌದು, ಕೆಆರ್‌ಕೆ.. ಬಾಲಿವುಡ್‌ನ ನಿರುದ್ಯೋಗಿ. ಸರಿ ಸುಮಾರು ಒಂದೂವರೆ ದಶಕದ ಹಿಂದೆ ''ದೇಶದ್ರೋಹಿ'' ಎಂಬ ಪರಮ ತೋಪು ಚಿತ್ರವನ್ನು ಮಾಡಿದ್ದೇ ಈ ವ್ಯಕ್ತಿಯ ಸಾಧನೆ.
ಅಲ್ಲಿಂದ.. ಇಲ್ಲಿಯವರೆಗೆ.. ಹಿಂದಿ ಉದ್ಯಮದಲ್ಲಿ ನಯಾ ಪೈಸಾ ಕೆಲಸ ಮಾಡದ ಈ ವ್ಯಕ್ತಿ ಕಂಡ ಕಂಡವರ ಜೊತೆ ಕಾಲ್ ಕೆರೆದುಕೊಂಡು ಜಗಳಕ್ಕೆ ನಿಲ್ಲುವುದನ್ನೇ ಕಾಯಕವನ್ನಾಗಿಸಿಕೊಂಡಿದ್ದಾನೆ.
ಖುದ್ದು ಬಾಲಿವುಡ್‌ನವರೇ ಈ ವ್ಯಕ್ತಿಯ ಮುಖಕ್ಕೆ ಮಂಗಳಾರತಿ ಮಾಡಿ ಮೂಲೆ ಗುಂಪು ಮಾಡಿದ್ದಾರೆ. ಆದರೂ ಬುದ್ದಿ ಕಲಿಯದ ಕೆ.ಆರ್.ಕೆ ಈಗ ಕನ್ನಡದ ಹೆಮ್ಮೆಯ ಸ್ಟಾರ್ ಯಶ್ ಅವರನ್ನು ಕೆಣಕಿದ್ದಾನೆ. ವ್ಯಂಗ್ಯ ಮಾಡಿದ್ದಾನೆ.

ಈ ಕುರಿತು ತನ್ನ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಕೆಆರ್‌ಕೆ, ಕನ್ನಡ ನಟ ಯಶ್ ಸ್ವಯಂ ಮೋಹಕ್ಕೆ ಸಿಲುಕಿದ್ದಾರೆ. ಅವರ ಮುಂದಿನ ಚಿತ್ರಕ್ಕೆ ಅವರೇ ಕಥೆಗಾರ.. ನಿರ್ದೇಶಕ.. ನಿರ್ಮಾಪಕ. ಇಷ್ಟೇ ಅಲ್ಲ ಪಾತ್ರ ವರ್ಗ ಆಯ್ಕೆ ಮಾಡುವ ಕಾಸ್ಟಿಂಗ್ ಡೈರೆಕ್ಟರ್ ಮತ್ತು ಪ್ರೊಡಕ್ಷನ್ ಡಿಸೈನರ್ ಕೂಡ ಹೌದು. ''ಕೆಜಿಎಫ್ 2'' ಗೆಲುವು ಕಾಣಬೇಕೆಂಬ ಹಂಬಲದಲ್ಲಿ ತಮ್ಮ ಮುಂದಿನ ಚಿತ್ರ ''ಟಾಕ್ಸಿಕ್'' 600 ಕೋಟಿ ಹಣ ವೆಚ್ಚ ಮಾಡಿದ್ದಾರೆ. ಆದರೆ.. ಅವರು ಬಯಸಿದ ಗೆಲುವು ಅವರಿಗೆ ಖಂಡಿತವಾಗಿಯೂ ಸಿಗುವುದಿಲ್ಲ ಎಂದು ಹೇಳಿದ್ದಾನೆ.
ಸದ್ಯ ಕೆಆರ್‌ಕೆ ಈ ಟ್ವಿಟ್ ಸಹಜವಾಗಿ ಕನ್ನಡಿಗರನ್ನು ಕೆರಳಿಸಿದೆ. ಹೀಗಾಗಿಯೇ ಅನೇಕರು ಕೆಆರ್‌ಕೆ ಉಗಿದು ಉಪ್ಪು ಹಾಕುತ್ತಿದ್ಧಾರೆ. ''ಟಾಕ್ಸಿಕ್'' ಚಿತ್ರದ ಬಿಡುಗಡೆಯ ನಂತರ ಮಾತನಾಡೋಣ ಎನ್ನುತ್ತಿದ್ದಾರೆ. ಆಗ ಪಲಾಯನ ಮಾಡಬೇಡಿ ಎನ್ನುತ್ತಿದ್ದಾರೆ.
ಇನ್ನು ಒಬ್ಬರು ಆರಂಭದಲ್ಲಿ ನಿಮಗೆ ಇದು ಅತಿಯಾದ ಆತ್ಮವಿಶ್ವಾಸದಂತೆ ಕಾಣಬಹುದು. ಆದ್ರೆ ಯಶ್ ಅವರ ಸಿನಿಮಾ ಹಿನ್ನಲೆಯನ್ನು ಗಮನಿಸಿದ್ರೆ ಈ ರೀತಿ ಮಾತನಾಡಲ್ಲ. ಯಶ್ ಇತಿಹಾಸ ತಿಳಿದವರು ಹೀಗೆ ಮಾತನಾಡಲು ಸಾಧ್ಯ ಇಲ್ಲ. ಯಶ್ ಓರ್ವ ಕನಸುಗಾರ ಮತ್ತು ಸಾಧಕ. ಮೊದಲು 100 ಕೋಟಿ ಸಿನಿಮಾ ಅಂತ ಹೇಳಿದಾಗ ಎಲ್ಲರೂ ನಕ್ಕಿದ್ದರು. ಈಗ ಅದು ಇತಿಹಾಸ ಎಂದು ಕೆಆರ್‌ಕೆಗೆ ತಿರುಗೇಟು ನೀಡಿದ್ದಾರೆ. ಮತ್ತೂ ಕೆಲವರು ನೀವು ಮೊದಲು ಆಕ್ಟಿಂಗ್ ಹೇಗೆ ಮಾಡಬೇಕು ಎನ್ನುವುದನ್ನು ಕಲಿಯಿರಿ ಜ್ಞಾನಿಯಂತೆ ವರ್ತಿಸಬೇಡಿ ಎಂದು ಕಿವಿ ಮಾತನ್ನು ಕೂಡ ಹೇಳಿದ್ದಾರೆ. ಕೆಆರ್‌ಕೆ ವಿರುದ್ಧ ಕಿಡಿ ಕಾರುತ್ತಿದ್ಧಾರೆ.


Click it and Unblock the Notifications











