ಹಿರಿಯ ನಟ ಎಂಪಿ ಶಂಕರ್ ಪತ್ನಿ ಮಂಜುಳಾ ವಿಧಿ ವಶ

ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ಮಾಪಕ ದಿವಂಗತ ಎಂಪಿ ಶಂಕರ್ ಪತ್ನಿ ಇಂದು ನಿಧನ ಹೊಂದಿದ್ದಾರೆ.

ಮೈಸೂರಿನ ವಿಜಯನಗರದಲ್ಲಿ ವಾಸಿಸುತ್ತಿದ್ದ ಎಂಪಿ ಶಂಕರ್ ಪತ್ನಿ ಮಂಜುಳಾ ಶಂಕರ್ ಇಂದು ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಕೊನೆ ಉಸಿರೆಳೆದಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು.

ಕನ್ನಡದ ನೂರಾರು ಸಿನಿಮಾಗಳಲ್ಲಿ ನಟಿಸಿರುವ ಎಂಪಿ ಶಂಕರ್ ಅವರು 2008 ರಲ್ಲಿ ಮೈಸೂರಿನ ವಿಜಯನಗರ ನಿವಾಸದಲ್ಲಿಯೇ ನಿಧನ ಹೊಂದಿದ್ದರು. ಇದೀಗ ಮಂಜುಳಾ ಶಂಕರ್ ಸಹ ನಿಧನ ಹೊಂದಿದ್ದಾರೆ. ಇವರಿಗೆ ತಿಲಕ್ ಹಾಗೂ ಶೋಭಾ ಎಂಬ ಇಬ್ಬರು ಮಕ್ಕಳಿದ್ದಾರೆ.

Senior Actor Late MP Shankars Wife Manjula Passed Away

ಮಂಜುಳಾ ಶಂಕರ್ ಅವರಿಗೆ ಹೃದಯದ ಸಮಸ್ಯೆ ಕಾಣಿಸಿಕೊಂಡಿತ್ತು, ಕೆಲ ದಿನಗಳ ಹಿಂದಷ್ಟೆ ಅವರಿಗೆ ಆಂಜಿಯೋಗ್ರಾಮ್ ಮಾಡಿಸಲಾಗಿತ್ತು. ಬೈಪಾಸ್ ಶಸ್ತ್ರಚಿಕಿತ್ಸೆ ಸಹ ಮಾಡಿಸಲಾಗಿತ್ತು. ಆದರೆ ಇಂದು ಹೃದಯಾಘಾತದಿಂದಲೇ ಮಂಜುಳಾ ಕೊನೆ ಉಸಿರೆಳೆದಿದ್ದಾರೆ. ಅವರ ಅಂತಿಮ ಕಾರ್ಯವನ್ನು ಮೈಸೂರಿನ ವಿದ್ಯಾರಣ್ಯಪುರದ ಸಿಎಂ ಫಾರಮ್‌ನಲ್ಲಿ ನೆರವೇರಿಸಲಾಗುತ್ತಿದೆ.

ಕೆಲ ದಿನಗಳಿಂದಲೂ ಮಂಜುಳಾ ಶಂಕರ್ ಅವರಿಗೆ ಅನಾರೋಗ್ಯ ಕಾಡುತ್ತಿತ್ತು ಎನ್ನಲಾಗುತ್ತಿದೆ. ಎಂಪಿ ಶಂಕರ್ ನಿಧನದ ಬಳಿಕ ಚಿತ್ರರಂಗದಿಂದ ದೂರವೇ ಉಳಿದು ತಮ್ಮ ಪಾಡಿಗೆ ತಾವಿದ್ದ ಕುಟುಂಬ ಇವರದ್ದು.

ಎಂಪಿ ಶಂಕರ್, ಕನ್ನಡದಲ್ಲಿ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಭಿನ್ನ-ಭಿನ್ನ ಪಾತ್ರಗಳಲ್ಲಿ ನಟಿಸಿದ ಪ್ರತಿಭಾವಂತ ನಟ. ಇವರು ನಟರಾಗಿ ಮಾತ್ರವೇ ಅಲ್ಲದೆ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದರು. ರಾಜ್‌ ಕುಮಾರ್ ಅಭಿನಯದ 'ಗಂಧದ ಗುಡಿ' ಸಿನಿಮಾಕ್ಕೆ ಎಂಪಿ ಶಂಕರ್ ಅವರೇ ಬಂಡವಾಳ ಹೂಡಿದ್ದರು.

ರಾಜ್ ಕುಮಾರ್ ನಟನೆಯ 'ಸತ್ಯ ಹರಿಶ್ಚಂದ್ರ' ಸಿನಿಮಾದಲ್ಲಿ ಎಂಪಿ ಶಂಕರ್ ನಿರ್ವಹಿಸಿದ್ದ ಈರಬಾಹುವಿನ ಪಾತ್ರವನ್ನು ಸಿನಿಪ್ರೇಮಿಗಳು ಮರೆಯುವಂತಿಲ್ಲ. 'ಭೂಲೋಕದಲ್ಲಿ ನಾರದ' ಸಿನಿಮಾದಲ್ಲಿ ಮಾಡಿದ ಹಾಸ್ಯಪಾತ್ರವೂ ಸಖತ್ ಜನಪ್ರಿಯ. 'ನಾಗರಹಾವು' ಸಿನಿಮಾದ ಪೈಲ್ವಾನ್ ಪಾತ್ರ. ಇನ್ನೂ ಹಲವು ನೆನಪುಳಿಯುವ ಪಾತ್ರಗಳಲ್ಲಿ ಎಂಪಿ ಶಂಕರ್ ಕಾಣಿಸಿಕೊಂಡಿದ್ದಾರೆ.

More from Filmibeat

English summary
Senior actor late MP Shankar's wife Manjula Shankar passed away in Mysore on May 10 due to heart attack.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X