ಫಿಲ್ಮ್ ಚೇಂಬರ್ ಗೆ ಶ್ರುತಿ ವಿರುದ್ಧ ದೂರು ಕೊಟ್ಟ ಅರ್ಜುನ್ ಸರ್ಜಾ ಮಾವ ರಾಜೇಶ್

Recommended Video

ಅರ್ಜುನ್ ಸರ್ಜಾ ಮೇಲೆ ಶ್ರುತಿ ಹರಿಹರನ್ ಮಾಡಿರುವ ಆರೋಪಕ್ಕೆ ನಟ, ಮಾವ ರಾಜೇಶ್ ದೂರು ದಾಖಲು | Filmibeat Kannada

ದಕ್ಷಿಣ ಭಾರತ ಚಿತ್ರರಂಗದಲ್ಲಿ 'ಸಂಭಾವಿತ' ಎಂದೇ ಗುರುತಿಸಿಕೊಂಡಿರುವ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಲೈಂಗಿಕ ಕಿರುಕುಳದ ಬಾಂಬ್ ಸಿಡಿಸಿದ್ದಾರೆ.

'ವಿಸ್ಮಯ' ಚಿತ್ರದ ರಿಹರ್ಸಲ್ ವೇಳೆ ಅರ್ಜುನ್ ಸರ್ಜಾ ಅಸಭ್ಯವಾಗಿ ವರ್ತಿಸಿದರು ಅನ್ನೋದು ಶ್ರುತಿ ಹರಿಹರನ್ ಆರೋಪ. ಅಲ್ಲದೇ, ಊಟಕ್ಕೆ ಹೋಗೋಣ ಬಾ.. ರೆಸಾರ್ಟ್ ಗೆ ಹೋಗೋಣ ಬಾ.. ಅಂತ ಅರ್ಜುನ್ ಸರ್ಜಾ ಆಹ್ವಾನ ಕೊಡ್ತಿದ್ರಂತೆ. ಎಲ್ಲದಕ್ಕೂ ಅಂದು 'ನೋ' ಎಂದಿದ್ದ ಶ್ರುತಿ ಹರಿಹರನ್ ಇಂದು ಅರ್ಜುನ್ ಸರ್ಜಾ ವಿರುದ್ಧ ಗುಡುಗಿದ್ದಾರೆ.

ಅರ್ಜುನ್ ಸರ್ಜಾ ಬಗ್ಗೆ ಆರೋಪಿಸಿರುವ ಶ್ರುತಿ ಹರಿಹರನ್ ವಿರುದ್ಧ ಹಿರಿಯ ನಟ, ಅರ್ಜುನ್ ಸರ್ಜಾ ಮಾವ ರಾಜೇಶ್ ಸಿಡಿದೆದ್ದಿದ್ದಾರೆ. ಸುಳ್ಳು ಆರೋಪ ಮಾಡಿರುವ ನಟಿ ಶ್ರುತಿ ಹರಿಹರನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರಾಜೇಶ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಕೊಟ್ಟಿದ್ದಾರೆ.

Senior Actor Rajesh files complaint against Sruthi Hariharan in KFCC

ರಾಜೇಶ್ ಕೊಟ್ಟಿರುವ ದೂರಿನ ಅನುಸಾರ ಇಂದು ಸಂಜೆ ನಾಲ್ಕು ಗಂಟೆ ವೇಳೆಗೆ ಫಿಲ್ಮ್ ಚೇಂಬರ್ ನಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ಶ್ರುತಿ ಹರಿಹರನ್ ಭಾಗವಹಿಸುವ ಸಾಧ್ಯತೆ ಇದೆ.

''ಫಿಲ್ಮ್ ಚೇಂಬರ್ ಕೈಗೊಳ್ಳುವ ನಿರ್ಧಾರಕ್ಕೆ ನಾವು ಬದ್ಧ'' ಎಂದು ರಾಜೇಶ್ ತಿಳಿಸಿದ್ದಾರೆ. ಇಂದು ಸಭೆಯಲ್ಲಿ ಅಧ್ಯಕ್ಷ ಚಿನ್ನೇಗೌಡ ಯಾವ ನಿರ್ಧಾರ ಕೈಗೊಳ್ಳುತ್ತಾರೋ, ನೋಡಬೇಕು.

More from Filmibeat

English summary
Senior Actor Rajesh files complaint against Sruthi Hariharan in KFCC.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X