twitter
    For Quick Alerts
    ALLOW NOTIFICATIONS  
    For Daily Alerts

    ಪಿಬಿ ಶ್ರೀನಿವಾಸ್ ಸಂಭ್ರಮದಲ್ಲಿ ಹಿರಿಯ ನಟ ರಾಜೇಶ್ ರವರಿಗೆ ಸನ್ಮಾನ

    |

    ಭಾರತದ ಚಿತ್ರರಂಗ ಕಂಡ ಖ್ಯಾತ ಅಮರ ಗಾಯಕ ಪಿಬಿ ಶ್ರೀನಿವಾಸ್ ರವರ 88ನೇ ಜಯಂತಿಯನ್ನು ಶನಿವಾರ ರವೀಂದ್ರ ಕಲಾಕ್ಷೇತ್ರದಲ್ಲಿ ವಿಶೇಷವಾಗಿ ಆಚರಿಸಲಾಯಿತು. ಪ್ರತಿವರ್ಷದಂತೆ ಈ ವರ್ಷವು ಶ್ರೀ ಆರ್ ಶ್ರೀನಾಥ್ ಅವರ 'ರಾಗಮಾಧುರಿ ಸಂಗೀತ ಸಂಸ್ಥೆ' ವತಿಯಿಂದ ಖ್ಯಾತ ಗಾಯಕನ ಜನುಮದಿನವನ್ನ ಸಂಭ್ರಮಿಸಲಾಯಿತು.

    ಈ ವಿಶೇಷ ದಿನದಲ್ಲಿ ಪಿಬಿಎಸ್ ಕಾಲದ ಒಡನಾಡಿಗಳನ್ನ ಕಾರ್ಯಕ್ರಮಕ್ಕೆ ಆಹ್ವಾನಿಸಿ ಗೌರವಿಸಲಾಯಿತು. ದಶಕಗಳ ಕಾಲ ಚಿತ್ರರಂಗದಲ್ಲಿ ಕಲಾ ಸೇವೆ ಮಾಡಿರುವ ಕನ್ನಡದ ಹಿರಿಯ ನಟ ಡಾಕ್ಟರ್ ರಾಜೇಶ್ ಅವರನ್ನ ಪ್ರಮುಖವಾಗಿ ಸನ್ಮಾನಿಸಲಾಯಿತು.

    ಪಿಬಿಎಸ್ ಮುಂದೇ ಹಾಡಿ ಜೂನಿಯರ್ ಪಿಬಿಎಸ್ ಎಂದೇ ಖ್ಯಾತಿ ಗಳಿಸಿಕೊಂಡಿರುವ ಆರ್ ಶ್ರೀ ನಾಥ್ ಅವರು ಹಾಗೂ ಇನ್ನಿತರೇ ಗಾಯಕರು ಪಿಬಿಎಸ್ ಹಾಡಿರುವ ಹಾಡುಗಳನ್ನ ಹಾಡುವ ಮೂಲಕ ಈ ಕಾರ್ಯಕ್ರಮದ ಮೆರುಗನ್ನು ಮತ್ತಷ್ಟು ಹೆಚ್ಚಿಸಿದರು.

    Senior actor Rajesh honored by Raga Madhuri Music Association

    ಇದೇ ವೇಳೆ ಆರ್ ಶ್ರೀ ನಾಥ್ ಅವರು ರಚಿಸಿರುವ ಪಿಬಿಎಸ್ ಅವರ ಜೀವನಚರಿತ್ರೆ ಗ್ರಂಥವಾದ "ಮಾಧುರ್ಯ ಸಾರ್ವಭೌಮ" ಪ್ರಕಟಿಸಿದ್ದು ಗಮನ ಸೆಳೆಯಿತು. ಈ ಗ್ರಂಥಕ್ಕೆ 2012-13ನೇ ಸಾಲಿನ ಕರ್ನಾಟಕ ರಾಜ್ಯ ಪ್ರಶಸ್ತಿ ಹಾಗೂ 2017ರಲ್ಲೂ ಕೇಂಪೆಗೌಡ ಪ್ರಶಸ್ತಿಗಳನ್ನು ಪಡೆದಿದ್ದಾರೆ.

    Senior actor Rajesh honored by Raga Madhuri Music Association

    ಇಂತಹ ಕಾರ್ಯಕ್ರಮಕ್ಕೆ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಯಾರೊಬ್ಬರು ಬಾರದಿದ್ದದು ಎದ್ದು ಕಾಣಿತ್ತಿತ್ತು. ಆದ್ರೆ, ನಮ್ಮ ಕನ್ನಡದ ಕಾರ್ಯಕ್ರಮ ಗೊತ್ತಾದ ಬಳಿಕ, ಸುಬ್ಬಯ್ಯ ನಾಯುಡು (ಕನ್ನಡ ಚಲನಚಿತ್ರದ ಪ್ರಥಮ ನಾಯಕ) ಕುಟುಂಬದ ಗೀರಿಜಾ ಲೋಕೇಶ್ ಭಾಗವಹಿಸಿ ಈ ಕಾರ್ಯಕ್ರಮಕ್ಕೆ ಕಳೆ ಕೊಟ್ಟರು. ಹಿಂದೆ ಲೊಕೇಶ್ ರವರು ಸಹ ಭಾಗವಹಿಸುತ್ತಿದ್ದರು ಅದನ್ನೇ ಮುಂದುವರಿಸುತ್ತಿದ್ದರೆ ಶ್ರೀಮತಿ ಗೀರಿಜಾ ಲೋಕೇಶ್.

    Senior actor Rajesh honored by Raga Madhuri Music Association

    ಅಂದ್ಹಾಗೆ, ಪಿಬಿ ಶ್ರೀನಿವಾಸ್ ಅವರು ತೆಲುಗು ಸೇರಿದಂತೆ ಕನ್ನಡ, ತಮಿಳು, ಹಿಂದಿ ಮಲಯಾಳಂ ಮತ್ತು ಕೊಂಕಣಿ ಭಾಷೆಯ ಮೂರು ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ್ದಾರೆ.

    English summary
    Senior Kannada actor Rajesh has been honored by Raga Madhuri Music Association.
    Monday, September 24, 2018, 20:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X