»   »  ಛೇ..ಸತ್ಯಜೀತ್ ಕಲಾ ಸೇವೆಗೆ ಕನ್ನಡ ಸಿನಿಮಾ ಕಲಾವಿದರ ಸಂಘ ಕೊಡುವ ಬೆಲೆ ಇದೇನಾ!?

ಛೇ..ಸತ್ಯಜೀತ್ ಕಲಾ ಸೇವೆಗೆ ಕನ್ನಡ ಸಿನಿಮಾ ಕಲಾವಿದರ ಸಂಘ ಕೊಡುವ ಬೆಲೆ ಇದೇನಾ!?

By: ನಮ್ಮ ಪ್ರತಿನಿಧಿ
Subscribe to Filmibeat Kannada

ಕನ್ನಡ ಚಿತ್ರರಂಗದ ಹೆಸರಾಂತ ಪೋಷಕ ನಟ ಸತ್ಯಜೀತ್ ಅವರ ನೋವಿನ ಕಥೆ ಕೇಳಿದರೆ ನಿಜಕ್ಕೂ ನೋವಾಗುತ್ತೆ. ನೂರಾರು ಸಿನಿಮಾಗಳಲ್ಲಿ ತೆರೆ ಮೇಲೆ ಅಬ್ಬರಿಸಿದ್ದ ಈ ನಟ ಇಂದು ತಮ್ಮ ಚಿಕಿತ್ಸೆಗಾಗಿ ಅಲೆದಾಟ ನಡೆಸಿದ್ದಾರೆ.

ಕಾಲು ಕಳೆದುಕೊಂಡು ಅನೇಕ ತಿಂಗಳುಗಳೇ ಉರುಳಿದರೂ, ಇಲ್ಲಿಯವರೆಗೆ ಕಲಾವಿದರ ಸಂಘದಿಂದ ಯಾವುದೇ ಪರಿಹಾರ ಇವರಿಗೆ ಸಿಕ್ಕಿಲ್ಲವಂತೆ. ಆದರೆ ತಾವೇ ಹೇಗೋ ಹಣ ಹೊಂದಿಸಿಕೊಂಡು ಸದ್ಯ ತಮ್ಮ ಎಡಗಾಲಿಗೆ ಕೃತಕ ಕಾಲನ್ನು ಜೋಡಿಸಿಕೊಂಡಿದ್ದಾರೆ. ಅದರೊಂದಿಗೆ ಇದೀಗ ಮತ್ತೆ ಸಿನಿಮಾಗಳನ್ನು ಮಾಡುವ ಭರವಸೆಯಲ್ಲಿ ಇದ್ದಾರೆ.

ಸದ್ಯ ಇತ್ತೀಚಿಗೆ ಬಾಗಲಕೋಟೆಯ ಖಾಸಗಿ ಹೋಟೆಲ್ ​​ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸತ್ಯಜೀತ್ ತಮ್ಮ ನೋವಿನ ಕಥೆಯನ್ನು ಹೇಳಿಕೊಂಡರು. ಮುಂದೆ ಓದಿ...

ಕೃತಕ ಕಾಲು ಜೋಡಣೆ

ನಟ ಸತ್ಯಜೀತ್ ಸದ್ಯ ಒರಿಸ್ಸಾ ಮೂಲದ ಶ್ರೀಧರ್​ ನಾಯಕ್​​ ಎನ್ನುವ ವೈದ್ಯರ ಬಳಿ ತಮ್ಮ ಎಡಗಾಲಿಗೆ ಕೃತಕ ಕಾಲನ್ನು ಜೋಡಿಸುವ ಚಿಕಿತ್ಸೆ ಪಡೆದಿದ್ದಾರೆ.

ಚಿಕಿತ್ಸೆಯ ವೆಚ್ಚ

''ವೈದ್ಯರು ಎರಡು ಲಕ್ಷದ ಇಪ್ಪತ್ತು ಸಾವಿರದಲ್ಲಿ ನನಗೆ ಕೃತಕ ಕಾಲು ರೆಡಿ ಮಾಡಿದ್ದಾರೆ'' ಎಂದು ಹೇಳಿದ ಸತ್ಯಜೀತ್ ತಮ್ಮ ಚಿಕಿತ್ಸೆಯ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ಕನ್ನಡ ಚಿತ್ರರಂಗದ ಅವ್ಯವಸ್ಥೆಯ ಬಗ್ಗೆ ಅಸಮಾಧಾನವನ್ನು ಹೊರಹಾಕಿದ್ದಾರೆ.

ಕಲಾವಿದರ ಸಂಘದಿಂದ ಪರಿಹಾರ ಸಿಕ್ಕಿಲ್ಲ

''ಗ್ಯಾಂಗ್ರೀನ್ ನಿಂದಾಗಿ ನನ್ನ ಕಾಲು ಕಟ್ ಆಗಿದೆಯಾದ್ರೂ ಕಲಾವಿದರ ಸಂಘದಿಂದ ಇನ್ನೂ ಪರಿಹಾರ ಸಿಕ್ಕಿಲ್ಲ. ನಟ ಅಂಬರೀಶ್ ನೀನು ಹೇಗಿದ್ದೀಯಾ ಎಂದು ಕೇಳಿಲ್ಲ'' ಎಂದು ಸತ್ಯಜೀತ್ ಕಲಾವಿದರ ಸಂಘದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಶಿವಣ್ಣ, ಉಪ್ಪಿ, ಅಪ್ಪು ಸಹಾಯ

''ಈ ಹಿಂದೆ ನನ್ನ ಕಾಲಿನ ಆಪರೇಷನ್‌ಗೆ ನಟರಾದ ಶಿವರಾಜಕುಮಾರ್, ಉಪೇಂದ್ರ ಹಾಗೂ ಪುನೀತ್ ರಾಜ್ ಕುಮಾರ್ ತಲಾ ಒಂದು ಲಕ್ಷ ನೀಡಿ ಸಹಾಯ ಮಾಡಿದ್ದಾರೆ. ಮತ್ತು ಸರ್ಕಾರ ನಾಲ್ಕು ಲಕ್ಷದಷ್ಟು ಪರಿಹಾರ ನೀಡಿದೆ'' - ಸತ್ಯಜೀತ್, ಪೋಷಕ ನಟ.

ಉತ್ತರ ಕರ್ನಾಟಕದವರಿಗೆ ಅವಕಾಶ ನೀಡಿ

''ಸಿನಿಮಾ ಇಂಡಸ್ಟ್ರಿ ನಿಂತಿರೋದೇ ಉತ್ತರ ಕರ್ನಾಟಕದಿಂದ ಆದರೂ ಉತ್ತರ ಕರ್ನಾಟಕ ಪ್ರತಿಭೆಗಳಿಗೆ ಅವಕಾಶವಿಲ್ಲ. ಸಿನಿಮಾ ಅಂದರೆ ಕೇವಲ ಬೆಂಗಳೂರು ಅಲ್ಲ. ಉತ್ತರ ಕರ್ನಾಟಕ ಭಾಷೆ ಹಾಗೂ ಕಲಾವಿದರನ್ನು ನಿರ್ಲಕ್ಷಿಸಲಾಗುತ್ತಿದೆ'' - ಸತ್ಯಜೀತ್, ಪೋಷಕ ನಟ.

ಮುಂದೆ ಬರಬೇಕು

''ನನ್ನ ಬಳಿ ಕಥೆ ಇದೆ. ಉತ್ತರ ಕರ್ನಾಟಕದ ನಿರ್ಮಾಪಕರು ಸಿನಿಮಾ ಮಾಡೋಕೆ ಹೆಚ್ಚಾಗಿ ಮುಂದೆ ಬರಬೇಕು. ಉತ್ತರ ಕರ್ನಾಟಕ ಭಾಷೆಯಲ್ಲಿ ಸಿನಿಮಾ ಮಾಡಬೇಕು'' - ಸತ್ಯಜೀತ್, ಪೋಷಕ ನಟ.

ನಟ ಸತ್ಯಜೀತ್ ನೋವಿನ ಕಥೆಗೆ ಅಂತ್ಯ ಹಾಡಿದ ಕೃತಕ ಕಾಲು

ಮತ್ತೆ ನಟನೆ ಮಾಡುತ್ತೇನೆ

''ನನ್ನ 35 ವರ್ಷಗಳ ಸಿನಿಮಾ ಜರ್ನಿಯಲ್ಲಿ 654 ಸಿನಿಮಾಗಳಲ್ಲಿ ನಟಿಸಿದ್ದೇನೆ, ಕಾಲು ಜೋಡಣೆಯ ನಂತರ ಮತ್ತೆ ನಟಿಸುವ ಅಭಿಲಾಷೆ ಇದೆ, ನಿಮ್ಮ ಆರ್ಶೀವಾದ ಇರಲಿ'' - ಸತ್ಯಜೀತ್, ಪೋಷಕ ನಟ.

English summary
Senior actor Satyajit gets artificial leg treatment.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada