ನಟ ಶಿವರಾಂ ಅಂತಿಮ ದರ್ಶನ, ಅಂತ್ಯಕ್ರಿಯೆ ವಿವರ ಇಲ್ಲಿದೆ!

ಹಿರಿಯ ನಟ ಶಿವರಾಂ ಅವರು ಶನಿವಾರ ನಿಧನರಾಗಿದ್ದಾರೆ. ಆಸ್ಪತ್ರೆಯಲ್ಲಿ ಕೆಲವು ದಿನಗಳು ಚಿಕಿತ್ಸೆ ಪಡೆದರೂ ಅವರು ಗುಣಮುಖರಾಗಲಿಲ್ಲ. ಕೊನೆಗೂ ಎಲ್ಲರನ್ನೂ, ಎಲ್ಲವನ್ನೂ ಬಿಟ್ಟು ಬಾರದ ಲೋಕಕ್ಕೆ ತೆರಳಿದ್ದಾರೆ. ಅವರ ನಿಧನದ ಸುದ್ದಿಯನ್ನು ಅವರ ಮಗ ಲಕ್ಷ್ಮೀಶ್ ಬಹಿರಂಗ ಪಡಿಸಿದರು.

"ನಮ್ಮ ತಂದೆ ಶಿವರಾಮ್ ​ಇನ್ನು ನಮ್ಮ ಜತೆ ಇಲ್ಲ. ಶಿವರಾಮ್​ ಅವರು ಭಗವಂತನ ಪಾದ ಸೇರಿದ್ದಾರೆ. ಆಸ್ಪತ್ರೆ ವತಿಯಿಂದ ಎಲ್ಲಾ ರೀತಿಯ ಚಿಕಿತ್ಸೆ ನೀಡಿದ್ದಾರೆ. ಆದರೆ ಶಿವರಾಮ್​ರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದನ್ನು ನಾವು ಒಪ್ಪಿಕೊಳ್ಳಲೇಬೇಕು" ಎಂದು ಶಿವರಾಂ ಅವರ ಪುತ್ರ ಮಾಧ್ಯಮದವರ ಮುಂದೆ ಮಾತನಾಡಿದರು.

ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನ: ಬಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ!

ಹಿರಿಯ ನಟ ಶಿವರಾಂ ಅವರ ಕೊಡುಗೆ ಕನ್ನಡ ಚಿತ್ರರಂಗಕ್ಕೆ ಅಪಾರ. ಹಾಗಾಗಿ ಅವರನ್ನೂ ಪ್ರೀತಿಸುವವರು ಬಹಳ ಜನ ಇದ್ದಾರೆ. ಅವರ ಅಂತಿಮ ದರ್ಶನ ಪಡೆಯುಲು ಸಾಕಷ್ಟು ಮಂದಿ ಕಾದಿದ್ದಾರೆ. ಹಾಗಾಗಿ ಅವರ ಅಂತಿಮ ದರ್ಶನಕ್ಕೆ ಸರ್ಕಾರ ಅನುಕೂಲ ಮಾಡಿಕೊಟ್ಟಿದೆ. ಭಾನುವಾರ (ಡಿಸೆಂಬರ್ 5) ಬೆಳಗ್ಗೆ 7.30 ರಿಂದ 10 ಗಂಟೆಯ ತನಕ ರವೀಂದ್ರ ಕಲಾಕ್ಷೇತ್ರದಲ್ಲಿ ಶಿವರಾಂ ಅವರ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಬಳಿಕ 11 ಗಂಟೆಗೆ ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಶಿವರಾಂ ಅವರ ಪುತ್ರ ಲಕ್ಷ್ಮೀಶ್‌ ಹೇಳಿದ್ದಾರೆ.

Senior Actor Shivaram Is No More, Shivaram funeral Here Is The Details

ಶಿವರಾಂ ಅಂತಿಮ ದರ್ಶನ ಪಡೆದ ಸಿ.ಎಂ ಬಸವರಾಜ ಬೊಮ್ಮಾಯಿ!

ಇಡೀ ಚಿತ್ರರಂಗ ಶಿವರಾಮ್‌ ಅವರ ನಿಧನಕ್ಕೆ ಸಂತಾಪ ಸೂಚಿಸುತ್ತಿದೆ. ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡ ಶಿವರಾಂ ಅವರ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದ್ದಾರೆ. "ಕರ್ನಾಟಕದ ಕಲಾ ಜಗತ್ತಿನಲ್ಲಿ ತಮ್ಮದೇ ಆದ ಉನ್ನತ ಸ್ಥಾನ ಮಾಡಿದ ಶಿವರಾಂ ಕಳೆದ ಹಲವು ದಿನದಿಂದ ಆರೋಗ್ಯ ಕೆಟ್ಟಿದ್ದರಿಂದ ಅವರು ಆಸ್ಪತ್ರೆ ಸೇರಿದ್ದರು. ಇವತ್ತು ನಮ್ಮನ್ನು ಬಿಟ್ಟು ಅಗಲಿದ್ದಾರೆ. ಇಡೀ ಚಿತ್ರರಂಗಕ್ಕೆ, ಕಲಾರಂಗಕ್ಕೆ ತುಂಬಲಾರದ ನಷ್ಟ. ಅವರ ಅಭಿನಯ ಅವರು ಮಾಡಿದ ಎಲ್ಲಾ ಪಾತ್ರದಲ್ಲಿಯೂ ನೈಜತಯೆ, ಶ್ರೇಷ್ಠತೆ ತಂದಿದೆ. ಪಾತ್ರಕ್ಕೆ ಜೀವ ತುಂಬುವ ಕೆಲಸ ಮಾಡಿದ್ದಾರೆ. ಅವರ ಹಲವು ಚಿತ್ರಗಳು ಯಶಸ್ವಿ ಆಗಿವೆ. ಅವರು ಒಬ್ಬ ನಿರ್ಮಾಪಕ ಆಗಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡವರು. ಅವರನ್ನೂ ನೋಡಿದರೆ ಸ್ವಾಮೀಜಿ, ಗುರುಗಳನ್ನು ನೋಡಿದ ಹಾಗೆ ಆಗುತ್ತಿತ್ತು. ಅವರಿನ್ನೂ ಇರಬೇಕಿತ್ತು. ಅವರ ಮಾರ್ಗದರ್ಶನ ನಮಗೆ ಬೇಕಿತ್ತು. ಅವರ ಅಗಲಿಕೆಯಿಂದ ಕನ್ನಡ ನಾಡು ಬಡವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ" ಎಂದು ಸಿಎಂ ಮಾತನಾಡಿದ್ದಾರೆ.

Senior Actor Shivaram Is No More, Shivaram funeral Here Is The Details

ಹಲವಾರು ಸಿನಿಮಾ ಗಣ್ಯರು ಶಿವರಾಂ ಅವರ ಅಂತಿಮ ದರ್ಶನ ಪಡೆದುಕೊಳ್ಳುತ್ತಿದ್ದಾರೆ. ನಾಳೆಯೂ ಅವರ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.

More from Filmibeat

English summary
Senior Actor Shivaram Is No More, Shivaram funeral Will Take Place Tomorrow, know More About It,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X