ಇನ್ನೂ ಹೆಚ್ಚೆಚ್ಚು ಯಶಸ್ಸು ಸಿಗಲಿ; ರಾಕಿಂಗ್ ಸ್ಟಾರ್ ಯಶ್ ಗೆ ಸುಮಲತಾ ಅಂಬರೀಶ್ ವಿಶ್

ಸ್ಯಾಂಡಲ್ ವುಡ್ ನ ರಾಕಿ ಭಾಯ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಯಶ್ ಹುಟ್ಟುಹಬ್ಬಕ್ಕೆ ಗಡಿಗೂ ಮೀರಿ ಶುಭಾಶಯಗಳ ಸುರಿಮಳೆಯೇ ಹರಿದುಬರುತ್ತಿದೆ. ಬೇರೆ ಬೇರೆ ಭಾಷೆಯ ಚಿತ್ರರಂಗದ ಗಣ್ಯರು ಸಹ ವಿಶ್ ಮಾಡಿ, ಪ್ರೀತಿಯ ಸಂದೇಶ ರವಾನಿಸುತ್ತಿದ್ದಾರೆ.

ಪ್ರತಿವರ್ಷ ಅದ್ದೂರಿಯಾಗಿ ಅಭಿಮಾನಿಗಳ ನಡುವೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ, ಯಶ್ ಈ ಬಾರಿ ಸರಳವಾಗಿ ಕಟುಂಬದವರು ಮತ್ತು ಆಪ್ತರ ನಡುವೆ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಹುಟ್ಟುಹಬ್ಬದ ಆಚರಣೆ ಅದ್ದೂರಿಯಾಗಿ ಇರದಿದ್ದರೂ ಕೆಜಿಎಫ್-2 ಟೀಸರ್ ಯಶ್ ಹುಟ್ಟುಹಬ್ಬದ ಸಂಭ್ರಮವನ್ನು ದುಪ್ಪಟ್ಟು ಮಾಡಿದೆ.

ಅಂದಹಾಗೆ ರಾಕಿಂಗ್ ಸ್ಟಾರ್ ಯಶ್ ಗೆ ಹಿರಿಯ ನಟಿ ಮತ್ತು ಸಂಸದೇ ಸಮಲತಾ ಅಂಬರೀಶ್ ವಿಶ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಶುಭಕೋರಿರುವ ಸುಮಲತಾ, 'ರಾಕಿಂಗ್ ಸ್ಟಾರ್ ಯಶ್ ಗೆ ಜನ್ಮ ದಿನದ ಹಾರ್ದಿಕ ಶುಭಾಶಯಗಳು. ಆರೋಗ್ಯ, ಆಯಸ್ಸು ಹಾಗೂ ಇನ್ನೂ ಹೆಚ್ಚೆಚ್ಚು ಯಶಸ್ಸು ಸಿಗಲೆಂದು ಆಶಿಸುತ್ತೇನೆ. KGF2 ಚಿತ್ರರಸಿಕರ ಮನರಂಜಿಸಲು ಸಿದ್ಧವಾಗಿದ್ದು, ಭಾರತದ ಚಿತ್ರೋದ್ಯಮದಲ್ಲಿ ಮತ್ತೊಂದು ಮೈಲಿಗಲ್ಲು ಆಗುವಲ್ಲಿ ಯಾವುದೇ ಸಂದೇಹವಿಲ್ಲ.' ಎಂದಿದ್ದಾರೆ.

Senior Actress And MP Sumalatha Ambareesh Wishes Yash on his Birthday

ವಿಶ್ ಜೊತೆಗೆ ಯಶ ಮತ್ತು ರಾಧಿಕಾ ಜೊತೆ ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಮತ್ತೊಂದು ಫೋಟೋದಲ್ಲಿ ಯಶ್, ಸುಮಲತಾ ಪರ ಮಂಡ್ಯದಲ್ಲಿ ಪ್ರಚಾರ ಮಾಡುತ್ತಿರುವುದನ್ನು ಶೇರ್ ಮಾಡಿದ್ದಾರೆ. ಸುಮಲತಾ ಫೋಟೋ ಮತ್ತು ವಿಶ್ ಗೆ ಅಭಿಮಾನಿಗಳ ಮೆಚ್ಚುಗೆಯ ಕಾಮೆಂಟ್ ಹರಿದುಬರುತ್ತಿದೆ.

More from Filmibeat

English summary
Senior Actress And MP Sumalatha Ambareesh Wishes Yash on his Birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X