twitter
    For Quick Alerts
    ALLOW NOTIFICATIONS  
    For Daily Alerts

    ದಕ್ಷಿಣ ಭಾರತದ ಹಿರಿಯ ನಟಿ ಗೀತಾಂಜಲಿ ನಿಧನ

    |

    ದಕ್ಷಿಣ ಭಾರತದ ಖ್ಯಾತ ಹಿರಿಯ ನಟಿ ಗೀತಾಂಜಲಿ ಇಂದು ಬೆಳಿಗ್ಗೆ ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಗೀತಾಂಜಲಿ ಅವರು ಗುರುವಾರ ಬೆಳಿಗ್ಗೆ ಹೃದಯಾಘಾತದಿಂದ ಅಪೋಲೊ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

    ಗೀತಾಂಜಲಿ ಸಾವಿನಿಂದ ಸೌತ್ ಇಂಡಸ್ಟ್ರಿ ಶೋಕಸಾಗರದಲ್ಲಿ ಮುಳುಗಿದೆ. ತೆಲುಗು ಸಿನಿಮಾರಂಗ ಕಂಡ ಪ್ರತಿಭಾನ್ವಿತ ಕಲಾವಿದೆ ಗೀತಾಂಜಲಿ ಸಾವಿಗೆ ತಮಿಳು, ಹಿಂದಿ, ಮಲಯಾಳಂ, ಕನ್ನಡ ಚಿತ್ರರಂಗ ಸಂತಾಪ ಸೂಚಿಸಿದೆ.

    ಶೋಲೆ 'ಕಾಲಿಯಾ' ಪಾತ್ರಧಾರಿ ವಿಜು ಖೊಟೆ ನಿಧನಶೋಲೆ 'ಕಾಲಿಯಾ' ಪಾತ್ರಧಾರಿ ವಿಜು ಖೊಟೆ ನಿಧನ

    ಗೀತಾಂಜಲಿ ಅವರು 1957ರಲ್ಲಿ ಆಂಧ್ರ ಪ್ರದೇಶದ ಕಾಕಿನಾಡದಲ್ಲಿ ಜನಿಸಿದ್ದರು. 1961ರಲ್ಲಿ ಎನ್.ಟಿ.ಆರ್ ಅಭಿನಯದ ಸೀತಾರಾಮ ಕಲ್ಯಾಣಂ ಚಿತ್ರದ ಮೂಲಕ ಸಿನಿಮಾ ರಂಗ ಪ್ರವೇಶಿಸಿದರು. ಬಳಿಕ ಅನೇಕ ಸಿನಿಮಾಗಳಲ್ಲಿ ಗೀತಾಂಜಲಿ ಬಣ್ಣ ಹಚ್ಚಿದ್ದರು.

    Senior Actress Geethanjali Is No More

    ಗೀತರಚನೆಕಾರ, ನಿರ್ದೇಶಕ ಕವಿರಾಜ್ ತಂದೆ ನಿಧನಗೀತರಚನೆಕಾರ, ನಿರ್ದೇಶಕ ಕವಿರಾಜ್ ತಂದೆ ನಿಧನ

    ಸುಮಾರು 50ಕ್ಕೂ ಹೆಚ್ಚು ಚಿತ್ರಗಳಲ್ಲಿ ಗೀತಾಂಜಲಿ ನಟಿಸಿದ್ದಾರೆ. ಡಾಕ್ಟರ್ ಚಕ್ರವರ್ತಿ, ಮುರಳಿಕೃಷ್ಣ, ಅಬ್ಬಾಯಿ ಗಾರು ಅಮ್ಮಾಯಿ ಗಾರು ಅಂತಹ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಮದುವೆ ಬಳಿಕ ಮತ್ತೆ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ಗೀತಾಂಜಲಿ ಪೋಷಕ ಪಾತ್ರಗಳಿಗೂ ಜೈ ಎಂದಿದ್ದರು.

    ಗೀತಾಂಜಲಿ ಅವರ ಕೊನೆಯ ಚಿತ್ರ ತಮನ್ನಾ ನಟಿಸಿದ್ದ ದಟ್ ಈಸ್ ಮಹಾಲಕ್ಷ್ಮಿ. 2018ರಲ್ಲಿ ಈ ಸಿನಿಮಾ ತೆರೆಕಂಡಿತ್ತು.

    English summary
    South Indian actress Geetanjali died at 31st October 2019 from cardiac arrest. She died while undergoing treatment at a private hospital near Film Nagar in Hyderabad.
    Thursday, October 31, 2019, 16:20
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X