For Quick Alerts
  ALLOW NOTIFICATIONS  
  For Daily Alerts

  30 ವರ್ಷದ ಬಳಿಕ ಬೆಳ್ಳಿತೆರೆಗೆ ಮರಳಿದ 'ಮುದ್ದಿನ ರಾಣಿ' ಮಹಾಲಕ್ಷ್ಮಿ: ಯಾವ ಸಿನಿಮಾ?

  |

  ಕನ್ನಡ ಚಿತ್ರರಂಗದ ಹಿರಿಯ ನಟಿ ಮಹಾಲಕ್ಷ್ಮಿ 3 ದಶಕಗಳ ಬಳಿಕ ಮತ್ತೆ ಕನ್ನಡ ಸಿನಿಮಾರಂಗದ ಕಡೆ ಮುಖ ಮಾಡಿದ್ದಾರೆ. ಮತ್ತೆ ಬಣ್ಣ ಹಚ್ಚಲು ಸಜ್ಜಾಗಿದ್ದಾರೆ. 1980-90ರ ದಶಕದಲ್ಲಿ ಚಿತ್ರರಂಗವನ್ನಾಳಿದ ನಟಿ ಮಹಾಲಕ್ಷ್ಮಿ ದಿಢೀರನೆ ಬಣ್ಣದ ಲೋಕದಿಂದ ಮಾಯವಾಗಿದ್ದರು. ಅದ್ಭುತ ಅಭಿನಯದ ಮೂಲಕ ಕನ್ನಡ ಚಿತ್ರ ಪ್ರೇಕ್ಷಕರನ್ನು ರಂಜಿಸಿ, ಹೇಳದೆ ಕೇಳದೆ ಮಾಯವಾಗಿದ್ದ ಮಹಾಲಕ್ಷ್ಮಿ ಈಗ ಮತ್ತೆ ಬಣ್ಣದ ಲೋಕಕ್ಕೆ ವಾಪಸ್ ಆಗಿರುವುದು ಕನ್ನಡ ಚಿತ್ರಾಭಿಮಾನಿಗಳಿಗೆ ಸಂತಸ ತಂದಿದೆ.

  ಮಹಾಲಕ್ಷ್ಮಿ ಎಲ್ಲಿದ್ದರು? ಏನ್ಮಾಡುತ್ತಿದ್ದರು? ಎನ್ನುವ ಪ್ರಶ್ನೆ ಚಿತ್ರಪ್ರೇಕ್ಷಕರನ್ನು 30 ವರ್ಷಗಳಿಂದ ಕಾಡಿತ್ತು. ಆದರೆ ಈ ಎಲ್ಲಾ ಪ್ರಶ್ನೆಗೆ ಉತ್ತರದೊಂದಿಗೆ ಮಹಾಲಕ್ಷ್ಮಿ 2019ರಲ್ಲಿ ಪ್ರತ್ಯಕ್ಷರಾಗಿ ಅಚ್ಚರಿ ಮೂಡಿಸಿದ್ದರು. 2019ರಲ್ಲಿ ಫಿಲ್ಮಿ ಬೀಟ್ ಕನ್ನಡಕ್ಕೆ ನೀಡಿದ ಎಕ್ಸಕ್ಲೂಸಿವ್ ಸಂದರ್ಶನದಲ್ಲಿ 30 ವರ್ಷದ ನಿಗೂಢ ಪಯಣದ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದರು. ಇದೀಗ ಮತ್ತೆ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಯಾವ ಸಿನಿಮಾ? ಇಲ್ಲಿದೆ ಮಾಹಿತಿ..

  'ಚರ್ಚ್‌ನಲ್ಲಿದ್ದೀನಿ, ನಾನೇನು ಸನ್ಯಾಸಿ ಅಲ್ಲ': ಬೆಳ್ಳಿತೆರೆಗೆ ಮರಳಲಿರುವ ಮಹಾಲಕ್ಷ್ಮಿ'ಚರ್ಚ್‌ನಲ್ಲಿದ್ದೀನಿ, ನಾನೇನು ಸನ್ಯಾಸಿ ಅಲ್ಲ': ಬೆಳ್ಳಿತೆರೆಗೆ ಮರಳಲಿರುವ ಮಹಾಲಕ್ಷ್ಮಿ

  2019ರಲ್ಲಿ ಫಿಲ್ಮಿ ಬೀಟ್ ಕನ್ನಡದ ಜೊತೆ ಮಾತನಾಡಿದ್ದ ಮಹಾಲಕ್ಷ್ಮಿ

  2019ರಲ್ಲಿ ಫಿಲ್ಮಿ ಬೀಟ್ ಕನ್ನಡದ ಜೊತೆ ಮಾತನಾಡಿದ್ದ ಮಹಾಲಕ್ಷ್ಮಿ

  'ನಾನು ತುಂಬ ತುಂಬಾ ಚೆನ್ನಾಗಿ ಇದ್ದೀನಿ. ನನ್ನ ಬಗ್ಗೆ ಕೇಳಿ ಬರುತ್ತಿದ್ದ ಸುದ್ದಿಗಳೆಲ್ಲ ರೂಮರ್ಸ್ ಅಷ್ಟೆ, ನನಗೆ ತುಂಬ ಒಳ್ಳೆಯ ಫ್ಯಾಮಿಲಿ ಇದೆ. ನಾನು ಹೌಸ್ ವೈಫ್ ಆಗಿದ್ದೀನಿ, ನಾನು ಸನ್ಯಾಸಿ ಅಲ್ಲ, ನಾನು ಸಂಸಾರಸ್ತೆ ಎನ್ನುವುದನ್ನು ಸ್ಪಷ್ಟಪಡಿಸುತ್ತೇನೆ. ಚರ್ಚ್ ನಲ್ಲಿ ಕೆಲಸ ಮಾಡುತ್ತಿರುವುದು ನಿಜ ಆದರೆ ಸನ್ಯಾಸಿ ಅಲ್ಲ. ನಾನೂ ಚೆನ್ನೈನಲ್ಲಿ ನೆಲೆಸಿದ್ದೀನಿ' ಎಂದು ಹೇಳುವ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದರು.

  ಎರಡನೇ ಇನ್ನಿಂಗ್ಸ್ ಪ್ರಾಂಭಿಸಿರುವ ನಟಿ

  ಎರಡನೇ ಇನ್ನಿಂಗ್ಸ್ ಪ್ರಾಂಭಿಸಿರುವ ನಟಿ

  ಅದೇ ಸಮಯದಲ್ಲಿ ಮತ್ತೆ ಬಣ್ಣದ ಲೋಕಕ್ಕೆ ವಾಪಸ್ ಬರುವುದಾಗಿ ಹೇಳಿದ್ದರು. ಅದರಂತೆ ಈಗ ಮಹಾಲಕ್ಷ್ಮಿ ಬಣ್ಣದ ಬದುಕಿನಲ್ಲಿ ಎರಡನೇ ಇನ್ನಿಂಗ್ಸ್ ಪ್ರಾರಂಭಿಸಿದ್ದಾರೆ. ಕನ್ನಡ ಸಿನಿಮಾವೊಂದರಲ್ಲಿ ನಟಿಸಲು ಸಜ್ಜಾಗಿದ್ದಾರೆ. ಇತ್ತೀಚಿಗೆ ಮಹಾಲಕ್ಷ್ಮಿ ನಟನೆಯ ಹೊಸ ಸಿನಿಮಾದ ಮುಹೂರ್ತ ಕೂಡ ನೆರವೇರಿದೆ.

  TRP ರಾಮ ಸಿನಿಮಾದಲ್ಲಿ ನಟನೆ

  TRP ರಾಮ ಸಿನಿಮಾದಲ್ಲಿ ನಟನೆ

  ಹೌದು, ಮಹಾಲಕ್ಷ್ಮಿ TRP ರಾಮ ಎನ್ನುವ ಸಿನಿಮಾ ಮೂಲಕ ಮತ್ತೆ ಕನ್ನಡ ಚಿತ್ರಾಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಚಿತ್ರದಲ್ಲಿ ಮಹಾಲಕ್ಷ್ಮಿ ನಾಯಕನ ತಾಯಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಟನೆಗೆ ತುಂಬಾ ಪ್ರಾಮುಖ್ಯತೆ ಇರುವ ಪಾತ್ರವಾಗಿದ್ದರಿಂದ ಈ ಸಿನಿಮಾ ಒಪ್ಪಿಕೊಂಡಿರುವುದಾಗಿ ಹೇಳಿದ್ದಾರೆ.

  ತೆರೆಮರೆಯಾಗಿದ್ದ ನಟಿ ಮಹಾಲಕ್ಷ್ಮಿ ರೀ-ಎಂಟ್ರಿ: ಈ ಬಗ್ಗೆ 'ಮುದ್ದಿನ ರಾಣಿ' ಹೇಳಿದ್ದೇನು?ತೆರೆಮರೆಯಾಗಿದ್ದ ನಟಿ ಮಹಾಲಕ್ಷ್ಮಿ ರೀ-ಎಂಟ್ರಿ: ಈ ಬಗ್ಗೆ 'ಮುದ್ದಿನ ರಾಣಿ' ಹೇಳಿದ್ದೇನು?

  ನಗಿಸೋಕೆ ಇನ್ನೊಂದು ದಾರಿ ಹಿಡಿದ ಸಿಲ್ಲಿಲಲ್ಲಿಯ ಮಂಜುಭಾಷಿಣಿ | Filmibeat Kannada
  TRP ರಾಮ ಸಿನಿಮಾದ ಬಗ್ಗೆ

  TRP ರಾಮ ಸಿನಿಮಾದ ಬಗ್ಗೆ

  TRP ರಾಮ ಚಿತ್ರದಲ್ಲಿ ರವಿ ಪ್ರಸಾದ್ ನಿರ್ದೇಶನ ಮಾಡಿ, ನಟಿಸುತ್ತಿರುವ ಸಿನಿಮಾ. ಚಿತ್ರಕ್ಕೆ ಚಿತ್ರಸಾಹಿತಿ ಮತ್ತು ನಿರ್ದೇಶಕ ಕವಿರಾಜ್ ಚಿತ್ರಕ್ಕೆ ಕ್ಲಾಪ್ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. 30 ವರ್ಷಗಳ ಬಳಿಕ ಮತ್ತೆ ಮರಳಿರುವ ಮಹಾಲಕ್ಷ್ಮಿ ಅವರನ್ನು ತೆರೆಮೇಲೆ ನೋಡಲು ಅನೇಕರು ಕಾತರರಿದ್ದಾರೆ. ಆದರೆ ಇನ್ನು ಸ್ವಲ್ಪ ದಿನ ಕಾಯಲೇ ಬೇಕು.

  English summary
  Senior Actress Mahalakshmi back to kannada film industry, She is playing mother role in TRP Rama movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X