'ದರ್ಶನ್ ಕೂಡ ಬಿಜೆಪಿ' : ಸ್ಯಾಂಡಲ್ ವುಡ್ ನ ಈ ಹಿರಿಯ ನಟಿ ಹೀಗೆ ಹೇಳಿದ್ದೇಕೆ?

Recommended Video

ದರ್ಶನ್ ಕೂಡ ಬಿಜೆಪಿ' : ಸ್ಯಾಂಡಲ್ ವುಡ್ ನ ಈ ಹಿರಿಯ ನಟಿ ಹೀಗೆ ಹೇಳಿದ್ದೇಕೆ? | FILMIBEAT KANNADA

ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾಜಕೀಯದಿಂದ ತುಂಬನೆ ದೂರ. ಆದ್ರೂ ಸಹ ಆಪ್ತರ ಪರ, ಯಾರು ಉತ್ತಮ ಕೆಲಸ ಮಾಡುತ್ತಾರೆ ಅಂತ ಅನಿಸುತ್ತೊ ಅವರ ಪರ ಪ್ರಚಾರಕ್ಕೆ ಹೋಗುತ್ತಾರೆ. ಅದ್ರಲ್ಲೂ 2019 ಮಂಡ್ಯ ಲೋಕಸಭಾ ಚುನಾವಣಾ ಅಖಾಡದಲ್ಲಿ ಎಬ್ಬಿಸಿದ ಅಲೆ ಇನ್ನು ಹಸಿರಾಗೆ ಇದೆ.

ಪ್ರಚಾರಕ್ಕೆ ಹೋಗುತ್ತಾರೆ ಅಂದ ಮಾತ್ರಕ್ಕೆ ದರ್ಶನ್ ಯಾವುದೊ ಪಕ್ಷಕ್ಕೆ ಸೀಮಿತವಾಗಿದ್ದಾರೆ ಅಂತ ಹೇಳಲಿಕ್ಕೆ ಆಗಲ್ಲ. ಯಾಕಂದ್ರೆ ದಚ್ಚು ಇದುವರೆಗೂ ಯಾವುದೆ ಪಕ್ಷದ ಪರ ಗುರುತಿಸಿಕೊಂಡವರಲ್ಲ. ಈ ಹಿಂದೆ ವಿಧಾನ ಸಭಾ ಚುನಾವಣಾ ವೇಳೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ಧರಾಮಯ್ಯ ಪರ ಪ್ರಚಾರ ಮಾಡಿದ್ದರು. ಹಾಗೇ ಬೆಂಗಳೂರು ಸೆಂಟ್ರಲ್ ನ ಬಿ ಜೆ ಪಿ ಅಭ್ಯರ್ಥಿ ಪಿ ಸಿ ಮೋಹನ್ ಪರ ಅಖಾಡಕ್ಕೆ ಇಳಿದ್ದಿದ್ದರು.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಪರವಾಗಿ ಮಂಡ್ಯದಲ್ಲಿ ಪ್ರಚಾರ ಮಾಡಿ ಸುಮಲತಾ ಅವರ ಗೆಲುವಿಗೆ ಕಾರಣರಾಗಿದ್ದರು. ಹೀಗೆ ರಾಜಕೀಯದಲ್ಲಿ ಇಲ್ಲದ್ದಿದ್ದರು ರಾಜಕೀಯ ನಂಟು ದರ್ಶನ್ ಅವರಿಗೆ. ಇತ್ತೀಚಿಗೆ 'ಸಿಂಗ' ಚಿತ್ರದ ಆಡಿಯೋ ರಿಲೀಸ್ ಗೆ ಅತಿಥಿಯಾಗಿ ಆಗಮಿಸಿದ್ದ ದಚ್ಚು ಅವರಿಗೆ ಹಿರಿಯ ನಟಿ ತಾರಾ ರಾಜಕೀಯ ಬಗ್ಗೆ ಮಾತನಾಡುತ್ತ ಕಾಲೆಳೆದಿದ್ದಾರೆ.

senior Actress Tara tease to actor Darshan is also BJP

ದೇಶದಲ್ಲಿ ಬಿಜೆಪಿ ಇದೆ. ರಾಜ್ಯದಲ್ಲು ಬಿ ಜೆ ಪಿ ಬರಬೇಕು, ಇಲ್ಲೂ ಕೂಡ ಬಿ ಜೆ ಪಿ ಬರುತ್ತೆ ಅಂತ ಹೇಳುತ್ತಾ, ಇಡೀ ದೇಶ ಬಿ ಜೆ ಪಿ, ಇಡಿ ರಾಜ್ಯ ಬಿ ಜೆ ಪಿ, ದರ್ಶನ್ ಕೂಡ ಬಿ ಜೆ ಪಿ ಎಂದು ಹೇಳಿ ದಚ್ಚು ಕಾಲೆಳೆದಿದ್ದಾರೆ. ತಾರಾ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಂಡಿರುವ ದಚ್ಚುಅನ್ನು ತಾರಾ ದೊಡ್ಡ ಮಗ ಅಂತಾನೆ ಕರೆಯುತ್ತಾರೆ. ಇದೆ ಪ್ರೀತಿಯಲ್ಲಿ ದಚ್ಚು ಕೂಡ ಬಿ ಜೆ ಪಿ ಅಂತ ಹೇಳಿದ್ದಾರೆ.

More from Filmibeat

English summary
Kannada senior Actress Tara tease to actor Darshan is also BJP in Singam audio release function.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X