'ಸುಲ್ತಾನ್ ಆಫ್ ಸ್ಯಾಂಡಲ್ ವುಡ್' : ಡಿ ಬಾಸ್ ಗೆ ಸಿಕ್ತು ಮತ್ತೊಂದು ಹೊಸ ಬಿರುದು

Recommended Video

ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಹಿರಿಯ ನಟಿ ತಾರಾ ಅವರಿಂದ ಸಿಕ್ಕಿತು ಹೊಸ ಬಿರುದು | Oneindia Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಈಗಾಗಲೆ ಸಾಕಷ್ಟು ಬಿರುದುಗಳಿವೆ. ಅಭಿಮಾನಿಗಳು ಹತ್ತು ಹಲವಾರು ಬಿರುದುಗಳನ್ನು ನೀಡಿ ನೆಚ್ಚಿನ ನಟನ ಆರಾಧನೆ ಮಾಡುತ್ತಿದ್ದಾರೆ. ಚಾಲೆಂಜಿಂಗ್ ಸ್ಟಾರ್, ಡಿ ಬಾಸ್, ಸ್ಯಾಂಡಲ್ ವುಡ್ ನ ಏಕಚಕ್ರಾಧಿಪತಿ, ಬಾಕ್ಸ್ ಆಫೀಸ್ ಸುಲ್ತಾನ್ ಹೀಗೆ ಸಾಕಷ್ಟು ಹೆಸರುಗಳಿಂದ ಪ್ರೀತಿಯ ದಚ್ಚು ಅವರನ್ನು ಕರೆಯುತ್ತಾರೆ. ಈ ಬಿರುದುಗಳ ಜೊತೆಗೆ ಮತ್ತೊಂದು ಹೊಸ ಹೆಸರು ಸೇರ್ಪಡೆಯಾಗಿದೆ.

ಅಭಿಮಾನಿಗಳು ಡಿ ಬಾಸ್ ಅವರನ್ನು ಎಷ್ಟು ಪ್ರೀತಿಸುತ್ತಾರೊ ಅಷ್ಟೆ ಪ್ರೀತಿ, ಗೌರವ ಅಭಿಮಾನಿಗಳಿಗೂ ನೀಡುತ್ತಾರೆ ಚಾಲೆಂಜಿಂಗ್ ಸ್ಟಾರ್. ಎಲ್ಲಾ ಅಭಿಮಾನಿಗಳನ್ನು ಸಮಾನವಾಗಿ ಕಾಣುವ ದಚ್ಚು ಅಂದ್ರೆ ಅಭಿಮಾನಿಗಳೂ ಅಚ್ಚು ಮೆಚ್ಚು. ಅಭಿಮಾನಿಗಳನ್ನು ಸೆಲೆಬ್ರಿಟಿ ಎಂದು ಕರೆದಿರುವ ದರ್ಶನ್ ಇತ್ತೀಚಿಗಷ್ಟೆ ಕುರುಕ್ಷೇತ್ರ ಚಿತ್ರದ ಆಡಿಯೋವನ್ನು ಅಭಿಮಾನಿಗಳ ಬಳಿ ರಿಲೀಸ್ ಮಾಡಿಸುವ ಮೂಲಕ ಅಭಿಮಾನಿಗಳ ಮೇಲಿನ ಪ್ರೀತಿ, ಗೌರವವನ್ನು ಮತ್ತೊಮ್ಮೆ ಸಬೀತು ಮಾಡಿದ್ರು.

ಅಭಿಮಾನಿಗಳ ಜೊತೆ ಸದಾ ಸಂಪರ್ಕದಲ್ಲಿರುವ ಡಿ ಬಾಸ್ ಗೆ ಈಗ ಮತ್ತೊಂದು ಬಿರುದು ಸಿಕ್ಕಿದೆ ಅದೇ 'ಸುಲ್ತಾನ್ ಆಫ್ ಸ್ಯಾಂಡಲ್ ವುಡ್' ಈ ಬಿರುದನ್ನು ನೀಡಿದ್ದು ಅಭಿಮಾನಿಗಳಲ್ಲ. ಸ್ಯಾಂಡಲ್ ವುಡ್ ನ ಹಿರಿಯ ನಟಿ ತಾರಾ ಅನುರಾಧ. ಇತ್ತೀಚಿಗಷ್ಟೆ 'ಸಿಂಗ' ಚಿತ್ರದ ಆಡಿಯೋ ರಿಲೀಸ್ ಗೆ ದರ್ಶನ್ ಆಗಮಿಸಿದ್ರು. ಆ ಸಂದರ್ಭದಲ್ಲಿ ತಾರಾ ಅವರು ಈ ಮಾತನ್ನು ಹೇಳಿದ್ದಾರೆ.

senior actress Thara gave a new title to challenging star Darshan

ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಈ ಹೆಸರನ್ನು ಹೇಳಿದ್ದಲ್ಲದೆ ಸಾಮಾಜಿಕ ಜಾಲತಾಣದಲ್ಲೂ ದರ್ಶನ್ ಬಗ್ಗೆ ಹಾಡಿಹೊಗಳಿದ್ದಾರೆ ತಾರಾ. ದರ್ಶನ್ ನನ್ನ ದೊಡ್ಡ ಮಗ ಎಂದು ಹೇಳುತ್ತ 'ಸುಲ್ತಾನ್ ಆಫ್ ಸ್ಯಾಂಡಲ್ ವುಡ್' ಎನ್ನುವ ಬಿರುದು ನೀಡುವ ಮೂಲ ಮತ್ತೊಂದು ಹೆಸರು ಸೇರ್ಪಡೆಯಾಗಿದೆ. ಈ ಬಿರುದು ಕೇಳಿ ಡಿ ಬಾಸ್ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

More from Filmibeat

English summary
Kannada senior actress Thara gave a new title to challenging star Darshan. She gave a new name to Darshan the title of Sultan of Sandalwood.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X