twitter
    For Quick Alerts
    ALLOW NOTIFICATIONS  
    For Daily Alerts

    ಮರೆಯಾದ 'ಧ್ರುವತಾರೆ': ಡಾ ರಾಜ್ ಪುತ್ರರ ನೆಚ್ಚಿನ ನಿರ್ದೇಶಕ ಇನ್ನಿಲ್ಲ

    |

    ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ, ಸಾಮಾನ್ಯ ಕಲಾವಿದರಾಗಿದ್ದ ಹಲವು ನಟರನ್ನ ಸೂಪರ್ ಸ್ಟಾರ್ ಗಳನ್ನಾಗಿಸಿದ ಖ್ಯಾತ ನಿರ್ದೇಶಕ ಎಂ ಎಸ್ ರಾಜಶೇಖರ್ ಇಂದು ವಿಧಿವಶರಾಗಿದ್ದಾರೆ. ಉಸಿರಾಟದ ತೊಂದರೆಯಿಂದ ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಿರ್ದೇಶಕ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

    75 ವರ್ಷದ ಎಂಎ ಎಸ್ ರಾಜಶೇಖರ್ ಅವರು ಬಹುಅಂಗಾಗದ ವೈಪಲ್ಯದಿಂದ ಬಳಲುತ್ತಿದ್ದರು. ಜೊತೆಗೆ ಉಸಿರಾಟದ ತೊಂದರೆಯಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು ಎಂದು ವೈದ್ಯರು ಸ್ಪಷ್ಟನೆ ನೀಡಿದ್ದಾರೆ.

    1985ರಿಂದ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದ ರಾಜಶೇಖರ್ ಅವರು ಹಲವು ಸೂಪರ್ ಹಿಟ್ ಸಿನಿಮಾಗಳನ್ನ ನೀಡಿದ ಹೆಗ್ಗಳಿಕೆ ಹೊಂದಿದ್ದಾರೆ. ಡಾ ರಾಜ್ ಕುಮಾರ್ ಅವರ 'ಧ್ರುವತಾರೆ' ಚಿತ್ರದ ಮೂಲಕ ಸಿನಿ ಪಯಣ ಆರಂಭಿಸಿದ್ದ ರಾಜಶೇಖರ್ ಅವರು ಸುಮಾರು 40ಕ್ಕೂ ಅಧಿಕ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ.

    ಸ್ಯಾಂಡಲ್ ವುಡ್ ನಲ್ಲಿ ಸೃಜನಶೀಲ ನಿರ್ದೇಶಕ ಎಂದೇ ಕರೆಸಿಕೊಳ್ಳುವ ಇವರು ಡಾ ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಗೆ ಬ್ಲ್ಯಾಕ್ ಬಸ್ಟರ್ ಸಿನಿಮಾಗಳನ್ನ ನಿರ್ದೇಶನ ಮಾಡಿರುವುದು ವಿಶೇಷ.

    Senior director ms rajashekar passes away

    ಅನುರಾಗ ಅರಳಿತು, ರಥಸಪ್ತಮಿ, ಮನಮೆಚ್ಚಿದ ಹುಡುಗಿ, ನಂಜುಂಡಿ ಕಲ್ಯಾಣ, ಗಜಪತಿ ಗರ್ವಭಂಗ, ಅದೇ ರಾಗ ಅದೇ ಹಾಡು, ಆಸೆಗೊಬ್ಬ ಮೀಸೆಗೊಬ್ಬ, ಹೃದಯ ಹಾಡಿತು, ಮಿಡಿದ ಹೃದಯ, ಕನಸಿನ ರಾಣಿ, ಮಣ್ಣಿನ ದೋಣಿ, ಕಲ್ಯಾಣ ರೇಖೆ, ಪುರುಷೋತ್ತಮ, ಮುತ್ತಣ್ಣ, ಸವ್ಯಸಾಚಿ, ಹೃದಯ ಹೃದಯ ಹೀಗೆ ಇನ್ನು ಹಲವು ಹಿಟ್ ಸಿನಿಮಾಗೆ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

    2006ರಲ್ಲಿ ರವಿಚಂದ್ರನ್ ಅಭಿನಯಿಸಿದ್ದ 'ರವಿಶಾಸ್ತ್ರಿ' ಎಂಎಸ್ ರಾಜಶೇಖರ್ ಅವರ ನಿರ್ದೇಶನ ಮಾಡಿದ ಕೊನೆಯ ಸಿನಿಮಾ.

    English summary
    MS Rajashekar, one of the most popular Kannada filmmakers who had been active in the industry since 1985, has passed away on Monday.
    Monday, October 29, 2018, 18:39
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X