ಹೊಸಬರ ಕನಸಿಗೆ ಜೊತೆಯಾದ ನಾಗತಿಹಳ್ಳಿ ಚಂದ್ರಶೇಖರ್: ಬನ್ ಟೀ ಟ್ರೈಲರ್ ರಿಲೀಸ್

By ಫಿಲ್ಮಿಬೀಟ್ ಡೆಸ್ಕ್

ಒಂದು ಪ್ಯಾನ್ ಇಂಡಿಯಾ ಸಿನಿಮಾ ಬಂದರೆ, ಅದಕ್ಕೆ ಹತ್ತು ಪಟ್ಟು ಹೊಸಬರ ಸಿನಿಮಾಗಳು ಸೆಟ್ಟೇರುತ್ತಿವೆ. ರಿಲೀಸ್ ಆಗುತ್ತಿವೆ. ಈಗ ಇಲ್ಲೊಂದು ಯುವಕರ ತಂಡ 'ಬನ್ ಟೀ' ಅನ್ನೋ ಸಿನಿಮಾವನ್ನು ಮಾಡಿದೆ. ಅದೇ ಸಿನಿಮಾದ ಟ್ರೈಲರ್ ಅನ್ನೂ ರಿಲೀಸ್ ಮಾಡಿದೆ.

ಕನ್ನಡದ ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಈ ಹೊಸಬರ ಸಿನಿಮಾದ ಟ್ರೈಲರ್ ಅನ್ನು ರಿಲೀಸ್ ಮಾಡಿ, ಯುವಕರ ಕನಸಿಗೆ ಆಸರೆಯಾಗಿದ್ದಾರೆ. ಆನ್ ಲೈನ್ ಎಡಿಟರ್ ಆಗಿ ಗುರುತಿಸಿಕೊಂಡಿರುವ 'ಖಾಕಿ' ಸಿನಿಮಾ ಬರಹಗಾರಾಗಿ ಕೆಲಸ ಮಾಡಿರುವ ಉದಯ್ ಕುಮಾರ್ ಪಿಎಸ್ ಎರಡನೇ ಸಿನಿಮಾವಿದು.

'ಕಾರ್ಮೋಡ ಸರಿದು' ಎಂಬ ಸಿನಿಮಾದ ಮೂಲಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಈಗ ಉದಯ್ 'ಬನ್ ಟೀ' ಎಂಬ ವಿಭಿನ್ನ ಟೈಟಲ್ ಇಟ್ಟು ಮತ್ತೊಮ್ಮೆ ಚಿತ್ರರಸಿಕರನ್ನು ರಂಜಿಸಲು ಸಜ್ಜಾಗಿದ್ದಾರೆ.

Senior Director Nagathihalli Chandrashekar Released Newcomer Bun Tea Movie Trailer

"ಉದಯ್ ಹೇಳಿದ ಕಥೆ ಇಷ್ಟವಾಯ್ತು. ಹಂಚಿ ತಿನ್ನುವ ಅಗತ್ಯವಿರುವ ಈ ದಿನಗಳಲ್ಲಿ ಹಂಚಿ ಉಣ್ಣದೇ ಬರೀ ಬಾಚಿಕೊಳ್ಳುವ ಮನಸ್ಥಿತಿ. ಅದರಿಂದ ಉಂಟಾಗುವ ಸಾಮಾಜಿಕ ತೊಂದರೆಗಳ ಸುತ್ತ ಕಥೆ ಸಾಗುತ್ತದೆ. ಉದಯ್ ನಿರ್ಮಾಪಕರು ಸಿಕ್ತಾರೆ ಅಂತಾ ಫ್ಯಾಷನ್‌ಗೋಸ್ಕರ್ ಸಿನಿಮಾ ಮಾಡಿಲ್ಲ. ಆಳವಾಗಿ ತಾಂತ್ರಿಕವಾಗಿ ಚಿತ್ರ ಮಾಡಿದ್ದಾರೆ. ತಮ್ಮದೇ ಟೆಂಟ್ ಸಿನಿಮಾ ಸೂಲ್ಕ್ ಪ್ರತಿಭೆಗಳು ಸೇರಿ 'ಬನ್ ಟೀ' ಸಿನಿಮಾ ಮಾಡಿದೆ. ಇಡೀ ತಂಡಕ್ಕೆ ಒಳ್ಳೆದಾಗಲಿ" ಎಂದು ನಾಗತಿಹಳ್ಳಿ ಚಂದ್ರಶೇಖರ್ ಹಾರೈಸಿದ್ದಾರೆ.

"ಬನ್ ಟೀ ನಿರ್ದೇಶಕನಾಗಿ ನನ್ನ ಎರಡನೇ ಸಿನಿಮಾ. ಆನ್ ಲೈನ್ ಎಡಿಟರ್ ಆಗಿ, ಎಡಿಟರ್ ಆಗಿ ಕೆಲಸ ಮಾಡ್ತಿದ್ದು, ಬನ್ ಟೀ ಏಳು ವರ್ಷದ ಕನಸು. ಸಿನಿಮಾ ಅವಕಾಶಕ್ಕಾಗಿ ಗಾಂಧಿನಗರ ಸುತ್ತುವಾಗ ಬನ್ ಟೀ ನಮ್ಮ ಊಟ.. ಟೈಟಲ್ ಡಿಫರೆಂಟ್‌ ಆಗಿದ್ದರೆ, ಕುತೂಹಲ ಮೂಡುತ್ತದೆ. ಟೈಟಲ್ ಬಗ್ಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಕಷ್ಟಪಟ್ಟು ಓದು ಅನ್ನುವ ಬದಲು ಇಟ್ಟಪಟ್ಟು ಓದು ಅನ್ನೋದನ್ನು ಯಾಕೆ ಹೇಳುವುದಿಲ್ಲ ಅನ್ನೋದೇ ಚಿತ್ರದ ಒಟ್ಟಾರೆ ಸಾರಾಂಶ" ಎಂದು ನಿರ್ದೇಶಕರು ಹೇಳಿದ್ದಾರೆ.

Senior Director Nagathihalli Chandrashekar Released Newcomer Bun Tea Movie Trailer

ನೈಜ ಘಟನೆಯಿಂದ ಸ್ಫೂರ್ತಿ ಪಡೆದು ರೆಡಿಯಾಗಿರುವ ಸಿನಿಮಾ 'ಬನ್ ಟೀ'. ಈ ಸಿನಿಮಾಗೆ ಉದಯ್ ಕಥೆ ಬರೆದು ನಿರ್ದೇಶನದ ಜೊತೆಗೆ ಸಂಕಲನ ಕೂಡ ಮಾಡುತ್ತಿದ್ದಾರೆ. ಮೌರ್ಯ, ತನ್ಮಯ್, ಉಮೇಶ್ ಸಕ್ಕರೆನಾಡು, ಶ್ರೀದೇವಿ, ನಿಶಾ, ಗುಂಡಣ್ಣ, ಸುನಿಲ್ ನಟಿಸಿರುವ ಈ ಚಿತ್ರಕ್ಕೆ ರಾಧಾಕೃಷ್ಣ ಬ್ಯಾನರ್‌ನ ಆರ್ ಕೇಶವ ನಿರ್ಮಾಣ ಮಾಡಿದ್ದಾರೆ.

More from Filmibeat

English summary
Senior Director Nagathihalli Chandrashekar Released Newcomer Bun Tea Movie Trailer, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X