For Quick Alerts
  ALLOW NOTIFICATIONS  
  For Daily Alerts

  ಪೆಟ್ರೋಮ್ಯಾಕ್ಸ್ ಸೆಟ್‌ಗೆ ಭೇಟಿ ನೀಡಿದ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು

  |

  ಸತೀಶ್ ನೀನಾಸಂ ಮತ್ತು ನೀರ್‌ದೋಸೆ ಖ್ಯಾತಿಯ ವಿಜಯ್ ಪ್ರಸಾದ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಪೆಟ್ರೋಮ್ಯಾಕ್ಸ್ ಸಿನಿಮಾದ ಎರಡನೇ ಹಂತದ ಶೂಟಿಂಗ್ ನಡೆಯುತ್ತಿದೆ.

  ಮೈಸೂರಿನಲ್ಲಿ ಎರಡನೇ ಹಾಗೂ ಕೊನೆಯ ಹಂತದ ಚಿತ್ತೀಕರಣ ಸಾಗುತ್ತಿದ್ದು, ಸೆಟ್‌ಗೆ ಕನ್ನಡದ ಹಿರಿಯ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಭೇಟಿ ನೀಡಿದ್ದಾರೆ.

  2ನೇ ಹಂತದ ಚಿತ್ರೀಕರಣಕ್ಕೆ ಸಜ್ಜಾದ 'ರಾಜವೀರ ಮದಕರಿ ನಾಯಕ'; ಲೊಕೇಶನ್ ಹುಡುಕಾಟದಲ್ಲಿ ಚಿತ್ರತಂಡ2ನೇ ಹಂತದ ಚಿತ್ರೀಕರಣಕ್ಕೆ ಸಜ್ಜಾದ 'ರಾಜವೀರ ಮದಕರಿ ನಾಯಕ'; ಲೊಕೇಶನ್ ಹುಡುಕಾಟದಲ್ಲಿ ಚಿತ್ರತಂಡ

  ಈ ವೇಳೆ ನಿರ್ದೇಶಕ ವಿಜಯ್ ಪ್ರಸಾದ್, ನಟ ಸತೀಶ್ ನೀನಾಸಂ, ನಟಿ ಕಾರುಣ್ಯ ರಾಮ್ ಸೇರಿದಂತೆ ಇನ್ನಿತರ ಕೆಲವು ಕಲಾವಿದರು ಮತ್ತು ತಂತ್ರಜ್ಞರು ಭಾಗಿಯಾಗಿದ್ದರು.

  ಸತೀಶ್ ನೀನಾಸಂ ಜೊತೆ ಹರಿಪ್ರಿಯಾ ನಾಯಕಿಯಾಗಿ ನಟಿಸುತ್ತಿದ್ದು, ಈಗಾಗಲೇ ಮೈಸೂರಿನಲ್ಲಿ ಮೊದಲ ಶೆಡ್ಯೂಲ್ ಮುಗಿಸಿದ್ದರು. ಈಗ ಎರಡನೇ ಶೆಡ್ಯೂಲ್ ಡಿಸೆಂಬರ್ 14ರಿಂದ ಆರಂಭಿಸಿದ್ದರು.

  'ಪೆಟ್ರೋಮ್ಯಾಕ್ಸ್' ಕೊನೆಯ ಹಂತದ ಚಿತ್ರೀಕರಣ ಆರಂಭಿಸಿದ ಸತೀಶ್ ನೀನಾಸಂ'ಪೆಟ್ರೋಮ್ಯಾಕ್ಸ್' ಕೊನೆಯ ಹಂತದ ಚಿತ್ರೀಕರಣ ಆರಂಭಿಸಿದ ಸತೀಶ್ ನೀನಾಸಂ

  ಮತ್ತೊಂದೆಡೆ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಅವರು ದರ್ಶನ್ ಜೊತೆ ರಾಜವೀರ ಮದಕರಿ ನಾಯಕ ಸಿನಿಮಾ ಮಾಡ್ತಿದ್ದಾರೆ. ಕೇರಳದಲ್ಲಿ ಮೊದಲ ಹಂತದ ಚಿತ್ರೀಕರಣ ಮುಗಿಸಿದ್ದ ಚಿತ್ರತಂಡ ಈಗ ಎರಡನೇ ಹಂತಕ್ಕೆ ಲೋಕೆಶನ್ ಹುಡುಕಿದ್ದಾರೆ.

  Senior Director Rajendra Singh Babu visits the sets of Sathish Nenasams Petromax

  ಕುಮಟಾದ ಮಿರ್ಜಾನ್ ಕೋಟೆಯಲ್ಲಿ ಮದಕರಿ ನಾಯಕ ಶೂಟಿಂಗ್ ಮಾಡಲು ನಿರ್ಧರಿಸಲಾಗಿದೆ. ಆದ್ರೆ, ಯಾವಾಗ ಎಂಬ ಮಾಹಿತಿ ಸದ್ಯಕ್ಕಿಲ್ಲ. ಇನ್ನುಳಿದಂತೆ ಹಿರಿಯ ನಟ ದೊಡ್ಡಣ್ಣ, ಸುಮಲತಾ ಅಂಬರೀಶ್ ಸಹ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.

  ಕುಂಬಳ ಕಾಯಿ ಹೊಡೆದ ಪ್ರಶಾಂತ್ ನೀಲ್ ಅಂಡ್ ಟೀಮ್ | Filmibeat Kannada

  ರಾಕ್‌ಲೈನ್ ವೆಂಕಟೇಶ್‌ ರಾಜವೀರ ಮದಕರಿ ನಾಯಕ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. ಇದೀಗ, ಪೆಟ್ರೋಮ್ಯಾಕ್ಸ್ ಚಿತ್ರದ ಸೆಟ್‌ಗೆ ಹಿರಿಯ ಹಾಗೂ ಲೆಜೆಂಡ್ ನಿರ್ದೇಶಕ ಭೇಟಿ ನೀಡಿದ್ದರಂತೆ ಚಿತ್ರತಂಡ ಸಂತಸಗೊಂಡಿದೆ.

  English summary
  Senior Director Rajendra Singh Babu visits the sets of Sathish Nenasam's Petromax.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X